ಉತ್ತಮ ಸಮಾಜ ನಿರ್ಮಾಣ ಮಾಡುವ ಅವಶ್ಯಕತೆ ಇದೆ

ಸಂಜೆವಾಣಿ ವಾರ್ತೆ

ದಾವಣಗೆರೆ.ಡಿ.13; ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ ನಗರ ಘಟಕದ ವತಿಯಿಂದ ನಗರದ ಆವರಗೆರೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಶ್ರೀ ಭರಮಪ್ಪ ಮೈಸೂರ್ ಅವರು ಉಪನ್ಯಾಸ ನೀಡಿ 12ನೇ ಶತಮಾನದ ಶರಣರ ವಚನಗಳು 21 ನೇ ಶತಮಾನಕ್ಕೂ ಪ್ರಸ್ತುತವಾಗಿವೆ.ನೈತಿಕ ಮೌಲ್ಯಗಳು ಅಧಃಪತನಕ್ಕೆ ಒಳಗಾಗಿ ಜನಜೀವನವು ದುರ್ಬರವಾಗುತ್ತಿರುವ ಇಂದಿನ ದಿನಮಾನಗಳಲ್ಲಿ ಅಳವಡಿಸಿಕೊಂಡು  ಉತ್ತಮ ಸಮಾಜವನ್ನು ನಿರ್ಮಾಣ ಮಾಡುವ ಅವಶ್ಯಕತೆ ಇದೆ ಎಂದು ತಿಳಿಸಿದರು 12ನೇ ಶತಮಾನದ ಶರಣರಂತೆ ಇಂದಿನ ಸಮಾಜವು ಸಹ ಕಾಯಕ ಜೀವಿಗಳಾಗಿ ಸತ್ಯಸಂದರಾಗಿ ಧೈರ್ಯ ಸ್ಥೈರ್ಯಗಳಿಂದ ಜೀವನವನ್ನು ಎದುರಿಸಬೇಕು, ಪಂಚೇಂದ್ರಿಯಗಳ ಮೇಲೆ ವಿಜಯವನ್ನು ಸಾಧಿಸುವ ಮೂಲಕ ಜೀವನದ ಕಷ್ಟಗಳನ್ನು ಎದುರಿಸಬೇಕೆಂದು ತಿಳಿಸಿದರು. ಶರಣ ಕೇಶವಮೂರ್ತಿ ಎಂ ಪಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು   ಶರಣ ಸಾಹಿತ್ಯ ಪರಿಷತ್ ದಾವಣಗೆರೆ ನಗರ ಘಟಕದ ಅಧ್ಯಕರಾದ ಎಂ ಪರಮೇಶ್ವರಪ್ಪ ಸಿರಿಗೆರೆ ವಹಿಸಿದ್ದರು.ಮಕ್ಕಳಿಗೆ ಎಂ.ಈ. ರುದ್ರಮನಿ ಬಹುಮಾನ ವಿತರಿಸಿದರು. ಎ.ಎಚ್.ಸಿದ್ದಲಿಂಗ ಸ್ವಾಮಿ ಕೆ. ಬಿ . ಪರಮೇಶ್ವರಪ್ಪ ,ಮಲ್ಲಿಕಾರ್ಜುನ ಸ್ವಾಮಿ, ಆವರಗೆರೆ ರುದ್ರಮುನಿ. ಎಂ ಎಸ್ ನಾಗರಾಜಪ್ಪ ,ಮುಂತಾದವರು ಭಾಗವಹಿಸಿದ್ದರು. ದತ್ತಿದಾನಿಗಳ ಪರಿಚಯವನ್ನು ಶರಣ ಸಿದ್ದೇಶ್ ಮಾಡಿದರು,ಶ್ರೀಮತಿ ಸೌಮ್ಯ ಸತೀಶ್ ಸ್ವಾಗತಿಸಿದರು.  ಬಿ ಟಿ ಪ್ರಕಾಶ್ ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ಟಿ.ನಾಗರಾಜ್ ನಿರ್ವಹಿಸಿದರು.