ಉದ್ದಿಮೆ ಪರವಾನಿಗೆ ಶುಲ್ಕ ನವೀಕರಣ

ಕಲಬುರಗಿ ಏ.17: ಕಲಬುರಗಿ ಮಹಾನಗರ ಪಾಲಿಕೆಯು 2020-21ರ ಪರವಾನಿಗೆ ಶುಲ್ಕ ಪರಿಷ್ಕರಣೆಯ ದರಗಳ ಕರಡನ್ನು ತಯಾರಿಸಲಾಗಿದೆ ಎಂದು ಪಾಲಿಕೆಯ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ ನಗರ ವ್ಯಾಪ್ತಿಯಲ್ಲಿ ಬರುವ ಉದ್ದಿಮೆ ಪರವಾನಿಗೆ ಶುಲ್ಕ ನವೀಕರಿಸುವ ಕುರಿತು ಹಾಗೂ ಸದರಿ ದರಗಳ ಕರಡು ಕುರಿತು ಹೆಚ್ಚಿನ ಮಾಹಿತಿಯನ್ನು ಪಾಲಿಕೆಯ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ. ಆರೋಗ್ಯ ಶಾಖೆಯ ಕಛೇರಿಯ ಅವಧಿಯಲ್ಲಿ ಸಾರ್ವಜನಿಕರು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು. ಮಾಹಿತಿಯು ಪ್ರಕಟಣೆಯಾದ 7ದಿನಗಳ ನಂತರ ಸಾರ್ವಜನಿಕರಿಂದ ಬರುವ ಯಾವುದೇ ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಪಾಲಿಕೆಯ ವೆಬ್‍ಸೈಟ್ www.gulbargacity .mrc.gov.in ಗೆ, ಪಾಲಿಕೆಯ ಇ-ಅಂಚೆ ವಿಳಾಸ ltsaff_ulb gulbarga@yahoo.com ಗೆ, ಪಾಲಿಕೆಯ ವಾಟ್ಸಆಪ್ ಸಂಖ್ಯೆ- 82777 77728 ಗೆ ಹಾಗೂ ಪಾಲಿಕೆಯ ಟ್ರೋಲ್ ಫ್ರೀ ಸಂಖ್ಯೆ 08472-260776 ಸಂಪರ್ಕಿಸಲು ಕೋರಿದ್ದಾರೆ.