ಉತ್ನಾಳ ಎಲ್.ಟಿ-2 ಒಂದೇ ಕುಟುಂಬದ 9 ಜನರಿಗೆ ಕೋವಿಡ್ ಸೋಂಕು: ವರದಿಯಿಂದ ಸ್ಪಷ್ಟ

ವಿಜಯಪುರ, ಮೇ.28-ಜಿಲ್ಲೆಯ ವಿಜಯಪುರ ತಾಲೂಕಿನ ಹೊನಗನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಉತ್ನಾಳ. ಎಲ್.ಟಿ.-2 ಯಲ್ಲಿ ಒಂದೇ ಕುಟುಂಬದ 9-ಜನರಿಗೆ ಕೋವಿಡ್-19 ಸೋಂಕು ತಗಲಿರುವ ಬಗ್ಗೆ ಇತ್ತೀಚಿಗೆ ಪ್ರಸಾರ ಮಾಧ್ಯಮದಲ್ಲಿ ವರದಿಯಾಗಿದ್ದು, ಈ ಕುರಿತು ಪರಿಶೀಲಿಸಿ ವರದಿ ಸಲ್ಲಿಸುವಂತೆ ವಿಜಯಪುರ, ತಾಲೂಕಾ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಲಾಗಿತ್ತು.ಅದರನ್ವಯ ಅವರು ಈ ಕೆಳಕಂಡಂತೆ ವರದಿ ಸಲ್ಲಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಅವರು ತಿಳಿಸಿದ್ದಾರೆ.
ತಾಲೂಕಾ ಆರೋಗ್ಯ ಅಧಿಕಾರಿಗಳು, ವಿಜಯಪುರ ಇವರ ವರದಿಯನ್ವಯ, ಉತ್ನಾಳ ತಾಂಡಾ ನಂ2 ರಲ್ಲಿ ಒಂದು ಕುಟಂಬದಲ್ಲಿ ಒಟ್ಟು 20 ಸದಸ್ಯರಿರುತ್ತಾರೆ. ಅವರೆಲ್ಲರ ಗಂಟಲು ಮಾದರಿಯನ್ನು ದಿ. 21-05-2021 ರಂದು ಸಂಗ್ರಹಿಸಲಾಗಿ, ದಿ.22-05-2021 ರಂದು ಶನಿವಾರ ರಾತ್ರಿ ಸುಮಾರು 9.30 ಗಂಟೆಗೆ ಈ ಕುಟಂಬದ ಸದಸ್ಯರೊಬ್ಬರು ಪ್ರಾ.ಆ.ಕೇಂದ್ರ ಹೊನಗನಹಳ್ಳಿ ಸಿಬ್ಬಂದಿಯವರಿಗೆ ಕರೆ ಮಾಡಿ ನಮಗೆ ಕೋವಿಡ್ +ve ಅಂತ ಮೊಬೈಲ್‍ಗೆ ಮೆಸೇಜ್ ಬಂದಿದ್ದು, ಅದಕ್ಕೆ ಚಿಕಿತ್ಸೆ ಕೊಡಿ ಅಂತ ಹೇಳಿರುತ್ತಾರೆ. ಆದರೆ ಪಾಸಿಟಿವ್ ಕೇಸ್ ಲಿಸ್ಟನ್ನು ವೈದ್ಯಾಧಿಕಾರಿಗಳ ಕೈ ಸೇರಿರುವದಿಲ್ಲ ಆದರೂ ಕೂಡ ಮಾರನೇಯ ದಿನ ದಿನಾಂಕ 23-05-2021 ರಂದು ಭಾನುವಾರ ಬೆಳಿಗ್ಗೆ ಪ್ರಾ,ಆ. ಕೇಂದ್ರ ಹೊನಗನಹಳ್ಳಿ ಒಔ, Sಡಿಊಂ, ಎಡಿಊಂ ಒ & ಈ, ಂSಊಂ Woಡಿಞeಡಿs ಹಾಗೂ ಒಐಊP ರವರು ಉತ್ನಾಳ ಎಲ್ ಟಿ-2 ಸೋಂಕಿತರ ಮನೆಗೆ ಭೇಟಿ ನೀಡಿ ಅವರ ಕುಟುಂಬದ ಸದಸ್ಯರ ಆರೋಗ್ಯ ವಿಚಾರಿಸಿ, ಅವರ ಮೊಬೈಲ್‍ನಲ್ಲಿಯ ಮೆಸೇಜ್ ನೋಡಲಾಗಿ, ಅವರ ಮನೆಯಲ್ಲಿಯ ಒಟ್ಟು 06 ಜನರಿಗೆ ಕೋವಿಡ-19 ಸೋಂಕು ಖಚಿತಪಟ್ಟಿರುವುದು ತಿಳಿದುಬಂದಿರುತ್ತದೆ.ಆಗ ಆರೋಗ್ಯ ಇಲಾಖೆಯ ವೈದ್ಯರು ಅವರಿಗೆ ಖಿಚಿb Pಛಿಣ, ಖಿಚಿb ಂziಣhಡಿomiಛಿiಟಿ ಚಿಟಿಜ ಖಿಚಿb ಅiಣಡಿizeಟಿ ನೀಡಿದ್ದಾರೆ .
