ಉದ್ಘಾಟನೆ-ಬೀಳ್ಕೊಡುಗೆ


ಹುಬ್ಬಳ್ಳಿ, ಜು 5: ಹುಬ್ಬಳ್ಳಿ ವಕೀಲರ ಸಂಘದ ಆವರಣದಲ್ಲಿ ಜಿ. ಸೇವಾ ಕೇಂದ್ರವನ್ನು 1ನೇ ಹೆಚ್ಚುವರಿ ಜಿಲ್ಲಾ ವ ಸತ್ರ ನ್ಯಾಯಾಧೀಶರಾದ ಬಿ. ಪರಮೇಶ್ವರ ಪ್ರಸನ್ನ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಹುಬ್ಬಳ್ಳಿ ಕೌಟುಂಬಿಕ ನ್ಯಾಯಾಲಯ ನ್ಯಾಯಾಧೀಶರಾಗಿ ಆಗಮಿಸಿದ ರವೀಂದ್ರ ಆರಿ, ಪ್ರಧಾನ ಕೌಟುಂಬಿಕ ನ್ಯಾಯಾಧೀಶರಾಗಿ ಮುಂಬಡ್ತಿ ಪಡೆದ ಶ್ರೀಮತಿ ಇಂದಿರಾ ಶೆಟ್ಟಿಯಾರ ಅವರನ್ನು ಬರಮಾಡಿಕೊಳ್ಳಲಾಯಿತು.
ಸೇವಾ ನಿವೃತ್ತಿ ಪಡೆದ ಜಿಲ್ಲಾ ವ ಸತ್ರ ನ್ಯಾಯಾಧೀಶರ ಅಭಿಯೋಜಕರಾಗಿದ್ದ ಶ್ರೀಮತಿ ಸುಮಿತ್ರಾ ಅಂಚಟಗೇರಿಯವರನ್ನು ಸತ್ಕರಿಸಿ ಬೀಳ್ಕೊಡಲಾಯಿತು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಸಿ.ಆರ್. ಪಾಟೀಲ ವಹಿಸಿದ್ದರು. ನ್ಯಾಯಾಧೀಶರಾದ ಶ್ರೀಮತಿ ಇಂದಿರಾ ಮೇಲಸ್ವಾಮಿ ಶೆಟ್ಟಿಯಾರ, ಎಸ್.ಡಿ. ಹಂದ್ರಾಳೆ, ಆರ್.ಎಸ್. ಚಿನ್ನಣ್ಣವರ, ರಾಘವೇಂದ್ರ ಆರ್, ಗಣಪತಿ ಪ್ರಸಾದ ಎಂ., ಕುಮಾರಿ ಪ್ರಿಯಾ ಕೆ, ನಾಗೇಶ ನಾಯ್ಕ, ರಕ್ಷಿತಾ ಎಸ್, ಅನುರಾಧಾ, ತ್ರಿವೇಣಿ ಮತ್ತಿತರರು ಉಪಸ್ಥಿತರಿದ್ದರು.