ಉತ್ಸವದಲ್ಲಿ ಶಂಕ್ರಪ್ಪ ಹೂಗಾರ ಝೇಂಕರಿಸಿದ ಹಾಡಿನ ಮೋಡಿ

ಆಳಂದ: ಮಾ.4:ಕಲಬುರಗಿಯಲ್ಲಿ ಈಚೆಗೆ ನಡೆದ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಕಲಾವಿದ ಶಂಕ್ರಪ್ಪ ಹೂಗಾರ ಅವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಗಾಯನ ಮೂಲಕ ಗಮನ ಸೆಳೆದಿದ್ದರು.

ಆಕಾಶವಾಣಿಯ ಎ ಶ್ರೇಣಿ ಕಲಾವಿದರು ಆಗಿರುವ ಇವರು ಮೊದಲಿಗೆ ರಾಗ್ ಮಾಲಕೌಂಸ ದೊಂದಿಗೆ ಪ್ರೇಕ್ಷರ ಗಮನಸೆಳೆದರು.

ನಂತರ ವಚನ ಗಾಯನ, ದಾಸವಾಣಿಯಲ್ಲಿ ಜನರ ಮನ ಗೆದ್ದು ಪ್ರೇಕ್ಷಕರಿಗೆ ಚಪ್ಪಾಳೆಯನ್ನು ಸುರಿಮಳೆಗೈಯುವಂತೆ ಮಾಡಿದರು.

ಶಂಕ್ರಪ್ಪ ಅವರು ಪಟ್ಟಣದ ಸರ್ಕಾರಿ ಕನ್ಯಾ ಪ್ರೌಢ ಶಾಲೆಯಲ್ಲಿ ಸಂಗೀತ ಶಿಕ್ಷಕರಾಗಿದ್ದು, ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಕೊಡುಗೆ ನೀಡಿದವರು. ತಮ್ಮ ಶಾಲೆಯ ವಿದ್ಯಾರ್ಥಿನಿಯರನ್ನು ನಾಡಗೀತೆ, ರಾಷ್ಟ್ರಗೀತೆ ಭಾವಗೀತೆಗಳನ್ನು ಸುಸ್ರಾವ್ಯವಾಗಿ ಹಾಡುವಂತೆ ಕಲಿಸಿ ಸಭೆ ಸಮಾರಂಭಗಳಲ್ಲಿ ಸಾಧರ ಪಡಿಸಿರುವುದು ಇವರು ಸಂಗೀತ ಆಸಕ್ತರನ್ನು ಪ್ರೋತ್ಸಾಹಿಸತೊಡಗಿದ್ದಾರೆ. ಶಂಕ್ರಪ್ಪ ಅವರು, ಮೈಸೂರು ದಸರಾ, ಹಂಪಿ ಉತ್ಸವ, ಕದಂಬ ಉತ್ಸವ, ಚಾಲುಕ್ಯ ಉತ್ಸವದಲ್ಲಿ ಕೂಡ ತ್ರಿವೇಂದ್ರÀ್ರಮ್, ಮುಂಬೈ, ಪುಣೆ, ಕಲ್ಕತ್ತಾ ಹೀಗೆ ಅನೇಕ ಭಾಗಗಳಲ್ಲಿ ಕೂಡ ಸಂಗೀತ ಕಾರ್ಯಕ್ರಮ ನೀಡಿ ಸಂಗೀತ ದಿಗ್ಗಜರ ಸಾಲಿಗೆ ಶ್ರಮಿಸುತ್ತಿದ್ದಾರೆ.

ಅಲ್ಲದೆ, ಕರ್ನಾಟಕದ ಅನೇಕ ಮಠಮಾನ್ಯಗಳ ಧಾರ್ಮಿಮ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಕೂಡ ಸಂಗೀತ ಕಾರ್ಯಕ್ರಮ ನೀಡಿರುತ್ತಾರೆ.

ವಚನ ಸಂಗೀತ, ದಾಸವಾಣಿ, ತತ್ವಪದಗಳನ್ನು ಕೂಡ ಹಾಡಿನೊಂದಿಗೆ ಜನಮನ ಗೆದ್ದಿದ್ದಾರೆ ಉತ್ಸವದಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಇವರಿಗೆ ಹಾರ್ಮೋನಿಯಂನ್ನು ಖ್ಯಾತ ಪಿಟೀಲು ವಾದಕರಾದ ಬದ್ರಿನಾಥ್ ಮುಡಬಿ ಹಾಗೂ ತಬಲ ಸಾತ್ ಪಂಡಿತ್ ರವಿಕಿರಣ್ ನಾಕೋಡ ನೀಡಿದ್ದರು.