
ಉತ್ತರಕಾಶಿ, ಏ ೬- ಉತ್ತರಾಖಂಡದ ಉತ್ತರಕಾಶಿಯಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು. ರಿಕ್ಟರ್ ಮಾಪಕದಲ್ಲಿ ಬೆಳಗ್ಗೆ ೩.೦ ತೀವ್ರತೆ ದಾಖಲಾಗಿದೆ.
ಉತ್ತರಾಖಂಡದ ಉತ್ತರಕಾಶಿಯಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಬೆಳಗ್ಗೆ ೩.೦ ತೀವ್ರತೆಯ ಭೂಕಂಪ ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ. ಯಾವುದೇ ಪ್ರಾಣಹಾನಿ ಕುರಿತು ವರದಿಯಾಗಿಲ್ಲ.
ಗುರುವಾರ ಬೆಳಗಿನ ಜಾವ ಉತ್ತರಕಾಶಿಯ ೫ ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ಏಪ್ರಿಲ್ ೧ ರಂದು, ಪೋರ್ಟ್ಬ್ಲೇರ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ೧೪೦ ಕಿಮೀ ಇಎನ್‌ಇ ನಲ್ಲಿ ರಿಚರ್ ಮಾಪಕದಲ್ಲಿ ೪.೦ ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಎನ್‌ಸಿಎಸ್‌ಮಾಹಿತಿ ನೀಡಿದೆ. ರಾತ್ರಿ ೧೧.೫೬ರ ಸುಮಾರಿಗೆ ಭೂಕಂಪ ಸಂಭವಿಸಿತ್ತು.
ವಿಪತ್ತುಗಳ ಪರಿಣಾಮವು ಕೇವಲ ಸ್ಥಳೀಯವಾಗಿರುವುದಿಲ್ಲ. ಒಂದು ಪ್ರದೇಶದಲ್ಲಿನ ನೈಸರ್ಗಿಕ ವಿಪತ್ತುಗಳು ವಿಭಿನ್ನ ದೇಶ, ಪ್ರದೇಶಗಳ ಮೇಲೆಯೂ ಪರಿಣಾಮ ಬೀರುತ್ತವೆ ಎಂದು ಪ್ರಧಾನಿ ಮೋದಿ ಹೇಳಿದ್ದರು.