
ಕಾರವಾರ,ಜ8 ಮೊದಲನೆ ಹಂತದ ಕೋವಿಡ್-19 ಲಸಿಕಾ ಕಾರ್ಯಕ್ರಮಕ್ಕೆ ಉತ್ತರಕನ್ನಡ ಜಿಲ್ಲೆಯಲ್ಲಿ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಇಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲೆಯ ಜಿಲ್ಲೆಯ ಅಯ್ದ 6 ಸ್ಥಳಗಳಲ್ಲಿ ಲಸಿಕೆ ಸಾಗಣೆಯಿಂದ ಹಿಡಿದು ಅದನ್ನು ವ್ಯಕ್ತಿಗೆ ಹಾಕುವವರೆಗಿನ ವಿವಿಧ ಹಂತಗಳ ಪ್ರಯೋಗಾತ್ಮಕ ಅಣಕು (ಡ್ರೈರನ್) ನಡೆಸಲಾಯಿತು.
ಇಂದು ಶುಕ್ರವಾರ ಬೆಳಗ್ಗೆ 10 ಗಂಟೆಗೆ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೈತಕೋಲ್ನ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಶಿರಸಿಯ ಟಿಎಸ್ಎಸ್ ಆಸ್ಪತ್ರೆ, ಹೆಗಡೆಕಟ್ಟಾದ ಪ್ರಾಥಮಿಕ ಆರೋಗ್ಯ ಕೇಂದ್ರ, ಹೊನ್ನಾವರದ ತಾಲೂಕು ಆಸ್ಪತ್ರೆ ಮತ್ತು ದಾಂಡೇಲಿಯ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಡ್ರೈ ರನ್ ನಡೆಯಿತು.
ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಹಾಗೂ ಸಂಸ್ಥೆಯ ನಿರ್ದೇಶಕ ಡಾ. ಗಜಾನನ ನಾಯಕ ಉಪಸ್ಥಿತರಿದ್ದು, ಡ್ರೈರನ್ ಲಸಿಕಾ ಕಾರ್ಯ ಪರಿಶೀಲಿಸಿದರು.