ಉತ್ತಮ ಸಂಸ್ಕಾರವೇ ಸಂಪತ್ತು : ಮಾಧವ ಗುಡಿ

ಸಂಜೆವಾಣಿ ವಾರ್ತೆ,
ವಿಜಯಪುರ,ಮೇ.28:ಆಧುನಿಕ ಜೀವನ ಪದ್ದತಿಯಿಂದಾಗಿ ಪಾರಂಪರಿಕ ಸುಂದರ ಬದುಕಿನ ರಸವನ್ನು ಆಸ್ವಾದಿಸಲಾಗುತ್ತಿಲ್ಲ. ಬೆಳಗಿನಿಂದ ಸಾಯಂಕಾಲದವರೆಗೆ ನಾನು ಮತ್ತು ನನಗಾಗಿಯೇ ಎಂದು ಬಡಿದಾಡದೆ ಸಮಾಜ ಸೇವೆಯಲ್ಲಿ ತೊಡಗಬೇಕು. ಬೆಳ್ಳಿ, ಬಂಗಾರ ಆಸ್ತಿಗಿಂತ ಉತ್ತಮ ನಡೆ-ನುಡಿಯೇ ನೈಜ ಸಂಪತ್ತು ಎಂದು ಉಪನ್ಯಾಸಕ ಮಾಧವ ಗುಡಿ ಹೇಳಿದರು.
ವಿಜಯಪುರ ನಗರದ ಸ್ಟೇಷನ್ ರಸ್ತೆಗೆ ಹೊಂದಿಕೊಂಡಿರುವ ಪ್ರಸನ್ನಾಂಜನೇಯ ದೇವಾಲಯದಲ್ಲಿ ಸುಧೀಂದ್ರ ಭಜನಾ ಮಂಡಳಿಯವರು ಹಮ್ಮಿಕೊಂಡಿದ್ದ ಭಗವತ್ ಚಿಂತನ ಉಪನ್ಯಾಸ ಹಾಗೂ ಆರ್ಚಕರ ಸನ್ಮಾನ ಸಮಾರಂಭದಲ್ಲಿ ಉಪನ್ಯಾಸ ನೀಡುತ್ತಾ ಭಾಗ್ಯ ಬರಬೇಕಾದರೆ ಭಗವಂತನ ಕೃಪೆಬೇಕು. ಸತ್ಕಾರ್ಯಗಳಲ್ಲಿ ತೊಡಗಿ ಸತ್ಪಾತ್ರರ ಸೇವೆ ಮಾಡಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ವಿಶ್ವನಾಥ ಕುಲಕರ್ಣಿ ಅವರು ಮಾತನಾಡಿ, ಧ್ಯಾನ, ಯೋಗ, ಪ್ರಾರ್ಥನೆ, ಶೋಷಿತರಿಗೆ ಊರುಗೋಲಾಗಿ ನಿಲ್ಲುವುದೇ ಜೀವನದ ಸಾರ್ಥಕ್ಯ ಬದುಕಿನ ಪರಿಪೂರ್ಣತೆ. ಮುಕ್ತಿಯ ಮಾರ್ಗ ಜಗತ್ತಿಗೆ ಹೇಳಿಕೊಟ್ಟ ಭಾರತೀಯರು ಪಾಶ್ಚಾತ್ಯರ ಜೀವನ ಶೈಲಿಗೆ ಮಾರು ಹೋಗುತ್ತಿರುವುದು ವಿಪರ್ಯಾಸ. ಭವ್ಯ ಪರಂಪರೆಯನ್ನು ಮರೆತ ನಮ್ಮ ಜನಾಂಗಕ್ಕೆ ಎಚ್ಚರಿಸುವಲ್ಲಿ ಇಂತಹ ಸತ್ಸಂಗಗಳು ಸಹಾಯಕಾರಿಯಾಗುತ್ತವೆ ಎಂದರು.
