ಉದ್ದಿಮೆಗಳ ಮೇಲೆ ಸೋಂಕಿನ ಕರಿನೆರಳು

ನವದೆಹಲಿ,ಏ. ೧೯- ಕೊರೊನಾ ಸೋಂಕು ವಿವಿಧ ವಲಯಗಳ ಮೇಲೆ ಭಾರಿ ಹೊಡೆತ ಬಿದ್ದಿದೆ ಎನ್ನುವ ಸಂಗತಿ ಸಮೀಕ್ಷೆಯಿಂದ ಬಯಲಾಗಿದೆ
ಕೊರೊನಾ ಸೋಂಕಿನ ಪರಿಣಾಮ ವ್ಯಾಪಾರ ಮತ್ತು ವ್ಯವಹಾರದಲ್ಲಿ ತೊಂದರೆಯಿಂದ ಜನಸಾಮಾನ್ಯರ ಜತೆಗೆ ಸಂಸ್ಥೆಗಳು ಸಹ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿವೆ ಎನ್ನುವ ಸಂಗತಿ ಬೆಳಕಿಗೆ ಬಂದಿದೆ.
ಕೊರೋನಾ ತೊಂದರಯಿಂದ ಹೊರಬಂದು ಸಂಸ್ಥೆಗಳನ್ನು ಲಾಭದ ಕಡೆಗೆ ನಡೆಸುವ ಉದ್ದೇಶದಿಂದ ಸಾಕಷ್ಟು ಕಂಪನಿಗಳು ವಾರ್ಷಿಕ ಬಜೆಟ್ ನಲ್ಲಿ ಸಾಕಷ್ಟು ಮೊತ್ತವನ್ನು ಉತ್ಪನ್ನಗಳ ಪ್ರಚಾರಕ್ಕೆ ಕಾಯ್ದಿರಿಸಿದೆ. ಕ್ಲಾನ್ಕನೆಕ್ಟ್.ಎಐ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ ಶೇಕಡ ೬೦ ರಷ್ಟು ಸಂಸ್ಥೆಗಳು ಉತ್ಪನ್ನ ಪ್ರಚಾರಕ್ಕಾಗಿ ದೊಡ್ಡ ಮೊತ್ತವನ್ನು ನಿಗದಿಪಡಿಸಿವೆ ಸಂಸ್ಥೆಯ
ಸಿಒಒ ಕುನಾಲ್ ಕಿಶೋರ್ ಸಿನ್ಹಾ ಹೇಳಿದ್ದಾರೆ.
ಸಮೀಕ್ಷೆಯ ಪ್ರಕಾರಶೇಕಡ ೭೮ ರಷ್ಟು ಮಾರ್ಕೆಟಿಂಗ್ ನಾಯಕರು ೨೦೨೦ ರಲ್ಲಿ ಪ್ರಭಾವಶಾಲಿ ಮಾರ್ಕೆಟಿಂಗ್ ಅನ್ನು ನಿಯಂತ್ರಿಸಲು ಶೇಕಡ ೧೩ ಕ್ಕಿಂತಲೂ ಹೆಚ್ಚು ಜನರು ೨೦೨೦ ರಲ್ಲಿ ಮೊದಲ ಬಾರಿಗೆ ಪ್ರಭಾವಶಾಲಿ ಚಟುವಟಿಕೆಯನ್ನು ಪ್ರಾರಂಭಿಸಿದ್ದಾರೆ.ಕುತೂಹಲಕಾರಿಯಾಗಿ ಶೇಕಡ ೫೨ ರಷ್ಟು ಬ್ರ್ಯಾಂಡ್‌ಗಳು ೨೦೨೦ ರಲ್ಲಿ ೧೦ ಕ್ಕೂ ಹೆಚ್ಚು ಪ್ರಭಾವಶಾಲಿಯಾಗಿವೆ