ಉತ್ತಮ ಸಮಾಜಕ್ಕಾಗಿ ಮತ ಚಲಾಯಿಸಲು ಮತದಾರ ಪಟ್ಟಿಯಲ್ಲಿ ಹೆಸರು ಸೇರಿಸಿ:ತಾಪಂ ಇಒ ಬಸವರಾಜ್ ಕರೆ

ವಡಗೇರಾ: ಮಾ.13:ತಾಲ್ಲೂಕು ಸ್ವೀಪ್ ಸಮಿತಿಯಿಂದ ಪಟ್ಟಣದ ತಾಲ್ಲೂಕು ಪಂಚಾಯತ್ ಕಚೇರಿಯಿಂದ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ಮತದಾನ ಜನ ಜಾಗೃತಿ ಮೂಡಿಸಲಾಯಿತು.

ಮತದಾನದ ಜನ ಜಾಗೃತಿ ಕಾರ್ಯಕ್ರಮಕ್ಕೆ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ್ ಸಜ್ಜನ ಅವರು ಚಾಲನೆ ನೀಡಿದರು. 2023ರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆ ಜಿಲ್ಲಾ ಚುನಾವಣೆ ಅಧಿಕಾರಿಗಳ ಆದೇಶದಂತೆ ಪಟ್ಟಣದಲ್ಲಿ ಮತದಾನದ ಜಾಗೃತಿ ಕಾರ್ಯಕ್ರಮ ಮಾಡಲಾಯಿತು. ಯುವ ಮತದಾರರು, ಮತದಾರರು ಮತದಾನದ ಪಟ್ಟಿಯಲ್ಲಿ ತಮ್ಮ ಹೆಸರು ಬಿಟ್ಟು ಹೋಗಿದಲ್ಲಿ. ಕೂಡಲೆ ಸಮೀಪದ ಬೂತ್ ಕೇಂದ್ರಕ್ಕೆ ಹಾಗೂ ಚುನಾವಣೆ ಕಚೇರಿಗೆ ಭೇಟಿ ನೀಡಿ ಅಗತ್ಯ ದಾಖಲೆ ನೀಡಿ ಹೆಸರು ಸೇರಿಸಲು ತಿಳಿಸಿದರು.

ರಸ್ತೆ ಉದ್ದಕ್ಕೂ ಮತದಾರರಿಗೆ ಜಾಗೃತಿಗೊಳ್ಳುವ “ಮತದಾನ ನಮ್ಮ ಹಕ್ಕು” ಮತದಾನ ನಮ್ಮ ಧ್ವನಿ ಮತ್ತು ‘ಉತ್ತಮ ಸಮಾಜಕ್ಕಾಗಿ ಮತದಾನ ಮಾಡಿ” ಎಂಬ ಘೋಷಣೆಯೊಂದಿಗೆ ನೂರಾರು ಮಹಿಳೆಯರು ಪಟ್ಟಣದ ಮಾರ್ಕೆಟ್ ಏರಿಯಾದಲ್ಲಿ ಮಾನವ ಸರ್ಪಳಿ ನಿರ್ಮಿಸಿ ಮತದಾನ ಅರಿವು ಮೂಡಿಸಿದರು. ಈ ವೇಳೆ ಪಿಡಿಒ ಮಲ್ಲಿಕಾರ್ಜುನ ಸಜ್ಜನ. ಟಿಪಿಎಂ ರೇಣುಕಾ. ಟಿಐಇಸಿ ದುರ್ಗೇಶ್.ಪವನಕುಮಾರ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.