ಉದ್ದಿನ ಹಿಟ್ಟಿನ ಬೋಂಡಾ

ಪದಾರ್ಥಗಳು
ಉದ್ದಿನಹಿಟ್ಟು – ೧ ಲೋಟ
ಕರಿಬೇವು ಹೆಚ್ಚಿದ್ದು – ಸ್ವಲ್ಪ
ಕೊತ್ತಂಬರಿಸೊಪ್ಪು ಹೆಚ್ಚಿದ್ದು – ಸ್ವಲ್ಪ
ಹಸಿಮೆಣಸಿನಕಾಯಿ ಹೆಚ್ಚಿದ್ದು – ಸ್ವಲ್ಪ
ಶುಂಠಿ ಹೆಚ್ಚಿದ್ದು -ಸ್ವಲ್ಪ
ಹಸಿಕಾಯಿ ಹೆಚ್ಚಿದ್ದು -ಸ್ವಲ್ಪ
ಈರುಳ್ಳಿ ಹೆಚ್ಚಿದ್ದು -ಸ್ವಲ್ಪ
ಉಪ್ಪು
ಇಂಗಿನ ಪುಡಿ
ವಿಧಾನ :- ಮೊದಲು ಹಿಟ್ಟಿಗೆ ನೀರು ಹಾಕಿ ಗಂಟಾದಾಗ ಹಾಗೆ ಗಟ್ಟಿಯಾಗಿ ಮಿಶ್ರಣ ಕಲೆಸಿ, ನಂತರ ಮೇಲಿನ ಪದಾರ್ಥಗಳನ್ನು ಹಾಕಿ, ಚೆನ್ನಾಗಿ ಕಲೆಸಿ ೧೦ ನಿಮಿಷ ಬಿಟ್ಟು ಉಂಡೆ ಮಾಡಿ ಎಣ್ಣೆಯಲ್ಲಿ ಕರಿಯಬೇಕು.