ಉದಯನಿಧಿ ಹೇಳಿಕೆ ಖಂಡಿಸಿ ಬಜರಂಗ ದಳದಿಂದ ಪ್ರತಿಭಟನೆ

ಮಾಲೂರು, ಸೆ.೭- ಸನಾತನ ಹಿಂದೂ ಧರ್ಮವನ್ನು ನಾಶ ಮಾಡಬೇಕು ಎಂಬ ಹೇಳಿಕೆ ನೀಡಿರುವ ತಮಿಳುನಾಡು ಸಚಿವ ಉದಯ್ ನಿಧಿ ಸ್ಟಾಲಿನ್ ಹೇಳಿಕೆ ಖಂಡಿಸಿ ಪಟ್ಟಣದ ಮಹಾರಾಜ ವೃತ್ವದಲ್ಲಿ ಭಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಉದಯನಿಧಿ ಸ್ಟಾಲಿನ್ ವಿರುದ್ಧ ದಿಕ್ಕಾರಗಳನ್ನು ಕೂಗಿ ಪ್ರತಿಕೃತಿ ದಹಿಸಿದ್ದರು. ಹಿಂದೂ ಧರ್ಮವೂ ಸನಾತನವಾದದ್ದು ಆದರೆ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಕಾರ್ಯಕ್ರಮ ಒಂದರಲ್ಲಿ ಸನಾತನ ಹಿಂದೂ ಧರ್ಮವನ್ನು ನಾಶ ಮಾಡಬೇಕು ಎಂಬ ಹೇಳಿಕೆ ನೀಡಿ ಸಮಾಜದಲ್ಲಿ ಸಾಮರಸ್ಯವನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದು ಅವರ ಹೇಳಿಕೆಯನ್ನು ಭಜರಂಗದಳ ತೀವ್ರವಾಗಿ ಖಂಡಿಸುತ್ತದೆ. ಹಿಂದೂ ಧರ್ಮವನ್ನು ಯಾರು ಸಹ ನಾಶ ಮಾಡಲು ಸಾಧ್ಯವಿಲ್ಲ ಸ್ಟಾಲಿನ್ ವಿರುದ್ಧ ದಿಕ್ಕಾರಗಳನ್ನು ಕೂಗಿ ಪ್ರತಿ ಕೃತಿ ದಹಿಸಿದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಬಾನು ತೇಜ, ಭಜರಂಗದಳದ ಕಾರ್ಯಕರ್ತರಾದ ಚೇತನ್, ರವಿ, ಜೈ ಶಂಕರ್, ಸಂಪತ್, ಉಮೇಶ್, ಇನ್ನಿತರರು ಹಾಜರಿದ್ದರು.