ಉತ್ತರ ಪ್ರದೇಶದಲ್ಲಿ ಏಕ ಆಸನ ವಿಮಾನ ಪತನ: ಟ್ರೈನಿ ಪೈಲಟ್ ಸಾವು

ಅಜಾಂಗಡ್, ಸೆ 21– ಇಲ್ಲಿಗೆ ಸಮೀಪದ ಸೈರೈಮೀರ್ ಪ್ರದೇಶದಲ್ಲಿ ಅಮೇಥಿಯಲ್ಲಿನ ಸರ್ಕಾರಿ ಸ್ವಾಮ್ಯದ ಇಂದಿರಾಗಾಂಧಿ ಉದ್ಯಾನ್ ಅಕಾಡೆಮಿಯ ಟ್ರೈನಿ ಪೈಲಟ್ ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ.
ಪ್ರಾಥಮಿಕ ತನಿಖೆಯಂತೆ, ಏಕ ಪೈಲಟ್ ಇದ್ದ ವಿಮಾನ ಪ್ರತಿಕೂಲ ಹವಾಮಾನದಿಂದ ಪತನಗೊಂಡಿದೆ. ಫ್ರುಸತ್ ಗಂಜ್ ನಿಂದ ಟೇಕ್ ಆಫ್ ಆದ ವಿಮಾನ ಮೌ ಗೆ ಸಾಗಿ ವಾಪಸ್ಸಾಗುತ್ತಿದ್ದಾಗ ಈ ದುರಂತ ಸಂಭವಿಸಿದೆ.
ದುರಂತದಲ್ಲಿ ಸಾವನ್ನಪ್ಪಿದ ಟ್ರೈನಿ ಪೈಲಟ್ ಅನ್ನು ಕೊನಾರ್ಕ್ ಶರನ್ (24) ಎಂದು ಗುರುತಿಸಲಾಗಿದೆ. ತರಬೇತಿಯಲ್ಲಿ ಪೈಲಟ್ 125 ತಾಸಿನ ಹಾರಾಟ ನಡೆಸಿದ್ದಾರೆ ಎಂದು ಡಿಐಜಿ ಸುಭಾಶ್ ದುಬೆ ತಿಳಿಸಿದ್ದಾರೆ.
ಭಾರಿ ಮಳೆಯಿಂದ ವಿಮಾನ ಕೆಳಮಟ್ಟದಲ್ಲಿ ಹಾರಾಟ ನಡೆಸಿದ್ದು, ಪತನಗೊಂಡ ತಕ್ಷಣವೇ ಬೆಂಕಿ ಹೊತ್ತಿಕೊಂಡಿದೆ. ಪೈಲಟ್ ವಿಮಾನದಿಂದ ಜಿಗಿದಿದ್ದರೂ ಪ್ರಾಣ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಘಟನೆ ಕುರಿತಂತೆ ತನಿಖೆಗೆ ಆದೇಶಿಸಲಾಗಿದೆ.