ಉತ್ತರ ಕರ್ನಾಟಕದಲ್ಲಿ ಜಾನಪದ ಸಂಸ್ಕøತಿ ಜೀವಂತಿಕೆ ಪಡೆದಿದೆ:ಕುಡ್ಡಳ್ಳಿ

ಕಲಬುರಗಿ:ಮೇ.4:ಉತ್ತರ ಕರ್ನಾಟಕದಲ್ಲಿ ಜಾನಪದ ಸಂಸ್ಕøತಿಯು ಜೀವಂತಿಕೆ ಪಡೆದಿದೆ ಎಂದು ಬಸವಂತರಾಯ ಕುಡ್ಡಳ್ಳಿ ಹೇಳಿದರು
ಅವರು ಇತ್ತೀಚಿಗೆ ಲಕ್ಕಮ್ಮ ಗ್ರಾಮೀಣ ಜಾನಪದ ಕಲಾ ಸಂಘ (ರಿ) ಗೋಳಾ (ಬಿ) ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ನಗರದ ಶ್ರೀ ಜಗಧೀಶ್ವರಿ ದೇವಸ್ತಾನ ಆವರಣ ಗಣೇಶ ನಗರದಲ್ಲಿ ಜನಪದ ಕಲಾ ಸೌರಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು ಅವರು ರಾಜ್ಯದಲ್ಲಿನ ಕೆಲ ಪ್ರದೇಶ ಜಾನಪದ ಪರಂಪರೆಯು ಈಗಲೂ ಮುಂದುವರೆಸಿಕೊಂಡು ಬಂದಿದೆ ಎಂದರು.

ಮುಖ್ಯ ಅತಿಥಿಗಳಾಗಿ ಶರಣಯ್ಯ ಸ್ವಾಮಿ ಕೋರಳ್ಳಿ, ಗೌತಮ ಗಣಜಲಖೇಡ, ರಾಜೇಂದ್ರ ವಗ್ಗೆ, ರಮೇಶ ಶಂಕರಕೇರಿ, ಹಣಮಂತ ಗುಂಜ ಬಬಲಾದ, ಸಂಸ್ಥೆಯ ಅಧ್ಯಕ್ಷ ಸಚೀನ ಅಲಂಕಾರ ವೇದಿಕೆಯ ಮೇಲೆ ಉಪಸ್ಥಿತರಿದ್ದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಘು ಪತ್ತಾರ ವಹಿಸಿದ್ದರು.

ನಂತರ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಸೂರ್ಯಕಾಂತ ಹೊಳೆಅವರಾದ, ಅವರು ಹಾರ್ಮೊನಿಯಂ ಸಾಥ ನಡೆಸಿಕೊಟ್ಟರು, ಸೋಮನಾಥ ಚೌಡಾಪೂರ, ಶಿವಶರಣಪ್ಪ ಮೇಳಕುಂದಿ, ಸಿದ್ರಾಮಪ್ಪ ಮುಂಡೋಡಗಿ, ಪರಮೇಶ್ವರ ಕಲಶೇಟ್ಟಿ, ಆಕಾಶವಾಣಿ ದೂರದರ್ಶನ ಕಲಾವಿದರಾದ ಅಣ್ಣಾರಾವ ಮತ್ತಿಮಡು, ಬಸಯ್ಯ ಗುತ್ತೇದಾರ, ಸೂರ್ಯಕಾಂತ ದಂಡೋತಿ, ಪ್ರಕಾಶ ಪೂಜಾರಿ, ಸೂರ್ಯಕಾಂತ ಗೊಬ್ಬುರವಾಡಿ, ವಿಜಯಲಕ್ಷ್ಮೀ ಕೆಂಗನಾಳ, ಚೇತನ ಬಿ.ಕೆ, ಜಗದೀಶ ಹೂಗಾರ ದೇಸಾಯಿ ಕಲ್ಲೂರ, ತಬಲಾ ಸಾಥ ನೀಡಿದರು ಇವರಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಟ್ಟರು.