ಅತಿಥಿಗಳಾದ ಬ್ರಾಹ್ಮಣ ಸಮಾಜದ ಅಧ್ಯಕ್ಷ ಮುಕುಂದ ಕುಲಕರ್ಣಿ ಅವರು, ಶಾಲಾ ಜೀವನದಲ್ಲಿ ನಾವೆಲ್ಲ ನೈತಿಕ ಶಿಕ್ಷಣ ಪಡೆದು ಬೆಳೆದವರು. ಆದರೆ ಪ್ರಸಿದ್ಧಿಗೋಸ್ಕರ, ಕೀರ್ತಿಗಾಗಿ ಹಂಬಲಿಸಿ ಸೋತು ಮೌಲ್ಯಗಳನ್ನು ಗಾಳಿಗೆ ತೂರಿದ್ದೇವೆ. ಮತ್ತೊಮ್ಮೆ ಸನಾತನ ಧರ್ಮದ ಆದರ್ಶಗಳನ್ನು ಬಿತ್ತರಿಸುವ ಕಾರ್ಯ ನಿರಂತರವಾಗಿರಬೇಕು ಎಂದರು.
ಸಮಾರಂಭದ ಸಂಯೋಜಕ ಅಂಬಾದಾಸ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿ, ಬೆಳಿಗ್ಗೆ ಕಸಗೂಡಿಸಿ ಸಗಣಿಯಿಂದ ಸಾರಿಸಿ ರಂಗೋಲಿ ಹಾಕಿ ಸಾಯಂಕಾಲ ತುಪ್ಪದ ದೀಪ ಹಚ್ಚುವ ಎಲ್ಲ ಆಚರಣೆಗಳು ವೈಜ್ಞಾನಿಕತೆಯಿಂದ ಕೂಡಿವೆ. ಘಂಟೆಯನಾದ ಶಂಕದನಿನಾದದ ಹಿಂದಿರುವ ಮನ ಮನಕ್ಕೂ ಆಗುವ ಆಹ್ಲಾದತೆಯನ್ನು ಅಥ್ರ್ಯೆಸಿಕೊಳ್ಳಲು ವಿಫಲರಾಗಿ ಅವುಗಳನ್ನು ಗೊಡ್ಡು ಸಂಪ್ರದಾಯ ಎಂದು ಹಳಿಯುವುದು ಸರಿಯಲ್ಲ. ದೇವ ಪೂಜೆ ಹಾಗೂ ಭಕ್ತರ ಕಷ್ಟ ಕಾರ್ಪಣ್ಯಕ್ಕೆ ಧ್ವನಿಯಾಗುವ ಆರ್ಚಕರ ಬದುಕು ಸಂಕಷ್ಟದಲ್ಲಿದೆ. ನಮಗೆ, ಒಳಿತು ಬಯಸುವ ಅವರಿಗೆ ಸಮಾಜವು ಸ್ಪಂದಿಸಬೇಕು ಎಂದರು.
ಪ್ರಧಾನ ಅರ್ಚಕÀ ಪೂರ್ಣ ಪ್ರಜ್ಞ ಆಚಾರ್ಯರನ್ನು ಸನ್ಮಾನಿಸಲಾಯಿತು. ಪ್ರಥಮೇಶ ಮನಗೂಳಿ ಆಂಜನೇಯ ಸ್ವಾಮಿ ದೇವಸ್ಥಾನದ ಇತಿಹಾಸ ಹೇಳಿದರು.
ಕಾರ್ಯಕ್ರಮದಲ್ಲಿ ಉಲ್ಲಾಸ ಪಾಟೀಲ, ಕೃಷ್ಣಾಜಿ ಕುಲಕರ್ಣಿ, ಆನಂದ ಕುಲಕರ್ಣಿ, ಸಂಪತ್ತ ಕುಲಕರ್ಣಿ, ದೇವಿಕಾ ತೊರಗಲ್, ಕೀರ್ತಿ ಮನಗೂಳಿ ಉಪಸ್ಥಿತರಿದ್ದರು.