ಉತ್ತಮ ಶೈಕ್ಷಣಿಕ ಸೇವೆಯತ್ತ ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯ : ಶರಣಬಸಪ್ಪ ದರ್ಶನಾಪೂರ

ಕಲಬುರಗಿ:ಜು.9:ಕರ್ನಾಟಕದ ಹಲವು ಮಠ ಮಾನ್ಯಗಳು ಹಾಗೂ ಸಂಘ ಸಂಸ್ಥೆಗಳು ಸಲ್ಲಿಸುತ್ತಿರುವ ಶೈಕ್ಷಣಿಕ ಸೇವೆ ಸಮಾಜ ಕಲ್ಯಾಣಕ್ಕೆ ಅನುಕೂಲ ಮಾಡಿಕೊಡುತ್ತಿದೆ. ಸರಕಾರಿ ಮಹಾವಿದ್ಯಾಲಯಕ್ಕಿಂತ ಖಾಸಗಿ ಸಂಘ ಸಂಸ್ಥೆಗಳ ಶೈಕ್ಷಣಿಕ ಸೇವೆ ಅಪರಿಮಿತ ಹಾಗೂ ಜನಪಯೋಗಿ ಕಾರ್ಯವಾಗಿದೆ. ಕಲ್ಯಾಣ ಕರ್ನಾಟಕದ ಅತ್ಯಂತ ಹಳೆಯ ಮಹಾವಿದ್ಯಾಲವೆಂದು ಮನೆ ಮಾತಾಗಿರುವ ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯವು ಉತ್ತಮ ತಾಂತ್ರಿಕ ಶಿಕ್ಷಣ ನೀಡುತ್ತಿದು, ಮುಂಬರುವ ದಿನಗಳಲ್ಲಿ ಮೊದಲ ವರ್ಷದ ವಿದ್ಯಾರ್ಥಿಗಳಿಗಾಗಿ ನಿರ್ಮಾಣ ವಾಗುತ್ತಿರುವ ಕಟ್ಟಡವು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಲೆಂದು ಸಣ್ಣ ಕೈಗಾರಿಕಾ ಮತ್ತು ಸಾರ್ವಜನಿಕ ಉದ್ಯಮ ವಲಯದ ಸಚಿವ ಹಾಗೂ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳಾದ ಶರಣಬಸಪ್ಪ ದರ್ಶನಾಪೂರ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಅವರು ಇಂದು ಇಲ್ಲಿನ ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಏಳು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮೊದಲ ವರುಷದ ವಿದ್ಯಾರ್ಥಿಗಳ ಕಟ್ಟಡದ ಅಡಿಗಲ್ಲು ಹಾಗೂ ಶಂಕು ಸ್ಥಾಪನೆಯನ್ನು ನೆರವೇರಿಸಿ ಮಾತನಾಡಿದರು.

ಇದೇ ಸಮಯದಲ್ಲಿ ತ್ಯಾಜ್ಯ ಸಾಮಗ್ರಿಗಳನ್ನು ಉಪಯೋಗಿಸಿ ನಿರ್ಮಾಣ ಮಾಡಿರುವ “ರೋಬೋಟ್” – ಸ್ಕ್ರ್ಯಾಪ್ ಆರ್ಟ ರೋಬೋಟನ್ನು ಉದ್ಘಾಟಿಸಿ ತ್ಯಾಜ್ಯ ವಸ್ತುಗಳ ಉತ್ತಮ ನಿರ್ವಹಣೆಗೆ ತಮ್ಮ ಮೆಚ್ಚುಗೆನ್ನು ವ್ಯಕ್ತಪಡಿಸಿದರು. ತ್ಯಾಜ್ಯ ವಸ್ತುಗಳಿಂದ ರೋಬೋಟ್ ನಿರ್ಮಾಣ ಮಾಡಿದ ಚಿತ್ತಾಪೂರ ಮೂಲದ ಸಂಜಯವರನ್ನು ಕೂಡ ಸನ್ಮಾನಿಸಲಾಯಿತು.

