41 ಕಾರ್ಮಿಕರ ರಕ್ಷಣೆ: ರಕ್ಷಣಾ ಕಾರ್ಯಕರ್ತರ ಸಾಹಸಕ್ಕೆ ರಾಷ್ಡ್ರಪತಿ, ಪ್ರಧಾನಿ ಶ್ಲಾಘನೆ

ನವದೆಹಲಿ,ನ.28- “ಉತ್ತರಾಖಂಡದ ಸುರಂಗದಲ್ಲಿ ಸಿಲುಕಿದ್ದ ಎಲ್ಲಾ ಕಾರ್ಮಿಕರನ್ನು ರಕ್ಷಣೆ ಮಾಡಿರುವ ರಕ್ಷಣಾ ತಂಡದ ಸಾಹಸಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

17 ದಿನಗಳಿಂದ ಸುರಂಗದಲ್ಲಿದ್ದ ಕಾರ್ಮಿಕರನ್ನು ರಕ್ಷಣೆ ಮಾಡಿದ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ, ಮುಖ್ಯಮಂತ್ರಿ ಪುಷ್ಕರ್ ಸಿಂಗ್ ದಾಮಿ ಸೇರಿದಂತೆ ಅನೇಕ ಕೇಂದ್ರ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇಡೀ ರಾಷ್ಟ್ರದ ಹೆಮ್ಮೆ : ರಾಷ್ಟ್ರಪತಿ

ರಾಷ್ಡ್ರಪತಿ ದ್ರೌಪದಿ ಮುರ್ಮು ಪ್ರತಿಕ್ರಿಯಿಸಿ ರಕ್ಷಣಾ ಪ್ರಯತ್ನವು ಅಡೆತಡೆಗಳನ್ನು ಎದುರಿಸಿ 17 ದಿನಗಳ ಕಾಲ ಅವರ ಶ್ರಮ ಮಾನವ ಸಹಿಷ್ಣುತೆಗೆ ಸಾಕ್ಷಿಯಾಗಿದೆ. ಇಡೀ ರಾಷ್ಟ್ರ ರಕ್ಷಣಾ ಕಾರ್ಯಕರ್ತರ ಶ್ರಮವನ್ನು ಶ್ಲಾಘಿಸಿದ್ದಾರೆ.

ಅಪಾಯದಲ್ಲಿಯೂ ಅತ್ಯಂತ ಕಷ್ಟಕರವಾದ ಪಾರುಗಾಣಿಕಾ ಕಾರ್ಯಾಚರಣೆಗಳಲ್ಲಿ ತೊಡಗಿದ ಕೆಲಸ ಮೆಚ್ಚುವಂತಹಿದು. ನಿರ್ವಹಿಸಲು ನಂಬಲಾಗದ ಗ್ರಿಟ್ ಮತ್ತು ನಿರ್ಣಯದಿಂದ ಕಾರ್ಯನಿರ್ವಹಿಸಿದ ತಂಡಗಳು ಮತ್ತು ಎಲ್ಲಾ ತಜ್ಞರನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ.

ಭಾವುಕರನ್ನಾಗಿಸಿದೆ: ಪ್ರಧಾನಿ

ಉತ್ತರಕಾಶಿಯಲ್ಲಿ ಕಾರ್ಮಿಕ ಸಹೋದರರ ರಕ್ಷಣಾ ಕಾರ್ಯಾಚರಣೆಯ ಯಶಸ್ಸು ಎಲ್ಲರನ್ನೂ ಭಾವುಕರನ್ನಾಗಿಸುತ್ತಿದೆ. ಸುರಂಗದಲ್ಲಿ ಸಿಕ್ಕಿಬಿದ್ದಿರುವ ಸ್ನೇಹಿತರಿಗೆ ಹೇಳಲು ಬಯಸುತ್ತೇನೆ ನಿಮ್ಮ ಧೈರ್ಯ ಮತ್ತು ತಾಳ್ಮೆ ಎಲ್ಲರಿಗೂ ಸ್ಪೂರ್ತಿದಾಯಕ ಎಂದು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಉತ್ತಮ ಆರೋಗ್ಯ, ಸುದೀರ್ಘ ಕಾಯುವಿಕೆಯ ನಂತರ ನಮ್ಮ ಸ್ನೇಹಿತರು ಈಗ ತಮ್ಮ ಪ್ರೀತಿಪಾತ್ರರನ್ನು ಭೇಟಿಯಾಗುತ್ತಾರೆ ಎಂಬುದು ತುಂಬಾ ತೃಪ್ತಿಯ ವಿಷಯವಾಗಿದೆ.ಸವಾಲಿನ ಸಮಯದಲ್ಲಿ ಈ ಎಲ್ಲಾ ಕುಟುಂಬಗಳು ತೋರಿದ ತಾಳ್ಮೆ ಮತ್ತು ಧೈರ್ಯವನ್ನು ಸಾಕಷ್ಟು ಪ್ರಶಂಸಿಸಲಾಗುವುದಿಲ್ಲ. ಬದಲಾಗಿ ಎಲ್ಲರಿಗೂ ಸಹ ನಮಸ್ಕರಿಸುತ್ತೇನೆ ಎಂದಿದ್ದಾರೆ.

ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಎಲ್ಲಾ ಜನರ ಆತ್ಮ, ಅವರ ಶೌರ್ಯ ಮತ್ತು ಸಂಕಲ್ಪ ನಮ್ಮ ಕಾರ್ಮಿಕ ಸಹೋದರರಿಗೆ ಹೊಸ ಜೀವನವನ್ನು ನೀಡಿದೆ. ಈ ಕಾರ್ಯಾಚರಣೆಯಲ್ಲಿ ತೊಡಗಿರುವ ಪ್ರತಿಯೊಬ್ಬರೂ ಮಾನವೀಯತೆ ಮತ್ತು ಸಾಂಘಿಕತೆಗೆ ಅದ್ಭುತ ಉದಾಹರಣೆ‌ ನೀಡಿದ್ದಾರೆ ಎಂದಿದ್ದಾರೆ.

ರಕ್ಷಣೆ ಸಂತಸ ತಂದಿದೆ : ಗಡ್ಕರಿ

ಕೇಂದ್ರ ಸಚಿವ ನಿತಿನ್ ಗಡ್ಕರಿ “ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ಯಶಸ್ವಿಯಾಗಿ ರಕ್ಷಿಸಿರುವುದು ಸಂತಸ ತಂದಿದೆ ಎಂದಿದ್ದಾರೆ.

ಪಿಎಂಒ ನೇತೃತ್ವದಲ್ಲಿ ಎಲ್ಲಾ ಏಜೆನ್ಸಿಗಳು ಹಗಲಿರುಳು ಶ್ರಮಿಸಿವೆ. ಕೆಲಸ ಮಾಡಿದ ಕಾರ್ಮಿಕರಿಗೆ ಶುಭಾಶಯಗಳು . ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡಿದ ಕಾರ್ಮಿಕರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಈಗ ಸುರಂಗದ ಸುರಕ್ಷತಾ ಲೆಕ್ಕಪರಿಶೋಧನೆಯನ್ನೂ ಮಾಡಲಾಗುವುದು ಎಂದಿದ್ದಾರೆ.