ಹುಬ್ಬಳ್ಳಿ,ಜು.3:ಸ್ಮಾರ್ಟ ಕೋ ಆಪರೇಟಿವ ಕ್ರೆಡಿಟ್ ಸೊಸೈಟಿ ಉದ್ಘಾಟನಾ ಸಮಾರಂಭ ಹುಬ್ಬಳ್ಳಿಯ ವಿದ್ಯಾನಗರ ಅಸ್ಟ್ರಾ ಟಾವರ ಸಿದ್ದೇಶ್ವರ ಪಾರ್ಕ ಬಳಿ, ಹಾರನಹಳ್ಳಿಯ ಕೋಡಿಮಠದ ಡಾ: ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳವರಿಂದ ನೆರವೇರಿತು. ಸಮಾರಂಭದಲ್ಲಿ ಮಾತನಾಡಿದ ಶ್ರೀಗಳು ಪ್ರತಿಯೊಬ್ಬರು ಸಹಕಾರ ಮನೋಭಾವ ಹೊಂದುವುದು ಅವಶ್ಯ. ಸಹಕಾರಿ ಸಂಘಗಳ ಸಣ್ಣ ಉದ್ದಿಮೆದಾರರಿಗೆ ಸಣ್ಣ ವ್ಯಾಪಾರ ವಹಿವಾಟು ನಡೆಸುವವರಿಗೆ ಸಂಕಷ್ಟದಲ್ಲಿರುವವರಿಗೆ ಹೆಚ್ಚಿನ ಅನುಕೂಲವಾಗಿದೆ. ಹಾಗೇಯೆ ನಿಡಿದ ಸಾಲ ಮರುಪಾವತಿಯಾಗುವಂತೆ ನೊಡಿಕೊಳ್ಳಬೇಕು. ಯಾವ ಉದ್ದೇಶಕ್ಕಾಗಿ ಸಾಲ ಪಡೆದಿರುತ್ತಾರೊ ಅದಕ್ಕೆ ಸರಿಯಾಗಿ ಬಳಕೆಯಾದಾಗ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಬೊಮ್ಮನಹಳ್ಳಿ ವಿರಕ್ತಮಠದ ಶಿವಯೊಗಿ ಶ್ರೀಗಳು ಮುಖ್ಯ ಅತಿಥಿಗಳಾಗಿ
ಸುರೇಶ ಕೆ.ಚೆನ್ನಿ, ಚಾರ್ಟಡ್ ಅಕೌಂಟಂಟ್, ಶ್ರೀಮತಿ ರಂಜನಾ ಪೋಳ, ಸಹಕಾರಿ ಸಂಘದ ಉಪನೊಂದಣಾಧಿಕಾರಿಗಳು ಧಾರವಾಡ, ಅಧ್ಯಕ್ಷರು ಅಶೋಕ ವಿ. ಪಾಟೀಲ ಉಪಾಧ್ಯಕ್ಷ ಆನಂದ ಮದಲಬಾವಿ ನಿರ್ದೇಶಕರುಗಳಾದ ಸುರೇಶ ಜಾಲಿ, ಎಸ.ಎಂ. ಸಂದಿಗವಾಡ, ಸುಭಾಷ ಸಾಲಿಯಾನ್, ವೀರಣ್ಣ ಹಂಚಿನ, ಮಹಾದೇವ ಹಬೀಬ, ಕಿರಣ ಕೆಂಡದಮಠ, ಬಸವರಾಜ ಕಲ್ಯಾಣಶೆಟ್ಟರ, ವಿನಯ ಹುಲ್ಲೂರು, ಶೇಖರ ಕರ್ಲೆಕ್ಕನವರ, ಬಸವರಾಜ ಜಂತ್ಲಿ, ಅಶಾ ಪುಡಕಲಕಟ್ಟಿ, ಶ್ವೇತಾ ಕಾಡದೇವರಮಠ, ಶ್ವೇತಾ ಹಕ್ಕಾಪಿಕ್ಕಿ, ಉಪಸ್ಥಿತರಿದ್ದು ಶ್ರೀಗಳಿಂದ ಸತ್ಕಾರ ಆಶೀರ್ವಾದ ಸ್ವೀಕರಿಸಿದರು.