ನಂತರ ಮಧ್ಯಾಹ್ನ ಸುಮಾರು 12-00 ಗಂಟೆಗೆ ಪಾಸಿಟಿವ್ ಲಿಸ್ಟನಲ್ಲಿ ಉತ್ನಾಳ ಎಲ್ ಟಿ-2 ದಲ್ಲಿಯ ಒಟ್ಟು 30 ಜನರಿಗೆ ಕೋವಿಡ-19 ಸೋಂಕು ಖಚಿತಪಟ್ಟಿರುವುದು ತಿಳಿದುಬಂದಿದ್ದು, ಅದರಲ್ಲಿ ಅದೇ ಕುಟುಂಬದ ಇನ್ನು 3 ಜನರಿಗೆ ಕೋವಿಡ-19 ಸೋಂಕು ಖಚಿತಪಟ್ಟಿರುತ್ತದೆ. ಹೀಗಾಗಿ ಒಂದು ಕುಟುಂಬದಲ್ಲಿ 2 ರಿಂದ 7 ವರ್ಷದ 03 ಜನ ಮಕ್ಕಳು, 16 ವರ್ಷದ 02 ಜನ, 35 ರಿಂದ 38 ವರ್ಷದ 03 ಜನ, 75 ವರ್ಷದ 01 ವ್ಯಕ್ತಿ ಹೀಗೆ ಒಟ್ಟು 09 ಜನರಿಗೆ ಕೋವಿಡ-19 ಸೋಂಕು ಖಚಿತಪಟ್ಟಿರುತ್ತದೆ.
ಇವರಿಗೂ ಕೂಡ ಪ್ರಾ.ಆ.ಕೇಂದ್ರದ ವೈದ್ಯಾಧಿಕಾರಿಗಳು ಖಿಚಿb Pಛಿಣ, ಂziಣhಡಿomiಛಿiಟಿ ಚಿಟಿಜ ಖಿಚಿb ಅiಣಡಿizeಟಿ ನೀಡಿರುತ್ತಾರೆ ಮತ್ತು ಅವರೆಲ್ಲರನ್ನು ಆಸ್ಪತ್ರೆಗೆ ಶಿಫ್ಟ ಮಾಡುವ ಕುರಿತು ಕುಟುಂಬದ ಸದಸ್ಯರೊಂದಿಗೆ ಚರ್ಚಿಸಿರುತ್ತಾರೆ. ಆಗ ಸೋಂಕಿತ ಕುಟುಂಬದವರು ತಮ್ಮ ಮನೆಯಲ್ಲಿ ದೊಡ್ಡದಾದ ಒಟ್ಟು 4 ಕೋಣೆಗಳಿರುತ್ತವೆ ಹಾಗೂ 3 ಕುಟುಂಬದವರು ಬೇರೆ ಬೇರೆ ಅಡುಗೆ ಮಾಡಿಕೊಳ್ಳುತ್ತಿದ್ದು, ಕೋವಿಡ-19 ಪಾಸಿಟಿವ್ ರೋಗಿಗಳೆಲ್ಲರೂ ಒಂದೇ ಕೋಣೆಯಲ್ಲಿ ವಾಸವಾಗಿರುತ್ತೇವೆ ಎಂದು ತಿಳಿಸಿರುತ್ತಾರೆ.
