
ಬೀದರ್:ಮಾ.3: ನಗರದಲ್ಲಿ ಮಾ. 12 ರಂದು ಹಮ್ಮಿಕೊಂಡಿರುವ ಬೊಮ್ಮಗೊಂಡೇಶ್ವರ ಉತ್ಸವದ ಭಿತ್ತಿ ಪತ್ರವನ್ನು ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ ನಗರದ ಬೊಮ್ಮಗೊಂಡೇಶ್ವರ ವೃತ್ತದಲ್ಲಿ ಬಿಡುಗಡೆ ಮಾಡಿದರು.
ಬೊಮ್ಮಗೊಂಡೇಶ್ವರ ಜೀವನ ಮತ್ತು ಸಾಧನೆಗಳನ್ನು ಯುವ ಪೀಳಿಗೆಗೆ ಪರಿಚಯಿಸುವ ದಿಸೆಯಲ್ಲಿ ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘ ಬೊಮ್ಮಗೊಂಡೇಶ್ವರ ಉತ್ಸವ ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.
ಬೊಮ್ಮಗೊಂಡೇಶ್ವರರು ನಾಡಿಗೆ ನೀಡಿದ ಕೊಡುಗೆ ಅಪಾರವಾಗಿದೆ. ಅವರ ತತ್ವಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕಾಗಿದೆ. ಉತ್ಸವದ ಯಶಸ್ವಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ನುಡಿದರು.
ಶಾಸಕ ರಹೀಂಖಾನ್ ಮಾತನಾಡಿ, ಬೊಮ್ಮಗೊಂಡೇಶ್ವರ ಉತ್ಸವಕ್ಕೆ ತಮ್ಮ ಸಹಕಾರ ಇರಲಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಮೃತರಾವ್ ಚಿಮಕೋಡೆ ಮಾತನಾಡಿ, ಬೊಮ್ಮಗೊಂಡೇಶ್ವರ ಉತ್ಸವದ ಯಶಸ್ವಿಗೆ ಗೊಂಡ, ಪರ ಸಂಘಟನೆಗಳು ಸಹಕರಿಸಬೇಕು. ಸಮಾಜ ಬಾಂಧವರು ಹಾಗೂ ಬೊಮ್ಮಗೊಂಡೇಶ್ವರ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷಕುಮಾರ ಜೋಳದಾಪಕೆ ಮಾತನಾಡಿ, ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಬೊಮ್ಮಗೊಂಡೇಶ್ವರ ಉತ್ಸವ ಜರುಗಲಿದೆ. ಅದಕ್ಕೂ ಮುನ್ನ ಬೊಮ್ಮಗೊಂಡೇಶ್ವರ ವೃತ್ತದಿಂದ ರಂಗ ಮಂದಿರ ವರೆಗೆ ಬೊಮ್ಮಗೊಂಡೇಶ್ವರ ಭಾವಚಿತ್ರದ ಮೆರವಣಿಗೆ ನಡೆಯಲಿದೆ. ಜಿಲ್ಲೆಯಾದ್ಯಂತ ಉತ್ಸವದ ಪ್ರಚಾರ ಮಾಡಲಾಗಿದೆ. ಉತ್ಸವ ಯಶಸ್ವಿಗೆ ತಾಲ್ಲೂಕು ಸಮಿತಿಗಳನ್ನು ರಚಿಸಲಾಗಿದೆ ಎಂದು ಹೇಳಿದರು.
ಮುಖಂಡರಾದ ಪಂಡಿತರಾವ್ ಚಿದ್ರಿ, ರಾಜಾರಾಮ ಚಿಟ್ಟಾ, ಭೀಮಸಿಂಗ್ ಮಲ್ಕಾಪುರ, ಅಬ್ದುಲ್ ಮನ್ನಾನ್ ಸೇಠ್, ಬಸವರಾಜ ಬುಳ್ಳಾ, ಪೀರಪ್ಪ ಯರನಳ್ಳಿ, ಕೇವಲ ಎಂ. ಕಾಶೆಂಪುರ, ಸಂಜಯ ಜಾಗೀರದಾರ್, ತುಕಾರಾಮ ಕರಾಟೆ, ಕಲ್ಲಪ್ಪ ಬೆನಕನಳ್ಳಿ, ವಿಷ್ಣು ಬೋಲಸೂರೆ, ಧನರಾಜ ಹಿಪ್ಪಳಗಾಂವ್, ನರಸಪ್ಪ ಜಾನಕನೋರ, ಎಂ.ಪಿ. ವೈಜಿನಾಥ, ವಿಜಯಕುಮಾರ ತೋರಣೆ, ಧನರಾಜ ಅತಿವಾಳೆ, ಅನಿಲ್ ಚಿಲ್ಲರ್ಗಿ, ಮಲ್ಲಿಕಾರ್ಜುನ ಸಾತೋಳಿ, ಕುಶಾಲರಾವ್ ಮರಕಲ್, ಕಲ್ಯಾಣರಾವ್ ಅಡಸಾರೆ, ಸಂಗಮೇಶ ಏಣಕೂರೆ, ಬೊಮ್ಮಗೊಂಡ ಚಿಟ್ಟಾವಾಡಿ, ರವಿ ಸಿರ್ಸಿ, ಶಿವಕುಮಾರ ಹೂಗೇರಿ, ಶಿವಶಂಕರ ನೀಲಮನಳ್ಳಿ, ಮಲ್ಲಿಕಾರ್ಜುನ ಔದತ್ತಪುರ, ರಾಹುಲ್ ವಗ್ಗೆ, ಮಲ್ಲಿಕಾರ್ಜುನ ವಗ್ಗೆ, ದತ್ತು ಕಾಡವಾದ, ರಾಕೇಶ ಕುರುಬಖೇಳಗಿ, ಧನರಾಜ ಅತಿವಾಳ, ಕಲ್ಲಪ್ಪ ಶಹಾಪುರ, ಆನಂದ ಕಮಠಾಣ, ಸುಧಾಕರ ಮಲ್ಕಾಪುರ, ಸಚಿನ್ ಮಲ್ಕಾಪುರ, ಸುನೀಲ್ ಚಿಲ್ಲರ್ಗಿ, ಮಾರುತಿ ಗಾದಗಿ, ಲೋಕೇಶ ಮರ್ಜಾಪುರ, ರಾಜ ಟಗರು, ವಿಶ್ವನಾಥ ನ್ಯಾಮತಾಬಾದ್, ಉಮೇಶ ಸಾತೋಳಿ ಇದ್ದರು.