ಉತ್ಸಾಹದಿಂದ ಶಾಲೆಗೆ ಬಂದ ಮಕ್ಕಳು

ಗಬ್ಬೂರು.ಜ.೦೭-ಆರನೇ, ಏಳನೇ, ಮತ್ತು ಎಂಟನೇ ತರಗತಿ ಹಾಗೂ ಪರಿಷ್ಕೃತ ವಿದ್ಯಾಗಮ ಭಾಗ-೨ ತರಗತಿಗಳಿಗೆ ವಿದ್ಯಾರ್ಥಿಗಳು ಭಯ ಬಿಟ್ಟು ಉತ್ಸಾಹದಿಂದ ಹಾಜರಾಗಿದ್ದಾರೆ ಎಂದು ದೇವದುರ್ಗ ತಾಲೂಕಿನ ಸುಂಕೇಶ್ವರಹಾಳ ಕ್ಲಸ್ಟರ್ ವ್ಯಾಪ್ತಿಯಲ್ಲಿ ಬರುವ ಶಾವಂತಗೇರಾ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮಹೇಶ ಮತ್ತು ಸಹ ಶಿಕ್ಷಕಿಯರಾದ ರೂಪಾ, ಶೈಲಜಾ, ಜಯಶ್ರೀ ದೇಸಾಯಿ ಹೇಳಿದರು.
ಶಾಲೆಯಲ್ಲಿ ಒಟ್ಟು ೬೩ ವಿದ್ಯಾರ್ಥಿಗಳಲ್ಲಿ ೩೧ ವಿದ್ಯಾರ್ಥಿಗಳು ವಿದ್ಯಾಗಮ ತರಗತಿಗೆ ಹಾಜರಾಗಿದ್ದಾರೆ. ಕೊರೋನಾದ ಭಯ ಮತ್ತು ಆತಂಕ ಇಲ್ಲದೆ ಖುಷಿಯಿಂದ ತರಗತಿಗೆ ಬರುತ್ತಿದ್ದಾರೆ. ಸರ್ಕಾರದ ಆದೇಶದಂತೆ ಸ್ಯಾನಿಟೈಸರ್, ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಂಡು ತರಗತಿಗಳನ್ನು ಆರಂಭಿಸಿಲಾಗಿದೆ ಎಂದು ಸಿ.ಆರ್. ಪಿ ವೆಂಕಟಾಂಜೀನೆಯ್ಯ ಅವರು ಮಾಹಿತಿ ನೀಡಿದರು.