ಉತ್ತಮ ಶಿಕ್ಷಣದಿಂದ ಅಪರಾಧ ಕಡಿತ ಸಾಧ್ಯ

ವಿಜಯಪುರ,ಸೆ೧೬:ಸಾಕಷ್ಟು ಅಪರಾಧ ಪ್ರಕರಣಗಳಲ್ಲಿ ಆರೋಪಿಗಳು ಶಿಕ್ಷಣ ಪಡೆಯದಿರುವುದು ಅಪರಾಧ ಪ್ರಕರಣಗಳು ಹೆಚ್ಚಾಗುವುದರಲ್ಲಿನ ಕಾರಣ ಒಂದಾಗಿದೆ ಎಂದು ಕೋರಮಂಗಲ ಬಯಲು ಬಯಲು ಬಂದೀಖಾನೆ ಅಧೀಕ್ಷಕರಾದ ಮೋಹನ್ ಕುಮಾರ್ ರವರು ತಿಳಿಸಿದರು .
ಅವರು ಇಲ್ಲಿನ ಕೋರಮಂಗಲ ಬಯಲು ಬಂದೀಖಾನೆಯಲ್ಲಿ ಜಿಲ್ಲಾ ಲೋಕ ಶಿಕ್ಷಣ ಸಮಿತಿ ಹಾಗೂ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ೫೬ನೇ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಸಪ್ತಾಹ ೨೦೨೨ ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಬಯಲು ಬಂದೀಖಾನೆಯಲ್ಲಿ ನ ಅಪರಾಧಿಗಳಿಗೆ ಜೈಲಿನಲ್ಲಿರುವಾಗ ಉತ್ತಮ ಶಿಕ್ಷಣ ಪಡೆಯಲು ಸಾಕಷ್ಟು ನೆರವನ್ನು ನೀಡಲಾಗುವುದೆಂದು ತಿಳಿಸಿದರು. ವಯಸ್ಕರ ಶಿಕ್ಷಣಾಧಿಕಾರಿ ಹನುಮಂತಪ್ಪ ರವರು ಮಾತನಾಡುತ್ತಾ, ಸಾಕ್ಷರತೆಯಿಂದ ಸಾಕಷ್ಟು ಮಂದಿ ಮೋಸ ಹೋಗುವುದನ್ನು ತಡೆಗಟ್ಟಲು ಸಾಧ್ಯವಾಗುವುದೆಂದು ತಿಳಿಸಿ ಸಾಕ್ಷರತೆ ಹಾಗೂ ಶಿಕ್ಷಣದಿಂದ ಸಮಾಜಕ್ಕೆ ಆಗುವ ಸಕಾರಾತ್ಮಕ ಪರಿಣಾಮಗಳ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಜೈಲರ್ ಬಿ.ಎಲ್. ಚಿಕ್ಕೋಪ ಹಾಗೂ ವಯಸ್ಕರ ಶಿಕ್ಷಣ ಸಂಯೋಜಕರಾದ ಪುಷ್ಪಲತಾ ಹಾಗೂ ಸಹಾಯಕ ಜೈಲರ್ ಮೊಹಮ್ಮದ್ ಖುರೇಷಿ ಹಾಜರಿದ್ದರು.ಕಾರ್ಯಕ್ರಮದಲ್ಲಿ ಮೂವತ್ತು ಮಂದಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಪಡೆದು ಉತ್ತೀರ್ಣರಾದ ಖೈದಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು .