ಉತ್ತಮ ಸಾಧನೆ

(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಫೆ15ಃ ಪಟ್ಟಣದ ಬಿಸಿಎನ್ ವಿದ್ಯಾಸಂಸ್ಥೆಯ ಬಿಸಿಎನ್ ಸಿರಿ ವಿಜ್ಞಾನ, ವಾಣಿಜ್ಯ ಪದವಿ ಪೂರ್ವ ಕಾಲೇಜಿನ 2023-24 ನೇ ಸಾಲಿನ ವಿದ್ಯಾರ್ಥಿಗಳು ಜೆಇಇ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದು, ಬುಧವಾರ ಕಾಲೇಜಿನಲ್ಲಿ ಸಾಧನೆ ಮಾಡಿದ ಶ್ರೀದೇವಿ ಜೋಳದ, ಸುಪ್ರೀಯಾ ನಾಯಕ್ ಅವರನ್ನು ಸಂಸ್ಥೆಯ ನಿರ್ದೇಶಕ ಲೊಹಿತ್ ನೆಲವಿಗಿಯವರು ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಯಾವುದೇ ವಿದ್ಯಾರ್ಥಿ ಸಾಧನೆ ಮಾಡಬೇಕೆಂಬ ಹಸಿವನ್ನು ಹೊಂದಿರಬೇಕು, ಸಾಧನೆ ಮಾಡುವದಕ್ಕೆ ಹಲವಾರು ರೀತಿಯ ಸಹಾಯಗಳು ದೊರೆಯುತ್ತವೆ, ಅವುಗಳ ಸದುಪಯೋಗಪಡಿಸಿಕೊಂಡು ನಿಶ್ಚಿತ ಗುರಿಯನ್ನು ಮುಟ್ಟಬೇಕು. ವಿದ್ಯಾರ್ಥಿ ಜೀವನದಲ್ಲಿ ಕಠಿಣ ಪರಿಶ್ರಮ, ಏಕಾಗ್ರತೆ, ಸತತ ಅಭ್ಯಾಸ, ಪ್ರಾಮಾಣಿಕತೆ ಇವುಗಳನ್ನು ಇಟ್ಟುಕೊಂಡು ಮುಂದುವರೆದರೆ ಸಾಧನೆಯ ಹಾದಿ ಸುಲಭವಾಗುತ್ತದೆ, ಈ ನಿಟ್ಟಿನಲ್ಲಿ ಬಿಸಿಎನ್ ಸಿರಿ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಈ ವರ್ಷ ಪ್ರಥಮ ಬಾರಿಗೆ ಜೆಇಇ ಪರೀಕ್ಷೆಯನ್ನು ಎದುರಿಸಿ ಉತ್ತಮ ಸಾಧನೆ ಮಾಡಿದ್ದು ಸಂಸ್ಥೆಗೆ ಕೀರ್ತಿ ತರುವಂತಾಗಿದೆ. ಕಾಲೇಜಿನಲ್ಲಿ ಕಳೆದೆರಡು ವರ್ಷಗಳಿಂದ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಉತ್ತಮ ಶಿಕ್ಷಣ ದೊರೆಯುತ್ತಿದ್ದು, ಇದೀಗ ಜೆಇಇ ಪರೀಕ್ಷೆ ಎದುರಿಸಿದ ಮಕ್ಕಳು ಉತ್ತಮ ಅಂಕಗಳನ್ನು ಗಳಿಸಿರುವದು ಹೆಮ್ಮೆಯ ಸಂಗತಿಯಾಗಿದೆ. ಇದೀಗ ಪಟ್ಟಣದ ಜೆಇಇ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಧನೆಗೆ ಎಲ್ಲೇಡೆ ಮೆಚ್ಚುಗೆ ವ್ಯಕ್ತವಾಗಿದ್ದು, ಇನ್ನೂ ಹೆಚ್ಚಿನ ಪರಿಶ್ರಮದಿಂದ ಮುಂದಿನ ಗುರಿಯನ್ನು ತಲುಪುವಂತಾಗಲಿ ಎಂದು ಹಾರೈಸಿದರು. ಸಾಧನೆ ತೋರಿದ ವಿದ್ಯಾರ್ಥಿಗಳು ಅನಿಸಿಕೆ ಹಂಚಿಕೊಂಡರು.
ಈ ಸಂದರ್ಭದಲ್ಲಿ ದಿಗಂಬರ ಪೂಜಾರ, ಉಪನ್ಯಾಸಕರಾದ ಗಿರೀಶ ರಡ್ಡಿ, ಬಸವರಾಜ, ವೃಷಭ, ಮಂಜುನಾಥ ಬಂಡಿವಾಡ, ನಾಗರತ್ನಾ, ಬಾಷಾಸಾಬ, ನಾಜ್ ಹೆಸರೂರ, ಖುಷಾ ಅರಳಿ, ವಿದ್ಯಾ, ಸುಧಾರಾಣಿ, ರಮೇಶ, ಅಭಿಲಾಷಾ, ಮೇಷಾ, ಶಶಾಂಕ ಹಾಗೂ ಸಿಬ್ಬಂದಿವರ್ಗ ಮುಂತಾದವರಿದ್ದರು.