`ಉತ್ತರಕಾಂಡ’ ಚಿತ್ರದಲ್ಲಿ  ಶಿವರಾಜ್ ಕುಮಾರ್

ಡಾಲಿ ಧನಂಜಯ  ಮತ್ತು ಮೋಹಕ ತಾರೆ ರಮ್ಯ ನಟಿಸುತ್ತಿರುವ ಬಹು ನಿರೀಕ್ಷಿತ ” ಉತ್ತರಕಾಂಡ” ಚಿತ್ರದ  ಆರಂಭದಿಂದಲೂ ಕುತೂಹಲ ಮೂಡಿಸಿದೆ.ಇದೀಗ ಚಿತ್ರದ ಪ್ರಮುಖ ಪಾತ್ರದಲ್ಲಿ  ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಟಿಸುತ್ತಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸದಭಿರುಚಿ ಚಿತ್ರಗಳನ್ನು ನೀಡುತ್ತಿರುವ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದ, ರೋಹಿತ್ ಪದಕಿ ನಿರ್ದೇಶನ ಮಾಡುತ್ತಿದ್ದು ಇದೀಗ ಚಿತ್ರತಂಡಕ್ಕೆ ಶಿವರಾಜ್ ಕುಮಾರ್ ಸೇರ್ಪಡೆಯಿಂದ ಚಿತ್ರ ಮತ್ತಷ್ಟು ಕುತೂಹಲ ಮೂಡಿಸಿದೆ.