ಉತ್ಸಾಹಿಗಳಿಗೆ ಈ ಜಗತ್ತಿನಲ್ಲಿ ಸಾಧಿಸಲಾಗದ್ದು ಯಾವುದೂ ಇಲ್ಲ


ಸಿರುಗುಪ್ಪ : “ವಿದ್ಯಾರ್ಥಿಗಳಿಗೆ ಕಲಿಕೆ ಮತ್ತು ಗುರಿ ಸಾಧಿಸುವ ಉತ್ಸಾಹಕ್ಕಿಂತ ಹೆಚ್ಚಿನ ಶಕ್ತಿ ಬೇರೊಂದಿಲ್ಲ, ಉತ್ಸಾಹಿಗಳಿಗೆ ಈ ಜಗತ್ತಿನಲ್ಲಿ ಸಾಧಿಸಲಾಗದ್ದು ಯಾವುದೂ ಇಲ್ಲ” ಎಂದು ಪ್ರಾಂಶುಪಾಲ ಜಿ.ಕೊಟ್ರಪ್ಪ ಹೇಳಿದರು.
ನಗರದ ಟಿ.ಎಸ್.ಎಚ್.ಎಂ.ಎಸ್.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ “ಸಾಧನೆಗೆ ಪ್ರೇರಣೆ” ಕಾರ್ಯಕ್ರಮದಲ್ಲಿ ಮಾತನಾಡಿದರು.
ಪದವಿ ಮುಗಿಸಿಕೊಂಡು ನಂತರ ಸರ್ಕಾರ ಮತ್ತು ಖಾಸಗಿಯಲ್ಲಿ ವಿವಿಧ ಸ್ಪರ್ಧಾತ್ಮಕ ಪರಿಕ್ಷೆಗಳಿಗೆ ತರಬೇತಿಯನ್ನು ಪಡೆದುಕೊಂಡು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಿರಂತರ ಅಧ್ಯಾಯನದೊಂದಿಗೆ ಗುರುಗಳ ಮಾರ್ಗದರ್ಶನದಿಂದ ಗುರಿಯನ್ನು ಮುಟ್ಟುವ ಕೆಲಸ ಪ್ರತಿಯೊಬ್ಬ ವಿದ್ಯಾರ್ಥಿಗಳ ಸಾಧನೆಯಾಗಬೇಕು, ಕಲಿಸಿದವರಿಗೆ ಮತ್ತು ಪೋಷಕರಿಗೆ ಹೆಮ್ಮೆಯಾಗುತ್ತದೆ.
ಇದೇ ಕಾಲೇಜಿನಲ್ಲಿ 2017-18 ಶೈಕ್ಷಣಿಕ ಸಾಲಿನಲ್ಲಿ ಬಿ.ಕಾಂ ಪದವಿ ಓದಿ ಇತ್ತಿಚೆಗೆ ಕೆ.ಪಿ.ಎಸ್.ಸಿಯಲ್ಲಿ ಲೆಕ್ಕಪರಿಶೋಧಕರಾಗಿ ಆಯ್ಕೆಯಾದ ಬಸವರಾಜ, ಮಹೇಶ, ಜ್ಯೋತಿಗೆ  ಕಾಲೇಜ್ ವತಿಯಿಂದ ಸನ್ಮಾನಿಸಿ ಗೌರವಿಸಿದರು.
ಗ್ರಂಥಾಪಾಲಕ ಯಮುನೂರಪ್ಪ, ಉಪನ್ಯಾಸಕರಾದ ಡಾ.ಎಸ್.ಮಹೇಶ್ವರಿ, ಪವನಕುಮಾರ್, ಬಸಪ್ಪ, ವಸಂತ, ಜಯಲಕ್ಷ್ಮಿ, ಉಷಾ, ಹರೀಶ, ರುದ್ರಪ್ಪ, ರಾಮಣ್ಣ, ರಾಜಶೇಖರ ಹಾಗೂ ವಿದ್ಯಾರ್ಥಿಗಳು ಇದ್ದರು.