ದಿ. 24-05-2021 ರಂದು ಸೋಮವಾರ ಬೆಳಗ್ಗೆ ಪ್ರಾ.ಆ.ಕೇಂದ್ರ ಹೊನಗನಹಳ್ಳಿ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯವರು ಉತ್ನಾಳ ತಾಂಡಾ ನಂ 2 ಕ್ಕೆ ತೆರಳಿ, ಗ್ರಾಮ ಪಂಚಾಯತದಿಂದ ಪೂರೈಸಲಾದ ಖಿಚಿb viಣ-ಛಿ ಖಿಚಿb Ziಟಿಛಿ ಮತ್ತು ಔಖS ಗಳನ್ನು ತಾಂಡಾದಲ್ಲಿಯ ಒಟ್ಟು 16 ಪಾಸಿಟಿವ್ ಪ್ರಕರಣಗಳಿಗೆ ನೀಡಿರುತ್ತಾರೆ.
ಅದೇ ಸಂದರ್ಭದಲ್ಲಿ ತಾಂಡಾದ ಕೆಲವು ಜನ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯವರಿಗೆ ನೀವು ಸುಳ್ಳು ರಿಪೆÇೀರ್ಟ ನೀಡುತ್ತಿದ್ದಿರಿ ನಮ್ಮ ತಾಂಡಾದಲ್ಲಿ ಯಾರೂ ಪಾಸಿಟಿವ್ ಇರುವದಿಲ್ಲ ಅಂತ ವಾದ ಮಾಡುತ್ತಾ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ, ವೈದ್ಯಾಧಿಕಾರಿಗಳು ಹಾಗೂ ಸಿಬ್ಭಂದಿಯವರನ್ನು ಕಲ್ಲಿನಿಂದ ಹೊಡೆಯವುದಾಗಿ ಹೆದರಿಸಿ ತಾಂಡಾದಲ್ಲಿಯ ಸೇವಾಲಾಲ ದೇವಸ್ಥಾನದಲ್ಲಿ ಕೂಡಿ ಹಾಕಿರುತ್ತಾರೆ. ಆಗ ಜೀವದ ಭಯದಿಂದ ಆರೋಗ್ಯ ಇಲಾಖೆಯ ಸಿಬ್ಭಂದಿಯವರಾದ ಮೋತಿಲಾಲ ಲಮಾಣಿ Sಡಿಊಂ ರವರು ಪೆÇೀಲೀಸರಿಗೆ ಫೆÇೀನ್ ಮಾಡಿದ್ದರಿಂದ ಆಗ 6 ಜನ ಪೆÇೀಲೀಸರು ಸ್ಥಳಕ್ಕೆ ಆಗಮಿಸಿದ ಸಂದರ್ಭದಲ್ಲಿ ಪರಿಸ್ಥಿತಿ ತಿಳಿಯಾಗಿ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಯವರು ಉಪಕೇಂದ್ರಕ್ಕೆ ತೆರಳಿದ್ದಾರೆ. ನಂತರ ಪೆÇೀಲೀಸರ ಸಹಾಯದಿಂದ ಉಳಿದ ಎಲ್ಲಾ ಸೋಂಕಿತರಿಗೆ ಮಾತ್ರೆಗಳನ್ನು ನೀಡಿರುತ್ತಾರೆ.
ಒಂದೇ ಕುಟುಂಬದ ಒಟ್ಟು 09 ಜನ ಸೋಂಕಿತರಲ್ಲಿ 4 ವರ್ಷದ ಹುಡುಗ & 2 ವರ್ಷದ ಹುಡುಗ ಈ ಇಬ್ಭರು 5 ವರ್ಷದ ಒಳಗಿನ ಮಕ್ಕಳಿಗೆ ಕೋವಿಡ-19 ಸೋಂಕು ಖಚಿತಪಟ್ಟಿರುತ್ತದೆ. ಸಧ್ಯ ಸದರಿ ಕುಟುಂಬದ 9 ಜನರು (ಮಕ್ಕಳನ್ನು ಸೇರಿ) ಒಂದು ಪ್ರತ್ಯೇಕ ಮನೆಯಲ್ಲಿ ಹೋಂ ಐಸೋಲೇಷನ್ ಆಗಿರುತ್ತಾರೆ ಹಾಗೂ ಅವರ ಆರೋಗ್ಯ ಸ್ಥಿರವಾಗಿರುತ್ತದೆ ಎಂದು ತಾಲೂಕಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ವಿಜಯಪುರ ಇವರು ತಮ್ಮ ವರದಿಯಲ್ಲಿ ಮಾಹಿತಿ ಸಲ್ಲಿಸಿರುತ್ತಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.