ಉದಾಸಿ ನಿಧನಕ್ಕೆ ಜ್ಯಾಂತಿಕರ್ ಕಂಬನಿ

ಬೀದರ:ಜೂ.9: ಮಾಜಿ ಸಚಿವರೂ ಹಾಗೂ ಹಾಲಿ ಶಾಸಕ ದಿ. ಸಿ.ಎಂ ಉದಾಸಿ ಅವರ ನಿಧನರಾಗಿರುವ ವಿಷಯ ನಮ್ಮ ಪಕ್ಷಕ್ಕೆ ತುಂಬಲಾತದ ನಷ್ಟವುಂಟಾಗಿದೆ ಎಂದು ಬಿಜೆಪಿ ಮುಖಂಡರು ಹಾಗೂ ಕಲ್ಯಾಣ ಪತ್ತಿನ ಸೌಹಾರ್ದ ಸಹಕಾರ ಸಂಘದ ಜಿಲ್ಲಾಧ್ಯಕ್ಷ ಗುರುನಾಥ ಜ್ಯಾಂತಿಕರ್ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿದ ಅವರು, ಉದಾಸಿ ಅವರು ಶಾಸಕರಾಗಿ, ಕ್ರೀಯಾಶಿಲ ಸಚಿವರಾಗಿ, ಬಹು ಭಾಷಾ ಪಂಡಿತರಾಗಿ ತಮ್ಮ ವ್ಯಾಪಾರದ ಉದ್ದಿಮೆಯ ಮೂಲಕ ರಾಜಕೀಯ ಕ್ಷೇತ್ರದ ಪ್ರವೇಶ ಪಡೆದು 1983ರಲ್ಲಿ ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿದ್ದರು. ರಾಜಕೀಯ ಕ್ಷೇತ್ರದಲ್ಲದೆ ಸಹಕಾರಿ ರಂಗದಲ್ಲಿ ತನ್ನದೆ ಆದ ಸೇವೆ ಸಲ್ಲಿಸಿ ಸಹಕಾರ ಕ್ಷೇತ್ರದ ಏಳಿಗೆಗಾಗಿ ತನ್ನನ್ನು ತಾನು ತೋಡಗಿಸಿಕೊಂಡಿದ್ದÀರು. ರಾಜ್ಯದ ವಿವಿಧ ರಂಗದಲ್ಲಿ ಗುರುತಿಸಿಕೊಂಡಿದ್ದÀರು. ಇವರ ಅಗಲಿಕೆಯು ರಾಜ್ಯದ ಜನತೆಗೆ ತುಂಬಲಾರದ ನಷ್ಟವಾಗಿದೆ. ಇವರ ಆತ್ಮಕ್ಕೆ ಶಾಂತಿ ಸಿಗಲಿ ಇವರ ಅಗಲಿಕೆಯಿಂದ ಆಗಿರುವ ನೋವು ಭರಿಸುವ ಶಕ್ತಿ ಅವರ ಕುಟುಂಬದ ಸದಸ್ಯರಿಗೆ, ಸ್ನೇಹಿತರಿಗೆ ಹಾಗೂ ಬಂಧುಮಿತ್ರರಿಗೆ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಜ್ಯಾಂತಿಕರ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ.