ಉತ್ಸಾಹ ಭರಿತ ಮತದಾರನ ಮತದಾನ

ವಾಡಿ.ಡಿ.27: ರಾಜ್ಯವ್ಯಾಪಿ ನಡೆಯುತ್ತಿರುವ 2ನೇ ಹಂತದ ಮತದಾನಕ್ಕೆ ಮತದಾರ ಪ್ರಭು ರವಿವಾರ ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿರುವುದು ಕಂಡು ಬಂತು.

ಚಿತ್ತಾಪೂರ ತಾಲ್ಲೂಕಿನ ಇಂಗಳಗಿ, ಕಮರವಾಡಿ, ಲಾಡ್ಲಾಪೂರ, ಹಲಕಟ್ಟಾ, ನಾಲವಾರ, ಕಡಬೂರ, ಗ್ರಾಮಗಳಲ್ಲಿ ಬೆಳಗ್ಗೆ, ಬೆಳಗ್ಗೆ ಚುಮ-ಚುಮ ಚಳಿಯ ಮಧ್ಯೆಯು ಮತದಾರ ಅತ್ಯಂತ ಉತ್ಸಾಹ ಭರಿತವಾಗಿ ಮತದಾನ ಮಾಡುವ ದೃಶ್ಯ ವಿಶೇಷವಾಗಿತ್ತು.

ಗ್ರಾಮಗಳಲ್ಲಿ ಪಂಚಾಯತ ಎಲೆಕ್ಷನ್ ಪ್ರತಿಷ್ಠೆಯ ಕಣವಾಗಿದ್ದು, ಅಭ್ಯರ್ಥಿಗಳು ಶನಿವಾರ ಸಾಯಾಕಾಂಲದವರೆಗೆ ಮತದಾರನ ಮನವೊಲಿಸುವ ನಿರಂತರ ಪ್ರಯತ್ನ ನಡೆದವು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗುಪ್ತ ಮತದಾನಕ್ಕೆ ಅವಕಾಶ ನೀಡಿದ್ದು, ಮತದಾರ ಪ್ರಭು ಯಾವುದೇ ಆಮಿಷಕ್ಕೆ ಒಳಗಾಗದೆ ತಮ್ಮಗೆ ಇಚ್ಛೆವುಳ್ಳ ಅಭ್ಯರ್ಥಿಗೆ ಮತವನ್ನು ದಾನ ಮಾಡಬಹುದಾಗಿದೆ. ಅಭ್ಯರ್ಥಿಗಳು ಏಷ್ಟೇ ಪ್ರಚಾರ ಮಾಡಿದರು, ಮತದಾರ ಮಾತ್ರ ಸೈಲೆಂಟಾಗಿದ್ದಾನೆ. ಎಲ್ಲಾ ಅಭ್ಯರ್ಥಿಗಳಿಗೆ ಒಕೆ ಅಂತಾ ಹೇಳಿದ್ದು, ಮತದಾರನ ಮತ ಯಾರಿಗೆ ಎಂಬ ಗೊಂದಲದಲ್ಲಿ ಅಭ್ಯರ್ಥಿಗಳ ಎದೆಬಡಿತ ಜೋರಾಗಿದೆ.