ಉದ್ಭವ ಗಣೇಶ ಮೂರ್ತಿಗೆ ಪೂಜೆ

ಕಲಬುರಗಿ: ಮೇ.3:ನಗರದ ಮಕ್ತಂಪುರ ಬಡಾವಣೆಯ ಹೋಳಿಕಟ್ಟಾದಲ್ಲಿ ಮರದ ಬಡ್ಡಿಯಲ್ಲಿ ಗಣೇಶ ಉದ್ಭವವಾಗಿದ್ದು ಅಚ್ಚರಿಯ ಸಂಗತಿಯಾಗಿದೆ ಬಡಾವಣೆಯ ಸಮಸ್ತ ಬಾಂದವರು ಉದ್ಭವ ಗಣೇಶನ ಮೂರ್ತಿಗೆ ಪೂಜೆ ಸಲ್ಲಿಸಿದರು
ಕೋರೋನ ಎಂಬ ಮಹಾಮಾರಿ ಇಡೀ ಜಗತ್ತಿಗೆ ಒಂದು ಕಂಟಕದ ಸಂಗತಿಯಾಗಿದ್ದು ಅದನ್ನು ಹೋಗಲಾಡಿಸಲು ವಿಘ್ನ ವಿನಾಶಕ ಗಣೇಶ ಮರದಲ್ಲಿ ಹುಟ್ಟಿ ಬಂದನೆಂಬ ನಮ್ಮಹಿಂದೂ ಸಂಪ್ರದಾಯದ ಸಂಸ್ಕøತಿ ನಂಬಿಕೆ ಜನರಲ್ಲಿ ಮೂಡಿದೆ ಈ ಕೋರೋನ ಮಹಾಮಾರಿಗೇ ಉದ್ಭವ ಗಣೇಶ ಹೋಗಲಾಡಿಸಲೆಂದು ಜನರು ಬೇಡಿಕೊಂಡರು.
ಈ ಸಂದರ್ಭದಲ್ಲಿ ಸಮಾಜ ಸೇವಕ ಚಂದ್ರಕಾಂತ ಕಾಳಗಿ, ಶರ್ಮಾಜಿ ಮಹೇಂದ್ರಕರ್ಜಿ ಕುಲಕರ್ಣಿ, ಮಹಾಂತೇಶ್ ಆಲೂರ್, ರಾಕೇಶ್, ಶರಣು, ಸಚಿನ್, ಶಿವಂ ಸ್ವರೂಪ್, ಸಂಗಮೇಶ ನಂದ್ಯಾಳ, ಹಾಗೂ ಸಮಸ್ತ ಮಕ್ತಂಪುರ ಬಡಾವಣೆಯ ನಾಗರಿಕರಿದ್ದರು.