ಉತ್ತಮ ಶಿಕ್ಷಣ, ಆರ್ಥಿಕ ಸಬಲೀಕರಣದಂತ ಮಹತ್ವಾಕಾಂಕ್ಷೆಯ ಉದ್ದೇಶ ನನ್ನದು

ಸಂಜೆವಾಣಿ ವಾರ್ತೆ

ದಾವಣಗೆರೆ.ಸೆ.೨೨; ಬಡತನ ನಿರುದ್ಯೋಗ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಕ್ಷೇತ್ರಕ್ಕೆ  ಶಾಶ್ವತವಾಗಿ ಪರಿಹಾರ ಕಂಡುಕೊಳ್ಳುವ ಉದ್ದೇಶ ದಿಂದ ನಾನು ದಾವಣಗೆರೆ ಜಿಲ್ಲೆಯ ಸಂಸದ ಸ್ಥಾನಕ್ಕೆ ಸ್ಪರ್ಧಿಸಲು  ಪ್ರಬಲ ಆಕಾಂಕ್ಷೀತನಾಗಿ ದೃಢ ನಿರ್ಧಾರ ಮಾಡಿ ಬಂದಿದ್ದೇನೆಯೇ ಹೊರತು ಮತ್ಯಾವ ಉದ್ದೇಶದಿಂದ ಬಂದವನಲ್ಲ. ನನಗೆ ಅದರ ಅವಶ್ಯಕತೆಯೂ ಇಲ್ಲ. ಆದ್ದರಿಂದ ಜಿಲ್ಲೆಯ  ಸಮಸ್ತ ಕ್ಷೇತ್ರದ ಮತದಾರರು ಚಳುವಳಿಯ ರೂಪದಲ್ಲಿ ಆಂದೋಲನ ಮಾಡುವಂತಹ ವಾತಾವರಣ ಸೃಷ್ಟಿ ಮಾಡಬೇಕು. ಆಗ ಮಾತ್ರ ಪಕ್ಷದಲ್ಲಿ ನಮಗೆ ಮನ್ನಣೆ ದೊರೆಯಲಿದೆ ಎಂದು  ವಿನಯ್ ಕುಮಾರ್ ಜಿ.ಬಿ. ದಾವಣಗೆರೆ ಲೋಕಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿತರಾದ ಅವರು  ದಾವಣಗೆರೆ ತಾಲ್ಲೂಕು ಕುಣಿಬೆಳಕೆರೆ ಹಾಗೂ ಜಗಳೂರು ತಾಲ್ಲೂಕಿನ ಬಿಳಿಚೋಡು ಹೋಬಳಿಯ ಹಾಲೇಕಲ್ಲು ಗ್ರಾಂ.ಪಂ.ವ್ಯಾಪ್ತಿಯ ಮುಚನೂರು.ಮುಗ್ಗಿದ ರಾಗಿ ಹಳ್ಳಿ.ಚದುರಗೊಳ್ಳ ನರೇನಹಳ್ಳಿ. ಹರಪನಹಳ್ಳಿ ತಾಲೂಕಿನ  ನಂದಿಕಂಬ ತಾಂಡಗಳಲ್ಲಿ  ಪ್ರತಿಷ್ಠಾಪನೆ ಮಾಡಲಾಗಿದ್ದ ಗಣೇಶೋತ್ಸವ ಸಮಾರಂಭದಲ್ಲಿ ಹಾಗೂ ಸಾರ್ವಜನಿಕರುಗಳನ್ನು ಭೇಟಿ ಮಾಡಿ ಮಾತನಾಡಿದ ಅವರುಜಿಲ್ಲೆಯಲ್ಲಿ ದುಡಿಯುವ ವರ್ಗಗಳಿಗೆ ಸರಿಯಾದ ಕೆಲಸವಿಲ್ಲದೆ ಗ್ರಾಮಗಳಲ್ಲೇ ಉಳಿದುಕೊಂಡಿದ್ದಾರೆ .