ಕಳೆದ ಐದು ವರುಷಗಳಲ್ಲಿ ಪಿ,ಡಿ.ಎ, ತಾಂತ್ರಿಕ ಮಹಾವಿದ್ಯಾಲಯವು ಉತ್ತಮ ರೀತಿಯ ಪ್ರಗತಿಯನ್ನು ತೋರಿಸಿದ್ದು ಹೊಸ ವಿದ್ಯಾರ್ಥಿಗಳ ನೊಂದಣೆಗೆ ಪೈಪೋಟಿ ನಡೆದಿದೆ ಅಲ್ಲದೇ ಮಹಾವಿದ್ಯಾಲಯದಲ್ಲಿ ಚಾಲನೆಯಲ್ಲಿರುವ ಸೆಂಟರ್ ಆಫ್ ಎಕ್ಸಲೆನ್ಸ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಅದರಿಂದ ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗಾವಕಾಶ ದೊರೆತಿದೆ ಎಂದು ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಭೀಮಾಶಂಕರ ಸಿ, ಬಿಲಗುಂದಿ ಅವರು ತಮ್ಮ ಅಧ್ಯಕ್ಷಿಯ ಭಾಷಣದಲ್ಲಿ ತಿಳಿಸಿದರು.

ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎಸ್. ಆರ್, ಮೀಸೆ ಸರ್ವರಿಗೂ ಸ್ವಾಗತಿಸಿದರು, ಮಹಾವಿದ್ಯಾಲಯದ ಪರೀಕ್ಷಾ ಅಧಿಕಾರಿಗಳಾದ ಪ್ರೊ. ರವೀಂದ್ರ ಎಮ್. ಲಠ್ಠೆ ವಂದಿಸಿದರು ಹಾಗೂ ಅಕ್ಷಯ ಆಸ್ಪಳ್ಳಿ ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಡಾ. ಶರಣಬಸಪ್ಪ ಹರವಾಳ, ಕಾರ್ಯದರ್ಶಿಗಳಾದ ಡಾ. ಜಗನ್ನಾಥ ಬಿಜಾಪೂರ, ಜಂಟಿ ಕಾಯದರ್ಶಿಗಳಾದ ಡಾ. ಮಹಾದೇವಪ್ಪ ರಾಂಪೂರೆ, ಪಿ.ಡಿ.ಎ ತಾಂತ್ರಿಕ ಮಹಾವಿದ್ಯಾಲಯದ ಗೌರನ್ನಿಂಗ್ ಸದಸ್ಯರು ಹಾಗೂ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಬಸವರಾಜ ಖಂಡೆರಾವ, ಡಾ. ಎಸ್. ಬಿ. ಕಾಮರೆಡ್ಡಿ, ವಿನಯ ಪಾಟೀಲ, ಡಾ. ಅನೀಲ ಪಟ್ಟಣ, ಸಾಯಿನಾಥ ಪಾಟೀಲ, ಡಾ, ನಾಗೇಂದ್ರ ಮಂಠಾಳೆ, ಅರುಣ ಕುಮಾರ ಮಾಟೀಲ ಹಾಗೂ ಗಿರಿಜಾ ಶಂಕರ ಅವರು ಉಪಸ್ಥಿತರಿದ್ದರು.

ಮಹಾವಿದ್ಯಾಲದ ಆಡಳಿತ ವಲಯದ ಉಪಪ್ರಾಚಾರ್ಯರಾದ ಡಾ. ಕಲ್ಪನಾ ವಾಂಜರಖೇಡ, ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂಧಿಗಳು ಉಪಸ್ಥಿತರಿದ್ದರು.

ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಇತರ ಮಹಾವಿದ್ಯಾಲಯದ ಪ್ರಾಚಾರ್ಯರು, ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಕೂಡ ಉಪಸ್ಥಿತರಿದ್ದರು.