ಉದಯ್‌ಕುಮಾರ್‌ಗೆ ಅಭಿನಂದನೆ

ಕೋಲಾರ ಸೆ.೧೭- ನಗರದ ಸಹ್ಯಾದ್ರಿ ಸಮೂಹ ಸಂಸ್ಥೆಯ ಅಧ್ಯಕ್ಷರು ಹಾಗೂ ಜಿಲ್ಲಾ ತಿಗಳ ಜನಾಂಗದ ಸಮನ್ವಯ ಸಮಿತಿಯ ಅಧ್ಯಕ್ಷರಾದ ಎಂ.ಉದಯ್‌ಕುಮಾರ್‌ರವರನ್ನು ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರನ್ನಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಕೋಲಾರ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಲಾಯಿತು..
ಇದೇ ಸಂದರ್ಭದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಪದಾಧಿಕಾರಿಗಳಾದ ಪ್ರಸಾದ್ ಬಾಬು, ಎನ್.ಪಲ್ಗುಣ ಕಲಾವಿದ ವಿಷ್ಣು, ಸದಸ್ಯರಾದ ಶಂಕರ್ ಕೊಂಡೆ, ರಾಜಾರಾವ್, ವೇಣು, ಕೃಷ್ಣ, ದೀಪು, ರಾಜೇಶ್ ಸಿಂಗ್, ಯುವರಾಜ್ ಮತ್ತಿತರರು ಹಾಜರಿದ್ದರು.