ಇಂತಹ ಸಂಧರ್ಭದಲ್ಲಿ ಆರ್ಥಿಕವಾಗಿ ಪ್ರಬಲವಾಗಿ ಹಿಂದುಳಿದು ಮುಂದಿನ‌ ಉತ್ತಮ ಜೀವನ ಕಟ್ಟಿ ಕೊಳ್ಳಲು ಸಾಧ್ಯವಾಗುವುದಿಲ್ಲ ಆಗ ಹಣಕಾಸಿನ ತೊಂದರೆಯಾಗಿ ಮುಂದಿನ‌ ದಿನಮಾನದಲ್ಲಿ ಅರಾಜಕತೆಯನ್ನು ನಾವೇ ಸೃಷ್ಟಿ ಮಾಡಿಕೊಂಡಂತೆ ಆಗುತ್ತದೆ. ಅದನ್ನ ನಾನು ಮನಗಂಡು ಸಂಸದನಾದರೆ ದುಡಿಯುವ ವರ್ಗಗಳಿಗೆ ಕೈಗಾರಿಕೆಗಳು. ಉತ್ತಮ ಶಿಕ್ಷಣ  ಆರ್ಥಿಕವಾಗಿ ಸಬಲೀಕರಣದಂತ ಮಹತ್ವಾಕಾಂಕ್ಷೆಯ ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು  ನಿಮ್ಮಲ್ಲಿಗೆ ಬಂದಿದ್ದೇನೆ. ನಿಮ್ಮಲ್ಲರ ಸಹಕಾರ ಪ್ರೀತಿ ವಿಶ್ವಾಸ ನೀಡಬೇಕಾಗಿದೆ ಎಂದು‌ ಮನವಿ ಮಾಡಿದರು.ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಉನ್ನತ ಮಟ್ಟದ ಶಿಕ್ಷಣ ಕೊಡಿಸುವಲ್ಲಿ‌ ಹೆಚ್ಚು ಗಮನ‌ ನೀಡಬೇಕಾಗಿದೆ ಏಕೆಂದರೆ ನಾವು ಶಿಕ್ಷಣ ದಿಂದಲೇ ನಾವು ಕ್ರಾಂತಿ ಮಾಡಬೇಕು. ಅದೊಂದೇ ನಮಗೆ ಅವಕಾಶವಿರುವುದು ಜಿಲ್ಲೆಯ ತಳ ಸಮುದಾಯಗಳು ಸಮಾಜದ ಮುಖ್ಯವಾಹಿನಿಗೆಬರಬೇಕಾಗಿದೆ.ತಳಸಮುದಾಯಗಳು ಆರ್ಥಿಕ ಶೈಕ್ಷಣಿಕ ರಾಜಕೀಯವಾಗಿ ಸಬಲರಾದಾಗ ಮಾತ್ರ ಸರ್ವತೋಮುಖ ಅಭಿವೃದ್ಧಿಗೆ ನಾಂದಿ ಹಾಡಲು ಸಾಧ್ಯವಿದೆ.ಆ ನಿಟ್ಟಿನಲ್ಲಿ ನಾನೂ ಕೂಡ ದಿವಂಗತ ರಾಜೀವ್ ಗಾಂಧಿಯವರು ಕಂಡ ಬಹುದೊಡ್ಡ ಕನಸಿನ ಕೂಸಾದ  ನವೋದಯ ಶಾಲೆಯಲ್ಲಿ ಉತ್ತಮ ಶಿಕ್ಷಣದ ಜೊತೆಯಲ್ಲಿ ನಾಯಕತ್ವದ ಗುಣ ಬೆಳೆಸಿಕೊಂಡಿದ್ದು ನವೋದಯ ಶಾಲೆ. ಇಂದಿಗೂ ಕೂಡ ನಾನು ಅವರ ಪುಸ್ತಕಗಳನ್ನು ಓದುತ್ತೇನೆ.ಆದ್ದರಿಂದ ಮಕ್ಕಳಲ್ಲಿ ನಾಯಕತ್ವ ಗುಣ ಬರುವಂತ ಶಿಕ್ಷಣ ಅವರಿಗೆ ಕೊಡಿಸಬೇಕಾಗಿದೆ ಎಂದರು. ನಾನು ಕೂಡ ಹಿಂದುಳಿದ ‌ಸಮಾಜದ ಹುಡುಗ ದೃಢ ನಿರ್ದಾರ ಮಾಡಿ ಸಂಸದ ಸ್ಥಾನಕ್ಕೆ ಸ್ಪರ್ರ್ಧಿಸಲು ಮುಂದಾಗಿರುವುದು ಸುಲಭದ ಮಾತಲ್ಲ.ಅದಕ್ಕೆ ನನ್ನ ನಿರ್ಧಾರಕ್ಕೆ ನೀವೆಲ್ಲ ಸಹಮತ ನೀಡಿ ಮನ ಮನೆಗೆ ಪ್ರಚಾರ ಮಾಡಬೇಕಾಗಿದೆ.