ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಶೆಟಕಾರ ಆಯ್ಕೆ

ಔರಾದ : ಸೆ.19:ಮಾನ್ಯತೆ ಪಡೆದ ಅನುದಾನ ರಹಿತ ಶಾಲಾ ಆಡಳಿತ ಮಂಡಳಿ ಒಕ್ಕೂಟ ಬೆಂಗಳೂರು, ರೂಪ್ಸಾ ಸಂಘಟನೆ, ಬೆಂಗಳೂರು ವತಿಯಿಂದ ನೀಡಲಾಗುವ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕಿ ಹಾಗೂ ಅತ್ಯುತ್ತಮ ಕನ್ನಡ ಶಾಲೆ ಪ್ರಶಸ್ತಿ ತಾಲೂಕಿನ ಶ್ರೀ ಅಮರೇಶ್ವರ ಗುರುಕುಲ ಹಾಗೂ ಮುಖ್ಯ ಶಿಕ್ಷಕಿ ಶಿಲ್ಪಾ ಶೆಟಕಾರ ಆಯ್ಕೆಯಾಗಿದ್ದಾರೆ.

ರಾಜ್ಯ ರಾಜಧಾನಿ ಬೆಂಗಳೂರಿನ ಜುಬ್ಬಲಿ ಇಂಟನ್ರ್ಯಾಷನಲ್ ಪಬ್ಲಿಕ್ ಸ್ಕೂಲಿನಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಶ್ರೀ ಅಮರೇಶ್ವರ ಗುರುಕುಲ ಶಾಲೆಯ ಅಧ್ಯಕ್ಷ ಬಸವರಾಜ ಶೆಟಕಾರ ಹಾಗೂ ಶಿಲ್ಪಾ ಶೆಟಕಾರ ಅವರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕರ್ನಾಟಕದ ಗಡಿ ಭಾಗವಾದ ಔರಾದ ತಾಲ್ಲುಕಿನಲ್ಲಿ 1996 ರಲ್ಲಿ ಪ್ರಾರಂಭವಾದ ಶ್ರೀ ಅಮರೇಶ್ವರ ಗುರುಕುಲ ಪ್ರಾಥಮಿಕ ಶಾಲೆ ಕಳೆದ ಎರಡು ದಶಕಗಳಿಂದ ಕನ್ನಡ ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿದೆ. ಕನ್ನಡ ಶಾಲೆ ಶುಲ್ಕ ಪಡೆದು ನಡೆಸುತ್ತಿರುವ ಪ್ರಥಮ ಶಾಲೆ ಬಹುಭಾಷಿಕರ ದಿನದಲಿತರ ಸೇವೆಗೆ ಮೀಸಲಿದ್ದ ಶಾಲೆ ಎಂದು ಪರಿಗಣಿಸಿ ಪ್ರಶಸ್ತಿ ನೀಡಿ ಗೌರವಿಸಿದ ಸಂಸ್ಥೆ ಮುಖ್ಯಸ್ಥರಿಗೆ ಹಾಗೂ ಹಿತೈಷಿಗಳಿಗೆ ಬಸವರಾಜ ಶೆಟಕಾರ ಧನ್ಯವಾದ ತಿಳಿಸಿದರು.