ಉತ್ತರ ಕ್ಷೇತ್ರದ ಅಭಿವೃದ್ಧಿ, ಜನರ ಸೇವೆಗೆ ಅವಕಾಶ ನೀಡಲು ಲೋಕಿಕೆರೆ ನಾಗರಾಜ್ ಮನವಿ

ದಾವಣಗೆರೆ.ಮೇ.೪ : ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾಗರಾಜ್ ಲೋಕಿಕೆರೆ ಅವರು ಬಿರುಸಿನ ಮತ ಪ್ರಚಾರ ನಡೆಸಿದರು.33ನೇ ವಾರ್ಡಿನ ಮತ ಪ್ರಚಾರವು ನಿಟುವಳ್ಳಿಯ ಎಕೆಟಿ ವೃತ್ತದಿಂದ ಪ್ರಾರಂಭವಾಯಿತು. ಸರಸ್ವತಿ ಬಡಾವಣೆ, 34ನೇ ವಾರ್ಡ್ ನ ಶಿವಕುಮಾರ ಸ್ವಾಮಿ ಬಡಾವಣೆಯಲ್ಲಿ ಮತಯಾಚಿಸಿ, ತಮಗೆ ಉತ್ತರ ಕ್ಷೇತ್ರದ ಅಭಿವೃದ್ಧಿ, ಜನರ ಸೇವೆಗೆ ಅವಕಾಶ ನೀಡುವಂತೆ ಮತದಾರರಲ್ಲಿ ಮನವಿ ಮಾಡಿದರು.ಈ ಮತಪ್ರಚಾರದಲ್ಲಿ ಕಮಲದ ಚಿಹ್ನೆಯುಳ್ಳ ಬಿಜೆಪಿ ಬಾವುಟ ಹಿಡಿದು ಹೆಗಲ ಮೇಲೆ ಬಿಜೆಪಿಯ ಶಾಲು ಹಾಕಿಕೊಂಡು ಬಿಜೆಪಿ ಬೆಂಬಲಿಸಿ, ನಾಗರಾಜ್ ಲೋಕಿಕೆರೆ ಅವರಿಗೆ ಮತ ನೀಡಿ ಜಯಶೀಲರಾಗಿಸುವಂತೆ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಬೆಂಬಲಿಗರು ನಾಗರಾಜ್ ಲೋಕಿಕೆರೆ ಪರ ಮತಯಾಚಿಸಿದರು. ಮಹಿಳಾ ಕಾರ್ಯಕರ್ತೆಯರೇ ಹೆಚ್ಚಾಗಿ ಭಾಗವಹಿಸಿದ್ದರು.ಮುಖಂಡರುಗಳಾದ ಹೇಮಂತ ಕುಮಾರ್, ಶಿವರಾಜ್ ಪಾಟೀಲ್, ಹೆಚ್.ಎನ್. ಶಿವಕುಮಾರ್, ಜಿಲ್ಲಾ ಬಿಜೆಪಿ ದಕ್ಷಿಣ ಮಂಡಲ ಅಧ್ಯಕ್ಷ ಸಂಗನಗೌಡ್ರು, ಕೆ.ಎನ್. ಓಂಕಾರಪ್ಪ, ದೂಡಾ ಮಾಜಿ ಅಧ್ಯಕ್ಷ ಕೆ.ಎಂ. ಸುರೇಶ್, ನಗರ ಪಾಲಿಕೆ ಸದಸ್ಯ ಪೈಲ್ವಾನ್ ವೀರೇಶ್ ಸೇರಿದಂತೆ ಇತರರು ಸಾಥ್ ನೀಡಿದ್ದರು.