ಉತ್ತರ ಭಾರತದಲ್ಲಿ ಹೆಚ್ಚು ಪತಂಗ ಉತ್ಸವಗಳನ್ನು ಆಯೋಜಿಸಲಾಗುತ್ತದೆ:ಶಾಸಕ ಶಶೀಲ್ ಜಿ.ನಮೋಶಿ

ಬೀದರ,ಮಾ.11:ನಮ್ಮ ಭಾಗದಲ್ಲಿ ಪತಂಗ ಉತ್ಸವಗಳು ನಡೆಯುವುದು ಅಪರೂಪ ಆದರೆ ಉತ್ತರ ಭಾರತದಲ್ಲಿ ಈ ಉತ್ಸವಗಳನ್ನು ಹೆಚ್ಚಿನ ರೀತಿಯಲ್ಲಿ ಆಯೋಜಿಸಲಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ. ನಮೋಶಿ ಹೇಳಿದರು.
ಅವರು ಶನಿವಾರ ಬಸವ ಉತ್ಸವದ ಅಂಗವಾಗಿ ಬಸವಕಲ್ಯಾಣ ಥೇರ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪತಂಗ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಳೆದ ಮೂರು ನಾಲ್ಕು ವರ್ಷಗಳಿಂದ ಬಸವ ಉತ್ಸವ ಕೋವಿಡ್ ಕಾರಣದಿಂದ ನಡೆದಿರಲಿಲ್ಲ ಈಗ ನಡೆಯುತ್ತಿರುವುದರಿಂದ ಕಲ್ಯಾಣ ನಾಡಿನ ಜನರಲ್ಲಿ ಸಂತಸವನ್ನು ಉಂಟು ಮಾಡಿದೆ ಮತ್ತು ಈ ಉತ್ಸವದಲ್ಲಿ ಹೆಚ್ಚಿನ ಜನರು ಭಾಗವಹಿಸಬೇಕೆಂದರು.
ಪತAಗದ ಮಾಂಜಾ ಬಹಳ ಚುಪಾಗಿರುವುದರಿಂದ ಎಚ್ಚರಿಕೆಯಿಂದ ಅದನ್ನು ಹಾರಿಸಬೇಕು ಇದರಲ್ಲಿ ಪಾಲ್ಗೊಳ್ಳಲು ಹೈದರಾಬಾದ್ ಸೇರಿದಂತೆ ವಿವಿಧ ಕಡೆಯಿಂದ ಆಗಮಿಸಿದ ಎಲ್ಲರಿಗೂ ಬಸವಣ್ಣನವರ ಕರ್ಮಭೂಮಿ ಎಲ್ಲರಿಗೂ ಒಳ್ಳೆಯದನ್ನು ಮಾಡುತ್ತದೆ ಎಂದರು.
ಬಸವಣ್ಣನವರು 800 ವರ್ಷಗಳ ಹಿಂದೆಯೆ ಸಾಮಾಜಿಕ ಸಮಾನತೆಗಾಗಿ ಕ್ರಾಂತಿ ಮಾಡಿದ್ದರು. ಕಾಯಕವೆ ಕೈಲಾಸ ಎಂದು ಹೇಳಿದ ಅವರು ವಚನಗಳ ಮುಖಾಂತರ ತಮ್ಮ ತತ್ವ ಮತ್ತು ಸಿದ್ದಾಂತಗಳನ್ನು ಜಗತ್ತಿಗೆ ಸಾರಿದ್ದರು ಎಂದರು.
ಕಲ್ಯಾಣ ನಾಡು ಹಿಂದುಳಿದ ಭಾಗವಾಗಿದ್ದರು ಇಂದು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಮತ್ತು ಬಸವ ಉತ್ಸವದಲ್ಲಿ ಹೆಚ್ಚಿನ ಜನರು ಭಾಗವಹಿಸುವ ಮೂಲಕ ಇಲ್ಲಿ ನಡೆಯುತ್ತಿರುವ ವಿವಿಧ ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡುವ ಮೂಲಕ ಉತ್ಸವದ ಆನಂದವನ್ನು ಸವಿಯಬೇಕೆಂದು ಹೇಳಿದರು.
ವಿವಿಧ ಬಣ್ಣ- ಬಣ್ಣಗಳ ಪತಂಗಗಳನ್ಮು ಹಾರಿಸುವ ಮೂಲಕ ಗಣ್ಯರು ಪತಂಗ ಉತ್ಸವಕ್ಕೆ ಚಾಲನೆ ನೀಡಿದರು ಮತ್ತು ಬಣ್ಣ-ಬಣ್ಣದ ಪತಂಗಗಳು ಉತ್ಸವದಲ್ಲಿ ನೋಡುಗರ ಕಣ್ಮನ ಸೆಳೆದವು.
ಈ ಸಂದರ್ಭದಲ್ಲಿ ಬಸವಕಲ್ಯಾಣ ಶಾಸಕ ಶರಣು ಸಲಗರ, ಬಸವಕಲ್ಯಾಣ ಸಹಾಯಕ ಆಯುಕ್ತ ರಮೇಶ ಕೋಲಾರ, ಬಸವಕಲ್ಯಾಣ ನಗರಸಭೆ ಅಧ್ಯಕ್ಷ ಶಹನಾಜ ತನ್ವಿರ್ ಶೇಖ್, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಅಭಯ ಕುಮಾರ, ಬಸವಕಲ್ಯಾಣ ತಹಶಿಲ್ದಾರ ಶಾಂತಗೌಡ ಬಿರಾದಾರ, ಹುಲಸೂರು ತಹಶಿಲ್ದಾರ ಶಿವಾನಂದ ಮೇತ್ರೆ ಸೇರಿದಂತೆ ಇತರರು ಉಪಸ್ಥಿತರಿದ್ದರು.