ಉತ್ತರ ಭಾರತದಲ್ಲಿ ರಾಮಲೀಲೋತ್ಸವ ಕರ್ನಾಟಕದಲ್ಲಿ ದೇವಿ ಮಹಾತ್ಮೆ ಆಚರಿಸುವುದು ವಾಡಿಕೆ.

ಸಂಡೂರು ಅ:27 ಸಂಕಲ್ಪಗಳು ಈಡೇರಿಸುವ ದಿನವೇ ವಿಜಯ ದಶಮಿ ರಾಮನ ಕಾಲದಲ್ಲಿ ರಾವಣನನ್ನು ಸಂಹಾರ ಮಾಡಿದಕ್ಕಾಗಿ ಉತ್ತರ ಭಾರತದಲ್ಲಿ ರಾಮಲೀಲೋತ್ಸವ, ಕರ್ನಾಟಕದಲ್ಲಿ ಮಹಿಷಾಸುರ ಬಿಡಾರ ಶುಂಭ ನಿಶುಂಭ ಮದುಕೈಟಬ ಚಂಡಾಮುಂಡ ರಕ್ತಾಬೀಜಾಸುರ ಹೀಗೆ ಹಲವಾರು ರಕ್ಕಸರ ಗುಣಗಳನ್ನು ನಾಶ ಮಾಡಿದ ದೇವಿಗೆ ದೇವಿ ಮಹಾತ್ಮೆ ಎಂದು ನವರಾತ್ರಿಯ 9 ದಿವಸವು ಆಚರಿಸಿ 10ನೇ ದಿನ ವಿಜಯದಶಮಿ ಎನ್ನಾಗಿ ಆಚರಿಸುವುದು ವಾಡಿಕೆ. ಪಾಂಡವರು ಅಜ್ಞಾತವಾಸವನ್ನು ಕಳೆದು ಬನ್ನಿ ಗಿಡದಲ್ಲಿ ಆಯುಧ ಪೂಜೆಗಳನ್ನಿಟ್ಟು, ನಂತರ ಒಂದು ವರ್ಷ ವಾದ ನಂತರ ಆಯುಧಗಳನ್ನು ಗಿಡದಿಂದ ತೆಗೆದು ಪೂಜೆ ಮಾಡುತ್ತಾರೆ. ಮಧುವರಸ ಹರಳಯ್ಯ ನವರ ಮಕ್ಕಳ ವಿವಾಹ ಅಂತರ್ಜಾತಿಯ ವಿವಾಹವಾಗಿದ್ದು, ಇದು ಕೂಡಾ ಒಂದು ಮಾಯೆ. ಮಾಯೆ ಎನ್ನು ಬಿಟ್ಟು ಜಗತ್ತಿಜನಲ್ಲಿ ಏನು ಇಲ್ಲವೆಂದು ಸಂಡೂರಿನ ವಿರಕ್ತಮಠಾಧೀಶ್ವರರಾದ ಪರಮಪೂಜ್ಯ ಶ್ರೀ ಪ್ರಭುಮಹಾಸ್ವಾಮಿಗಳವರು ತಿಳಿಸಿದರು.
