ಉತ್ತರ ಕರ್ನಾಟಕದ ಸ್ಪೆಷನ್ ವಡೆ

ಬೇಕಾಗುವ ಪದಾರ್ಥಗಳು:
ಕಡ್ಲೆಹಿಟ್ಟು – ಅರ್ಧ ಲೋಟ
ಅಕ್ಕಿಹಿಟ್ಟು – ಅರ್ಧ ಲೋಟ
ಗೋಧಿಹಿಟ್ಟು – ೧ ಲೋಟ
ಕೊತ್ತಂಬರಿಸೊಪ್ಪು – ೨ ಹಿಡಿ
ಕರಿಬೇವು – ಸ್ವಲ್ಪ
ಜೀರಿಗೆ – ೪ ಟೀ ಚಮಚ
ಹಸಿಮೆಣಸಿನಕಾಯಿ ಪೇಸ್ಟ್ – ೮ – ೧೦
ಕಾಳುಮೆಣಸು, ಧನಿಯಾ, ಮೆಂತ್ಯ ಇವುಗಳ ಪುಡಿ – ೨ ಟೀ. ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಮೊಸರು – ೧ ಸೌಟು
ವಿಧಾನ:
ಎಲ್ಲಾ ಪದಾರ್ಥಗಳನ್ನು ಮೊದಲು ಸೇರಿಸಿ ಕಲೆಸಿ, ಹಿಡಿಸುವಷ್ಟು ನೀರನ್ನು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿ, ೨ ಗಂಟೆ ಕಾಲಬಿಡಬೇಕು. ನಂತರ ಉಂಡೆಮಾಡಿ ಲಟ್ಟಿಸಿ, ಇದರ ಮೇಲೆ ಕರಿಎಳ್ಳು ಉದುರಿಸಿ ಪೂರಿ ಅಳತೆಗೆ ಲಟ್ಟಿಸಿ, ಕಾದ ಎಣ್ಣೆಯಲ್ಲಿ ಕರಿದಾಗ ಪೂರಿ ರೀತಿ ಉಬ್ಬಿ ತಯಾರಾಗುತ್ತದೆ. ಪ್ರಯಾಣಕ್ಕೆ ೨ ದಿನಗಳ ಕಾಲ ಕೆಡದೆ ಇರುತ್ತದೆ. ಶೇಂಗಾ ಚಟ್ನಿಪುಡಿ, ಮೊಸರು ಮತ್ತು ಕಾಯಿಚಟ್ನಿ ಜೊತೆ ಸವಿಯಲು ಚೆನ್ನಾಗಿರುತ್ತದೆ.