ಉದಯಪುರದ ಎಐಸಿಸಿ ಸಭೆಯಲ್ಲಿ  ಬಳ್ಳಾರಿಯ ಕಾಂಗ್ರೆಸ್ ಮುಖಂಡರು

(ಸಂಜೆವಾಣಿ ವಾರ್ತೆ)
ಬಳ್ಳಾರಿ ಮೇ 14 : ಮೂರು ದಿನಗಳ ಕಾಲ  ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿರುವ ಭಾರತ ರಾಷ್ಟ್ರೀಯ ಕಾಂಗ್ರೆಸ್‍ನ ನವ ಸಂಕಲ್ಪ ಚಿಂತನಾ
ಶಿಬಿರದಲ್ಲಿ ಪಕ್ಷದ ಹಿರಿಯ
ನಾಯಕರೊಂದಿಗೆ ಬಳ್ಳಾರಿ ಮುಖಂಡರು ಸಹ ಪಾಲ್ಗೊಂಡಿದ್ದಾರೆ. ಎಐಸಿಸಿ ಮಾಧ್ಯಮ ವಕ್ತಾರ, ರಾಜ್ಯಸಭಾ ಸದಸ್ಯ
ಡಾ||ಸೈಯದ್ ನಾಸಿರ್ ಹುಸೇನ್, ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ ಮೊದಲಾದವರು ಈ ಸಮಾವೇಶದಲ್ಲಿ  ಪಾಲ್ಗೊಂಡಿದ್ದಾರೆ.
ರಾಜ್ಯಸಭೆಯ ವಿರೋಧ ಪಕ್ಷದ ನಾಯಕ  ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ
ಕಾರ್ಯದರ್ಶಿ ಮಧುಸೂದನ್‍ಮಿಸ್ತ್ರಿ, ರಾಜ್ಯದ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ
ಡಿ.ಕೆ.ಶಿವಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಮತ್ತಿತರರು ಸಹ ಪಾಲ್ಗೊಂಡಿದ್ದಾರೆ.