ಉದ್ದಿನ ಬೇಳೆಯ ಚಕ್ಕುಲಿ ಮಾಡುವ ವಿಧಾನ

ಚಕ್ಕುಲಿ ಅಥವಾ ಚಕ್ಲಿ ಭಾರತ ಮತ್ತು ಶ್ರೀಲಂಕಾದ ಒಂದು ರುಚಿಯಾದ ತಿನಿಸು. ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ಇರುವ ಫಿಜಿ ಮತ್ತು ಮಲೇಶಿಯ ದೇಶಗಳಲ್ಲೂ ಕೂಡ ಇದು ಪರಿಚಿತ. ಚಕ್ಕುಲಿ ದಕ್ಷಿಣ ಮತ್ತು ಪಶ್ಚಿಮ ಭಾರತ ಮೂಲದ ತಿನಿಸಾಗಿದೆ.ಇದರ ರುಚಿ ಮತ್ತು ಸುಲಭ ತಯಾರಿಕೆಯಿಂದಾಗಿ ಈಗ ಇದು ಎಲ್ಲಾ ಕಡೆಗಳಲ್ಲೂ ತಯಾರಾಗುವ ತಿಂಡಿಯಾಗಿದೆ. ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ ಇದು ಹೆಚ್ಚು ಪ್ರಚಲಿತವಾಗಿದೆ

ಬೇಕಾಗುವ ಸಾಮಗ್ರಿಗಳು:
ಉದ್ದಿನಬೇಳೆ – ೧/೨ ಕಪ್
ಅಕ್ಕಿ ಹಿಟ್ಟು – ಎರಡೂವರೆ ಕಪ್
ಖಾರದ ೨ ಚಮಚ
ಜೀರಿಗೆ ೧ ಚಮಚ
ಎಣ್ಣೆ
ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ:

  • * ಉದ್ದಿನಬೇಳೆಯನ್ನು ೧ ಕಪ್ ನೀರು ಸೇರಿಸಿ ಕುಕ್ಕರ್ ನಲ್ಲಿ ಬೇಯಿಸಿಕೊಂಡು, ತಣ್ಣಗಾದ ನಂತರ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಬೇಕು.
  • * ರುಬ್ಬಿದ ಹಿಟ್ಟು ದೋಸೆ ಹಿಟ್ಟಿನ ಹದದಲ್ಲಿರಲಿ.
  • * ಈಗ ರುಬ್ಬಿಕೊಂಡ ಉದ್ದಿನ ಹಿಟ್ಟಿಗೆ ಉಪ್ಪು, ಖಾರದ ಪುಡಿ, ಜೀರಿಗೆ, ಅಕ್ಕಿಹಿಟ್ಟು ಸೇರಿಸಿ ಗಟ್ಟಿಯಾಗಿ ಕಲೆಸಿ. ಹಿಟ್ಟು ಸ್ವಲ್ಪ ನೀರು-ನೀರಾಗಿದ್ದರೆ ಇನ್ನೂ ಸ್ವಲ್ಪ ಅಕ್ಕಿ ಹಿಟ್ಟು ಹಾಕಿ ಕಲೆಸಿ.
  • * ಕಲೆಸಿಕೊಂಡ ಹಿಟ್ಟನ್ನು ಚಕ್ಕುಲಿ ಒರಳಿನಲ್ಲಿ ಒತ್ತಿ, ಚಕ್ಕುಲಿಗಳನ್ನು ತಯಾರಿಸಿ ಕಾದ ಎಣ್ಣೆಯಲ್ಲಿ ಗರಿಯಾಗಿ ಕರಿದರೆ ರುಚಿರುಚಿಯಾದ ಚಕ್ಕುಲಿ ರೆಡಿ.