ಉತ್ತಮ ಸೇವೆ ಮಹತ್ವ ಹೆಚ್ಚಾಗುವಂತೆ ಮಾಡುತ್ತದೆ:ಅಮರೇಶ

ಸೈದಾಪುರ:ಸೆ.3:ವೃತ್ತಿಯಲ್ಲಿನ ಉತ್ತಮ ಸೇವೆ ನಿವೃತ್ತಿಯ ನಂತರದಲ್ಲಿ ನಮ್ಮ ಮಹತ್ವ ಹೆಚ್ಚಾಗುಂತೆ ಮಾಡುತ್ತದೆ ಎಂದು ಶಿಕ್ಷಣ ಪ್ರೇಮಿ ಡಾ.ಅಮರೇಶ.ಡಿ.ಗೌಡರ ಅಭಿಪ್ರಾಯಪಟ್ಟರು.
ವಯೋನಿವೃತ್ತಿ ಹೊಂದಿದ ದೈಹಿಕ ಶಿಕ್ಷಕ ಮಲ್ಲಿಕಾರ್ಜುನ ಬಳೆ ಅವರ ಸೈದಾಪುರ ನಿವಾಸದಲ್ಲಿ ಸನ್ಮಾನಿಸಿ ಮಾತನಾಡಿದರು. ದೈಹಿಕ ಶಿಕ್ಷಕರಾಗಿದ್ದ ಬಳೆ ಅವರು ಸಾಹಿತ್ಯ, ಸಂಗೀತ, ಜನಪರವಾದ ಸೇವೆ ಮನೋಭಾನವೆಯ ಗುಣಗಳನ್ನು ಹೊಂದಿದ್ದರು. ಅವರ ನಿವೃತ್ತಿ ಜೀವನ ಸುಖಕರವಾಗರಲಿ ಎಂದು ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಲ್ಲಿಕಾರ್ಜನ ಬಳೆ ಮಾತನಾಡಿ, ಸೈದಾಪುರ ಜನರ ಪ್ರೀತಿ ವಿಶ್ವಾಸ ಹಾಗೂ ನಾನು ಕೆಲಸ ಮಾಡುವ ಸಹ ಉದ್ಯೋಗಿಗಳ ಸಹಕಾರ ಉತ್ತಮ ಸೇವೆ ಸಲ್ಲಿಸಲು ಸಾಧ್ಯವಾಯಿತು. ನನ್ನ ಹೆಚ್ಚಿನ ಸೇವಾ ದಿನಗಳನ್ನು ಇಲ್ಲಿ ಕಳೇದಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಓಂಕಾರ ತೀವಾರಿ, ನಿವೃತ್ತಾ ಶಿಕ್ಷಕ ಗಂಗಾಧರ ಚಂದ್ರಗಿರಿ, ಮಾಜಿ ವಲಯ ಕಸಾಪ ಅಧ್ಯಕ್ಷ ಶಿಕ್ಷಕ ಸಿದ್ಧಲಿಂಗಯ್ಯ ಸ್ವಾಮಿ ಸೇರಿದಂತೆ ಇತರರಿದ್ದರು.