ಉತ್ಸಾಹದಿಂದ ಪಾಠ ಮಾಡಿ:ಶಾಹಾಬಾದಕರ್

ಬೀದರ:ಜ.12:ಪದವಿ ಪೂರ್ವ ಶಿಕ್ಷಣ ಇಲಾಖೆಗೆ ನೂತನವಾಗಿ ನೇಮಕಗೊಂಡ ಉಪನ್ಯಾಸಕರು ಶ್ರದ್ಧೆ,ಭಕ್ತಿ,ನಿಷ್ಠೆಯಿಂದ ಮಕ್ಕಳ ಮನಸ್ಸು ಅರಳುವಂತೆ ಉತ್ಸಾಹದಿಂದ ಬೋಧನೆ ಮಾಡಬೇಕು ಎಂದು ಬೀದರ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಂದ್ರಕಾಂತ ಶಾಹಾಬಾದಕರ್ ಸಲಹೆ ನೀಡಿದರು.
ನೌಬಾದನಲ್ಲಿರುವ ಡಯಟ್‍ನಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು ಮತ್ತು ಬೀದರ ಹಾಗೂ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ಹೊಸದಾಗಿ ನೇಮಕಗೊಂಡ ಉಪನ್ಯಾಸಕರಿಗಾಗಿ ಜ.04ರಿಂದ 10ರವರೆಗೆ ಹಮ್ಮಿಕೊಂಡ ಇಂಡಕ್ಷನ(ಬುನಾದಿ) ತರಬೇತಿ ಕಾರ್ಯಾಗಾರÀದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು,ಬೋಧನೆ ಒಂದು ಕಲೆಯಾಗಿದೆ.ಪರಿಣಾಮಕಾರಿ ಬೋಧನೆಗಾಗಿ ಉಪನ್ಯಾಸಕರು ವರ್ಗ ಕೋಣೆಗೆ ಹೋಗುವ ಮುಂಚೆ ಕನಿಷ್ಠ ಒಂದು ತಾಸ್‍ದಾರು ಪೂರ್ವ ಸಿದ್ಧತೆ ಮಾಡಿಕೊಂಡಿರಬೇಕು.ಶಿಕ್ಷಕರು ನಿರಂತರ ವಿದ್ಯಾರ್ಥಿ ಎಂಬುದನ್ನು ಮರೆಯಬಾರದು.ಬದಲಾದ ಪ್ರಚಲಿತ ಪಠ್ಯವನ್ನು ಕರಗತ ಮಾಡಿಕೊಂಡು,ಇಲಾಖೆ ನಿಯಮಗಳನ್ನು ಅರ್ಥೈಸಿಕೊಂಡು ಪಾಠ ಪ್ರವಚನ ಮಾಡಿ ಫಲಿತಾಂಶ ಸುಧಾರಿಸಬಹುದು.ಸರಳತೆ ಮತ್ತು ಶಾಂತತೆ ಮೈಗೂಡಿಸಿಕೊಂಡು ವಿದ್ಯಾರ್ಥಿಗಳ ಮನಸ್ಸನ್ನು ಆಕರ್ಷಿಸಿಕೊಳ್ಳಬೇಕು ಎಂದು ಬಹುಮಾರ್ಮಿಕವಾಗಿ ನುಡಿದರು.
ನೋಡಲ್ ಅಧಿಕಾರಿ ಕುಶಾಲರಾವ ಪಾಟೀಲ ಮಾತನಾಡಿ,ಬದಲಾದ ಪಠ್ಯಕ್ರಮ ಮತ್ತು ಸೇವಾ ನಿಯಮಕ್ಕನುಗುಣವಾಗಿ ಬುನಾದಿ ತರಬೇತಿಯಲ್ಲಿ ತಮಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.
ವಿಶ್ರಾಂತ ಪ್ರಾಂಶುಪಾಲ ಬಸವರಾಜ ಸ್ವಾಮಿ ಮಾತನಾಡಿ,ಆಸಕ್ತಿಯಿಂದ ಬೋಧನೆ ಮಾಡಿದಲ್ಲಿ ನಿರೀಕ್ಷಿತ ಪ್ರತಿಫಲ ಪಡೆಯಲು ಸಾಧ್ಯ ಎಂದು ತಿಳಿಸಿದರು.
ಡಯಟ್ ಪ್ರ.ಪ್ರಾಚಾರ್ಯ ದಿಗಂಬರರಾವ ಅಧ್ಯಕ್ಷತೆ ವಹಿಸಿದ್ದರು.
ಗುಡಮೆ,ಸುಲೋಚನಾ,ರವಿಕಾಂತ,ಪೂಜಾರಿ,ಹಾದಿಮನೆ,ಕುಲಕರ್ಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕುಲಕರ್ಣಿ ನಿರೂಪಿಸಿದರು.ಗಿರಿಧರ ರೆಡ್ಡಿ ವಂದಿಸಿದರು.