ಉತ್ತಮ ಶಿಕ್ಷಣ ನೀಡಿ ಮಕ್ಕಳನ್ನೇ ಆಸ್ತಿ ಮಾಡಿ


ನರೇಗಲ್ಲ,ನ.16: ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಬದಲಾಗಿ ಮಕ್ಕಳಿಗೆ ಶೈಕ್ಷಣಿಕವಾಗಿ ಉತ್ತಮ ಶಿಕ್ಷಣ ನೀಡಿ ದೇಶದ ಆಸ್ತಿಯನ್ನಾಗಿ ಮಾಡಿ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸರ್ಕಾರಿ ಶಾಲೆಗಳ್ನು ಉಳಿಸುವ ನಿಟ್ಟಿನಲ್ಲಿ ಸಾಕಷ್ಟು ಉಚಿತ ಸೌಲಭ್ಯಗಳನ್ನು ಒದಗಿಸುವ ಜತೆಗೆ ಶಾಲೆಗಳಿಗೆ ಬೇಕಾದ ಮೂಲ ಸೌಕರ್ಯಗಳನ್ನು ಕೂಡ ಒದಗಿಸುತ್ತಿದೆ ಎಂದು ಗ್ರಾ.ಪಂ ಸದಸ್ಯ ಕೃಷ್ಣಾ ದೇಶಪಾಂಡೆ ಹೇಳಿದರು.

ಸಮೀಪದ ನಾಗರಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ನಿಮಿತ್ತ ಗ್ರಾ.ಪಂ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ನಿರ್ಮಿಸಿದ ಪಿಂಕ್ ಶೌಚಾಲಯ ಹಸ್ತಾಂತರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಒತ್ತಡ ಮುಕ್ತ ಶಿಕ್ಷಣ ನೀಡಿದಲ್ಲಿ ಮಾತ್ರ ಮಕ್ಕಳು ಉತ್ಸಾಹದಿಂದ ಕಲಿಕೆಯಲ್ಲಿ ತೊಡಗಲು ಸಾಧ್ಯ. ಪ್ರತಿ ಪಾಲಕರು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಲು ಮುಂದಾಗಬೇಕು. ಮಕ್ಕಳು ಈ ದೇಶದ ಭವಿಷ್ಯ ಮತ್ತು ಆಸ್ತಿ ಎಂದು ಮಾಜಿ ಪ್ರಧಾನಿ ಜವಹಾರಲಾಲ ನೆಹರು ಹೇಳುತ್ತಿದ್ದರು. ಹಾಗಾಗಿ, ಪೋಷಕರು ತಮ್ಮ ಮಕ್ಕಳಿಗಾಗಿ ಆಸ್ತಿ ಮಾಡುವ ಬದಲು ಅವರನ್ನೇ ರಾಷ್ಟ್ರದ ಆಸ್ತಿಯನ್ನಾಗಿ ರೂಪಿಸಬೇಕು. ಇತ್ತೀಚಿನ ದಿನಮಾನಗಳಲ್ಲಿ ಪಾಕಲರು ಇಂಗ್ಲೀಷ ವ್ಯಾಮೋಹಕ್ಕೆ ಉಚಿತ ಸೌಲಭ್ಯಗಳ್ನು ನೀಡುತ್ತಿದ್ದರೂ ಸಹ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಮನಸ್ಸು ಮಾಡದೇ ಇರುವುದು ಖೇದಕರ ವಿಷಯವಾಗಿದೆ ಎಂದರು.
ಗ್ರಾ.ಪಂ ಅಧ್ಯಕ್ಷೆ ಪವಿತ್ರಾ ಕುರಿಯುವರ, ಉಪಾಧ್ಯಕ್ಷ ರಮೇಶ ಕಡೇಮನಿ, ರತ್ನವ್ವ ಹೊಸೊರ, ಶಿವನಗೌಡ ಶಿದ್ದನಗೌಡ್ರ, ಎಸ್.ಆರ್. ನದಾಫ, ಅಲ್ಲಾಭಕ್ಷಿ ನದಾಫ, ರಾಮಣ್ಣ ರಾಮಣ್ಣನವರ, ಎಸ್‍ಡಿಎಂಸಿ ಅಧ್ಯಕ್ಷ ಬಾಲಪ್ಪ ಮಾದರ, ಸಿಆರ್‍ಪಿ ಎಸ್. ಮೂಲಿಮನಿ, ಗ್ರಾಮಸ್ಥರಾದ ಚನ್ನಬಸಪ್ಪ ಬೆಟಗೇರಿ,ಹನಮಂತಪ್ಪ ಪೂಜಾರ, ಪಿಡಿಒ ಮಂಜುಳಾ ಪಾಟೀಲ, ಫಕೀರಪ್ಪ ಬೇವಿನಕಟ್ಟಿ, ಸತ್ಯಪ್ಪ ಮಾದರ, ನಿಂಗಪ್ಪ ಮಾದರ, ಮುತ್ತಪ್ಪ ಕೊಪ್ಪಳದವರ, ಶರಣಪ್ಪ ಮಸಗಿ, ಅಲ್ಲಾಭಕ್ಷಿ ಓಲೇಕಾರ, ಮಹಾರುದ್ರಗೌಡ ಪೂಜಾರ, ಲಕ್ಷ್ಮಣ ಬೆಟಗೇರಿ, ತಿಪ್ಪಣ್ಣ ಬೆಟಗೇರಿ, ಮುಖ್ಯಶಿಕ್ಷಕ ಎಚ್.ಬಿ. ಆದೇಪ್ಪನವರ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.