ಉತ್ತಮ ಸಾಧನೆಗೆ ಶಿಸ್ತು ಅತಿ ಮುಖ್ಯ:ಬೆಳಗುಂದಿ

ಸೈದಾಪುರ:ಆ.14:ಉತ್ತಮ ಸಾಧನೆಗೆ ಶಿಸ್ತು ಅತಿ ಮುಖ್ಯವಾಗಿದೆ. ಇದನ್ನು ಪೋಷಕರು ಸೇರಿದಂತೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವ ಪ್ರಯತ್ನ ಮಾಡಬೇಕು ಎಂದು ವಿದ್ಯಾ ವರ್ಧಕ ಸಂಸ್ಥೆಯ ಅಧ್ಯಕ್ಷ ಸಣ್ಣ ಸಿದ್ರಾಮಪ್ಪಗೌಡ ಬೆಳಗುಂದಿ ಅಭಿಪ್ರಾಯಪಟ್ಟರು.

ಇಲ್ಲಿನ ಮಲ್ಹಾರ ಕಾರಡ್ಡಿ ಬಸವಂತರಾಯ ಮತ್ತು ಸಿದ್ದಪ್ಪ ಸ್ಮಾರಕ ವಿದ್ಯಾ ವರ್ಧಕ ಪದವಿ ಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಹಣಕ್ಕಿಂತ ವ್ಯಕ್ತಿತ್ವ ಮಹತ್ವದ್ದಾಗಿದೆ. ಮಾನವೀಯ ಮೌಲ್ಯಗಳನ್ನು ನಮ್ಮದಾಗಿಸಿಕೊಳ್ಳಬೇಕು. ಈ ವಿದಧ ಗುಣಗಳನ್ನು ನಾವು ಶಿಕ್ಷಕರು, ಉಪಾನ್ಯಾಸಕರಿಂದ ಪಡೆಯಲು ಸಾಧ್ಯ. ಗುರುವಿನ ಸ್ಥಾನ ಅಂತ್ಯಂತ ಶ್ರೇಷ್ಠವಾದದು ಅವರನ್ನು ಗೌರವದಿಂದ ಕಾಣುವರು ಉತ್ತಮ ಸಾಧಕರಾಗುತ್ತಾರೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಬಳಿಚಕ್ರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಾಹಾಂತೇಶ ಕಲಾಲ ಮಾತನಾಡಿ, ಉತ್ತಮ ಸಾಧನೆಗೆ ಸತತ ಪ್ರಯತ್ನ ಅತಿ ಮುಖ್ಯವಾಗಿದೆ. ಬಂದ ಫಲಿತಾಂಶವನ್ನು ಸಕರಾತ್ಮಾಕವಾಗಿ ಪರಿಗಣಿಸಿ ಸಾಮಾಥ್ರ್ಯಕ್ಕೆ ಅನುಗುಣವಾಗಿ ಗುರಿ ಇಟ್ಟುಕೊಂಡು  ಯಾರು ಪರಿಶ್ರಮದಿಂದ ಅಭ್ಯಾಸ ಮಾಡುತ್ತಾರೆ ಅವರು ತಮ್ಮ ಜೀವನ ರೂಪಿಸಿಕೊಳ್ಳುತ್ತಾರೆ ಎಂದು ತಾವು ಕಲಿತ ಶಾಲಾ ದಿನಗಳ ಗೆಳೆಯರನ್ನು ನೆನಪಿಸಿಕೊಂಡು ಅವರ ಸಾಧನೆಗಳೊಂದಿಗೆ ತಿಳಿಸಿದರು.
ಪ್ರಾಂಶುಪಾಲ ಜಿ.ಎಂ.ಗುರುಪ್ರಸಾದ ಅಧ್ಯಕ್ಷತೆ ವಹಿಸಿದ್ದರು. ಸಹ ಕಾರ್ಯದರ್ಶಿ ಕೆ.ಬಿ.ಗೋವರ್ಧನ, ಕೋಶಧ್ಯಕ್ಷ ಮುಕುಂದಕುಮಾರ ಅಲಿಝಾರ, ಆಡಳಿತ ಮಂಡಳಿಯ ಸದಸ್ಯರಾದ ಬೂದೆಪ್ಪಗೌಡ ಪಾಟೀಲ, ಸಿದ್ರಾಮಪ್ಪಗೌಡ ಗೊಂದೆಡಗಿ, ಚೆನ್ನಾರಡ್ಡಿ ಹುಣಸೇಮರ, ಸೂರ್ಯಪ್ರಕಾಶ ಆನಂಪಲ್ಲಿ, ಮುಖ್ಯಗುರು ಲಿಂಗಾರಡ್ಡಿ ನಾಯಕ, ಪ್ರಾಂಶುಪಾಲ ಹಂಪಣ್ಣ ಸಜ್ಜನಶೆಟ್ಟಿ, ಕರಬಸಯ್ಯ ದಂಡಿಗಿಮಠ, ಉಪನ್ಯಾಸಕರು ಸೇರಿದಂತೆ ಇತರರಿದ್ದರು. ಕೆ.ಮುಂಜು ಸ್ವಾಗತಿಸಿದರು. ಚಂದ್ರಕಲಾ ಪ್ರಾರ್ಥಾನಾಗೀತೆ ಹಾಡಿದಳು. ಕನ್ನಡ ಉಪನ್ಯಾಸಕ ಚಂದ್ರಶೇಖರ ಡೊಣ್ಣೆಗೌಡ ನಿರೂಪಿಸಿದರು. ವಿದ್ಯಾರ್ಥಿ ಸಾಬರೆಡ್ಡಿ ವಂದಿಸಿದನು.