ಉತ್ತಮ ಸೇವೆಗೆ ಮತ್ತೊಂದು ಹೆಸರು ಫಕೀರ್ ಅಹಮ್ಮದ್

ಹುಮನಾಬಾದ್ :ಆ.8:ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢ ಶಾಲಾ ವಿಭಾಗದಲ್ಲಿ ಸುಮಾರು 34 ವರ್ಷಗಳ ಕಾಲ ಸತತವಾಗಿ ಸೇವೆ ಸಲ್ಲಿಸಿದ ಫಕೀರ್ ಅಹ್ಮದ ವಿಜ್ಞಾನ ಸಹಾಯಕರು ನಿವೃತ್ತಿ ಹೊಂದಿದ ಪ್ರಯುಕ್ತ ಸದರಿಯವರಿಗೆ ಹೃದಯ ಸ್ಪರ್ಶಿಯಾಗಿ ಬಿಳ್ಕೋಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಶೇಖ್ ಮಹೆಬೂಬ್ ಪಟೇಲ್ ಜಿಲ್ಲಾ ಅಧ್ಯಕ್ಷರು ಪ್ರೌಢಶಾಲಾ ಶಿಕ್ಷಕರ ಸಂಘ ಬೀದರ ಮಾತನಾಡುತ್ತ ಸಮಯ ಪಾಲನೆ ಕರ್ತವ್ಯ ನಿಷ್ಠೆ, ಉತ್ತಮ ಸೇವೆ ನಿರ್ವಹಿಸುವಲ್ಲಿ ಫಕೀರ್ ಅಹ್ಮದ್ ಪಾತ್ರ ಅತ್ಯಂತ ಪ್ರಮುಖ ಎಂದರು. ಪರಮೇಶ್ವರ. ಜಿ, ಮಾತನಾಡುತ್ತಾ ಫಕೀರ್ ಅಹಮ್ಮದ್ ರವರು ಸಲ್ಲಿಸಿದ ಉತ್ತಮ ಸುದೀರ್ಘ ಸೇವೆಯನ್ನು ವಿವರಿಸಿದರು. ವೀರೇಂದ್ರ ರೆಡ್ಡಿ ಜಂಪಾ ಉಪಾಧ್ಯಕ್ಷರು ಪ್ರೌಢ ಶಾಲಾ ಶಿ.ಸಂಘ ಮಾತನಾಡುತ್ತ . ಫಕೀರ್ ಅಹಮ್ಮದ್ ರವರು
ಸರಕಾರಿ ಕೆಲಸ ದೇವರ ಕೆಲಸ
ಎಂದು ಅತ್ಯಂತ ಶ್ರದ್ಧೆಯಿಂದ ಸೇವೆ ಸಲ್ಲಿಸಿದ್ದಾರೆಂದು ತಿಳಿಸಿದರು. ರವೀಂದ್ರ ಮಲಶೆಟ್ಟಿ ಉಪಾಧ್ಯಕ್ಷರು ಅಬ್ದುಲ್ ಸಾಬ್ ತಾಂಬೆ ಜಿಲ್ಲಾ ಉಪಾಧ್ಯಕ್ಷರು ಮಾತನಾಡಿದರು. ಬಸಿರೋದ್ದೀನ್, ಅಸ್ಲಂ ಆರೀಫ್ ಹುಸೇನ್, ಜಯಪ್ರಕಾಶ್, ಕಾಶೀನಾಥ್ ಸ್ವಾಮಿ, ಕುಮಾರ ಗೋವಿಂದ ಶ್ರೀಮತಿ ಫರ್ ಹಿನ್ನಿಸಾ ಬೇಗಂ, ಪ್ರವೀಣಾ, ಮೀರಾಗಂಜಕರ್ ತ್ರಿವೇಣಿ, ಮಹೇಶ್ವರಿ, ಇದ್ದರು.