ಈ ಭಾರಿ‌ ನಾವೇನಾದರೂ ಇಂತಹ ಅವಕಾಶ ಕಳೆದು ಕೊಂಡರೆ‌ ಮತ್ತೆ ನಮಗೆ ರಾಜಕೀಯ ಕಬ್ಬಿಣದ ಕಡಲೆಯಾಗಲಿದೆ ಎಂದರು. ನಾನು ದಾವಣಗೆರೆ ತಾಲ್ಲೂಕಿನ ಕಕ್ಕರಗೊಳ್ಳ ಗ್ರಾಮದಿಂದ  ಬರಿಗೈಯಲ್ಲಿ ರಾಜಧಾನಿಗೆ ಹೋಗಿ ಕೇವಲ ನಲವತ್ತು ವಿದ್ಯಾರ್ಥಿಗಳಿಗೆ ಉತ್ತಮವಾಗಿ ಕೋಚಿಂಗ್ ನೀಡಿ ಇಂದು ನನ್ನ‌ ಇನ್ಸೈಟ್ಸ್   ಐ.ಎ.ಎಸ್ ಕೋಚಿಂಗ್ ಸೆಂಟರ್ ನಲ್ಲಿ ಆರು ಸಾವಿರ ವಿದ್ಯಾರ್ಥಿಗಳು  ಇದ್ದು ಜಮ್ಮು ಕಾಶ್ಮೀರ  ಶ್ರೀನಗರ, ದೆಹಲಿ ಸೇರಿದಂತೆ ದೇಶದಾದ್ಯಂತ ‌ನಮ್ಮ ಸಂಸ್ಥೆಯಲ್ಲಿ ಉನ್ನತ ಶಿಕ್ಷಣ ನೀಡುವುದರ ಮುಖಾಂತರ ಶಿಕ್ಷಣ ಕ್ರಾಂತಿ ಮತ್ತು ನಾಯಕತ್ವ ಗುಣ ಬರುವಂತೆ ಮಾಡಲಾಗುತ್ತಿದೆ ಎಂದರು. ನಾನು ದೈವ ಭಕ್ತಿ ಗಿಂತ ಹೆಚ್ಚು ಜನಶಕ್ತಿಯಲ್ಲಿ ನಂಬಿಕೆ ಇಟ್ಟವನು ನೀವು ಮನಸ್ಸು ಮಾಡಿ ಮನಮನೆ ಮಾತಾಗುವಂತೆ   ಪ್ರೇರೆಪಿಸಬೇಕಾಗಿದೆ ಎಂದರು ಈ ಸಂಧರ್ಭದಲ್ಲಿ. ಹಾಲೇಕಲ್ಲು ಗ್ರಾಮದ ಮುಖಂಡರುಗಳಾದ ಎಸ್.ಬಿ.ಗೋಣಿಬಸಪ್ಪ.ಆರೋಗ್ಯ ಇಲಾಖೆಯ ವಿಶ್ವನಾಥ್. ಗ್ರಾ.ಪಂ. ಅಧ್ಯಕ್ಷರಾದ ಮದನ್ ಕುಮಾರ್ ಕೆ.ಜಿ.ರೇವಣಸಿದ್ದಪ್ಪ.ಕೆ.ಎಸ್.ಸಿ.ಜಿ..ನಾಗರಾಜ್.ಎಸ್.ರಾಜಪ್ಪ.ಮುಚ್ಚನೂರು ಗ್ರಾಮದ  ಆಂಜೀನಪ್ಪ.ಪರಶುರಾಮ. ವೆಂಕಟೇಶ್. ಮಲ್ಲೇಶ್.ಬಾಬು. ಚದುರುಗೊಳ್ಳದ ದ್ಯಾಮಣ್ಣ.ಕುಬೇರಪ್ಪ.ದುರುಗೇಶ್.ಶಿವಕುಮಾರ್. ಗೌಡ್ರಮಂಜಪ್ಪ.ನರೇನಹಳ್ಳಿಯ ನಿವೃತ ಸಬ್ ಇನ್ಸ್ಪೆಕ್ಟರ್ ಸೇವಾಲಾಲ್.ನವೀನ್ ತಿಪ್ಪೇಸ್ವಾಮಿ. ಮುಗ್ಗಿದರಾಗಿಹಳ್ಳಿಯ ತಿಮ್ಮಾರೆಡ್ಡಿ.ಕೆಂಚನಗೌಡ್ರು.ಅರುಣ್ ಕುಮಾರ್.ವೆಂಕಟೇಶ ಸೇರಿದಂತೆ  ಗ್ರಾಮದ ಮುಖಂಡರು. ಮಹಿಳೆಯರು ಯುವ ಪಡೆ ಉಪಸ್ಥಿತರಿದ್ದರು.