ಅವರು ಸಂಡೂರಿನ ಪ್ರಭುದೇವರ ಸಂಸ್ಥಾನ ವಿರಕ್ತಮಠದಲ್ಲಿ ದೇವಿ ಪೂರಾಣ ಮುಕ್ತಾಯ ಹಾಗೂ ಪ್ರಾರಂಭದ ಸಾನಿಧ್ಯವನ್ನು ವಹಿಸಿ ಮಾತನಾಡಿದರು. ದೇವಿ ಅವತಾರಗಳಲ್ಲಿ ಪ್ರಮುಖ ಅವತಾರಗಳೆಂದರೆ, ದುರ್ಗಾದೇವಿ ಲಕ್ಷ್ಮೀದೇವಿ ಸರಸ್ವತಿ ಹೀಗೆ ಚಿದಾನಂದಾವದೂತರು 3 ಭಾಗಗಳನ್ನಾಗಿ ರಚಿಸಿ ಲೋಕ ಕಲ್ಯಾಣಕ್ಕಾಗಿ ದೇವಿ ಪುರಾಣವನ್ನು ಅರ್ಪಣೆ ಮಾಡಿದರು. ಸುಸಂಸ್ಕೃತ ವ್ಯಕ್ತಿಗಳಾಗಿ ಬದುಕಿಗೆ ಸಂಪತ್ತು ಅವಶ್ಯ. ರಜೋಗುಣದಿಂದ ಸಂಪತ್ತನ್ನು ಗಳಿಸಿ ದಾಸೋಹ ಮತ್ತು ಕಾಯಕ ಪರಿಕಲ್ಪನೆಯನ್ನ ನಾವು ತಂದುಕೊಳ್ಳಬೇಕಾಗಿದೆ. ಸಾತ್ವಿಕ ಮನೋಭಾವನೆಯಿಂದ ಆಧ್ಯಾತ್ಮ ಬರಲು ಸಾಧ್ಯವೆಂದು ತಿಳಿಸಿದರು.
ಮನುಷ್ಯ ಜೀವಿ ಈ ಭೂಮಿ ಮೇಲೆ ಬಂದ ನಾವು ಗುರುವಿನ ಕೃಪಾ ಕಟಾಕ್ಷದಿಂದ ದೇವಿ ಪುರಾಣ ಸಂಗೋಪ ಸಾಂಗವಾಗಿ ಜರಗುತ್ತಿರುವುದು ಶ್ಲಾಘನೀಯ. ಗುರುವಿನ ಕಟಾಕ್ಷ ಸದ್ಗುಣಗಳು ಬರಲು ಸಾಧ್ಯ. ದೇವಿ ಪುರಾಣವನ್ನು ನಂದೀಶ್ವರನಿಗೆ ಶಿವನು ಹೇಳಿದ ನಂತರ ಸೂತ ಪುರಾಣಿಕರು ಗುರು ಚಿದಾನಂದಾವದೂತರ 18 ಅಧ್ಯಾಯಗಳ ಮಾತುಗಳನ್ನು ಸೂತ ಮುನಿಗಳು ವಿವರಿಸಿದರು. ಪ್ರಾಣಾಯಾಮ ಯೋಗಗಳ ಮುಖಾಂತರ ದೇವಿಗೂ ಚಿದಾನಂದಾವದೂತರಿಗೂ ಸಾಮರಸ್ಯ ಬಾಂಧವ್ಯ ಮೂಡಿ ಗುರುವಿನ ಮಾರ್ಗದರ್ಶನದಂತೆ ದೇವಿ ಪೂರಾಣವನ್ನು ಬರೆದ ಕೀರ್ತಿ ಆವದೂತರಿಗೆ ಇದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಪತ್ರಕರ್ತ ಅರಳಿ ಕುಮಾರಸ್ವಾಮಿ ಮಾತನಾಡಿ ಶ್ರೀಮಠಕ್ಕೆ 300 ವರ್ಷಗಳ ಇತಿಹಸವಿದ್ದು, 120 ವರ್ಷಗಳು ದೇವಿ ಪೂರಾಣದಲ್ಲಿ ತೊಡಗಿಕೊಂಡಿದ್ದೇವೆ. ಬಿಕ್ಷಾವತಿ ಉದ್ದಾನಯ್ಯನವರು, ಭುಜಂಗನಗರದ ದೊಡ್ಡ ಬಸಯ್ಯನವರು ತಾಳೂರಿನ ಪೋಸ್ಟ್ ಮಾಸ್ಟರ್ ಕುಮಾರಸ್ವಾಮಿಯವರು ಅಂಕಮನಾಲ್ ಚೆನ್ನಪ್ಪ ಅಂಕಮನಾಳ್ ನಾಗರಾಜಪ್ಪ, ಅಪ್ಪಾನಹಳ್ಳಿ ಕುಮಾರಪ್ಪ ಹಗರಿ ಕುಮಾರಪ್ಪ ಹಗರಿ ಬಸವರಾಜಪ್ಪ್ ಎನ್.ಎಮ್. ತಿಪ್ಪೇರುದ್ರಯ್ಯ ಬಂಗಾಳಿ ಬಸವರಾಜ ಟಿ.ಜೆ. ವೀದ್ರಪ್ಪ ಭೂಪಾಲ ರೆಡ್ಡಿ ಹಾಗೂ ರಾಘವೇಮದ್ರ ರೆಡ್ಡಿಯವರು ಸುಮಾರು ವರ್ಷಗಳ ಕಾಲ ದೇವಿ ಪೂರಾಣವನ್ನ ಪಠಿಸಿ ಪ್ರವಚನ ಮಾಡಿದ್ದಾರೆ. ಆಗಿನ ಕಾಲದಲ್ಲಿ ರಾಜ ಮಹಾರಾಜರ ಆಡಳೀತದಲ್ಲಿದ್ದು, ವಿರಕ್ತ ಮಠ 1966ರಲ್ಲಿ ವಿಜಯ ಮಹಾಂತ ದೇವರು ಸಂಡೂರಿಗೆ ಬಂದಾಗ ಆಗಿನ ಮಹಾರಾಜರು ಹಿರೇಮಠದ ಬಸಯ್ಯನವರಿಗೆ ಅಂಕಮನಾಳ್ ರುದ್ರಪ್ಪನವರಿಗೆ ಬಂಡೆ ಮ್ಯಾಗಳ ಬಸಪ್ಪನವರಿಗೆ ಅರಳಿ ರುದ್ರಪ್ಪ ಗೊಗ್ಗ ರುಎದ್ರಯ್ಯಸ್ವಾಮಿ ಇವರುಗಳಿಗೆ ಶರತ್ತು ಹಾಕಿ ಮಠ ನಡೆಸಲು ಬೀಗ ಕೊಟ್ಟಿರುವುದು ಗಮನಾರ್ಹವಾಗಿದೆ. ಇತ್ತೀಚಗೆ ಶ್ರೀಮಠ ತನ್ನದೇ ಆದ ಗಂಭೀರ ಛಾಪು ಮೂಡಿಸಿದ್ದು, ಸಾಂಗೋಪ ಸಾಂಗವಾಗಿ ಹಲವಾರು ರೂಪರೇಶುಗಳನ್ನ ಹಾಕಿಕೊಂಡು ಮಠ ಮುನ್ನಡೆಯುತ್ತಿರುವುದು ಶ್ಲಾಘನೀಯ ಎಂದರು.
ರಾಮಿತಿ ಬಸವರಾಜ ಮತ್ತು ಕುಟುಂಬದವರು ಕೊಟ್ರೇಶಪ್ಪ ತಾ.ಪಂ ಅಧಿಕಾರಿ ನಾಗಪ್ಪ ಹಲವಾರು ಪ್ರಮುಖರು ದಾಸೋಹ ಸೇವೆಯನ್ನ ಗೈದರು. ನರಿಬಸವರಾಜರವರು, ಮೂಲಿಮನಿ ಮಲ್ಲಣ್ಣ ಭಕ್ತಿ ಗೀತೆಗಳನ್ನು ಹಾಡಿದರು. ಶಾರದ ಪುಸ್ತಕಾಲಯದ ವೀರಣ್ಣನವರು ಅಮೋಘ ಸೇವೆಯನ್ನ ಸಲ್ಲಿಸಿ ಜನ ಮನ ಗಳಿಸಿದರು. ನಂತರ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯ ಯಶಸ್ವಿಯಾಗಿ ನೆರವೇರಿತು.