ಉತ್ತಮ ಹವ್ಯಾಸಗಳಿಂದ ಭವಿಷ್ಯ ರೂಪಿಸಿಕೊಳ್ಳಬಹುದು

ಭಾಲ್ಕಿ:ಜ.2:ಉತ್ತಮ ಹವ್ಯಾಸಗಳಿಂದ ವಿದ್ಯಾರ್ಥಿಗಳು ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂದು ಡಿವೈಎಸ್ಪಿ ಪೃಥ್ವಿಕ್ ಶಂಕರ್ ಅಭಿಪ್ರಾಯಪಟ್ಟರು.

ಅಲ್ಲಮಪ್ರಭು ಬಿ.ಇಡಿ. ಕಾಲೇಜ್ ತಳವಾಡ(ಕೆ) ನಲ್ಲಿಬಿ.ಇಡಿ. ದ್ವೀತಿಯ ವರ್ಷದ ಪ್ರಶಿಕ್ಷಣಾರ್ಥಿಗಳ ಬೀಳ್ಕೋಡುಗೆ ಸಮಾರಂಭ ಉದ್ದೇಶಿಸಿ ಶಿಸ್ತು ಜೀವನದಲ್ಲಿ ಬದಲಾವಣೆ ತರುತ್ತದೆ. ಒಳ್ಳೆಯವರ ಗೆಳೆತನ ಮಾಡಬೇಕು.ನಿಮ್ಮ ಜೀವನದ ನಿರ್ಧಾರಗಳನ್ನು ನೀವೆ ತೆಗೆದುಕೊಂಡು ಆದರ್ಶ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ಎಂದರು.
   ದಿವ್ಯ ನೇತೃತ್ವ ವಹಿಸಿದ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ ಶಿಕ್ಷಕ ಸಮಾಜದ ನಿರ್ಮಾತೃ. ಶಿಕ್ಷಕನು ಸಮಾಜದ ಎಲ್ಲಾ ರಂಗಳಲ್ಲಿ ಕಾರ್ಯ ನಿರ್ವಹಿಸುವವರನ್ನು ತಯಾರಿಸುತ್ತಾನೆ. ಆದ್ದರಿಂದ ಶಿಕ್ಷಕನ ಹೊಣೆಗಾರಿಕೆ ಅಗತ್ಯ. "ಸಮರ್ಥ ಶಿಕ್ಷಕ ಸಮರ್ಥ ಮಕ್ಕಳನ್ನು ನಿರ್ಮಿಸುತ್ತಾನೆ" ಎಂದರು.
  ಈ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ಆರತಿ ಪಾತ್ರೆ ನೀಡಿ ನಿಜವಾದ ಶಿಕ್ಷಕನಲ್ಲಿ ಶಿಸ್ತು, ಕರುಣೆ, ಕ್ಷಮೆ ಗುಣಗಳಿರಬೇಕು. ಜೀವನದಲ್ಲಿ ನಿರ್ದಿಷ್ಟ ಗುರಿ ತಲುಪಲು ಛಲವಿರಬೇಕು. ಯೋಜನೆ ಮಾಡಿಕೊಂಡು ನಿರಂತರ ಅಭ್ಯಾಸದಲ್ಲಿ ನಿರತನಾಗಿರಬೇಕು ಎಂದರು.
ಕಾಲೇಜಿನ ಪ್ರಾಚಾರ್ಯ ಮಹಾದೇವ ಬಿ.ಪಟ್ನೆ ಪ್ರಸ್ತಾವಿಕ ಮಾತನಾಡಿ ಡಾ. ಬಸವಲಿಂಗ ಪಟ್ಟದ್ದೇವರು ಶಿಕ್ಷಣ ಮಹಾವಿದ್ಯಾಲಯ ಸ್ಥಾಪಿಸುವುದರ ಜೊತೆಗೆ ಸಮಾಜಕ್ಕೆ ಉತ್ತಮ ಶಿಕ್ಷಕರನ್ನು ನೀಡಲಾಗುತ್ತಿದೆ. ಪ್ರಾಯೋಗಿಕತೆಗೆ ಆದ್ಯತೆ ನೀಡಿ ಸಂಸ್ಕಾರಯುತ ಶಿಕ್ಷಣ ನೀಡಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಹೆಚ್. ನರಸಿಂಹಯ್ಯ ರಾಜ್ಯ ವಿಜಾÐನ ಪ್ರಶಸ್ತಿಗೆ ಆಯ್ಕೆಯಾದ ಚನ್ನಬಸವೇಶ್ವರ ಪದವಿ ಮಹಾವಿದ್ಯಾಲಯದ ಉಪನ್ಯಾಸಕ ಸುಭಾಷ ನೇಳಗೆ ಅವರನ್ನು ಸನ್ಮಾನಿಸಲಾಯಿತು.
ಸುಕನ್ಯಾ, ಪರಮೇಶ್ವರ, ಅಂಬಿಕಾ ಅನಿಸಿಕೆ ವ್ಯಕ್ತಪಡಿಸಿದರು. ಉಪನ್ಯಾಸಕರಾದ ಪರಶುರಾಮ ಕರಣಂ, ಮಲ್ಲಪ್ಪಾ ಹಾಸಗೊಂಡ, ನೀಲಾಂಬಿಕಾ ಎಸ್, ಡಾ. ಮಕ್ತುಂಬಿ ಎಂ ಉಪಸ್ಥಿತರಿದ್ದರು.

ಪಲ್ಲವಿ ನಿರೂಪಿಸಿದರೆ, ಶ್ರುತಿ ವಂದಿಸಿದರು.