ಉತ್ತಮ ವೈದ್ಯಕೀಯ ಸೇವೆ ಕೊಡಿ: ಮಂಗಳಾನಂದನಾಥ ಶ್ರೀ

ಚಿಕ್ಕಬಳ್ಳಾಪುರ.ಏ.೨೫-ನಗರದ ಸಿ.ಎಸ್‌ಐ ಆಸ್ಪತ್ರೆ ರಸ್ತೆಯಲ್ಲಿ ಡಾಕ್ಟರ್ ಪ್ರಶಾಂತ್ ಎಸ್.ಮೂರ್ತಿ ಅವರು ಜಿಲ್ಲೆಯ ಜನತೆಗೆ ಉತ್ತಮ ವೈದ್ಯಕೀಯ ಸೇವೆ ಸಲ್ಲಿಸಬೇಕು ಎಂಬ ಉದ್ದೇಶದಿಂದ ಆರಂಭಿಸಿರುವ ಅಭಯ ಆಸ್ಪತ್ರೆಯನ್ನು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಚಿಕ್ಕಬಳ್ಳಾಪುರ ಶಾಖ ಮಠದ ಮಂಗಳಾನಂದನಾಥ ಸ್ವಾಮೀಜಿರವರ ಆಶೀರ್ವಾದದೊಂದಿಗೆ ಆರಂಭಿಸಿದರು.
ಅಭಯ ಆಸ್ಪತ್ರೆಯ ಉದ್ಘಾಟನೆಯನ್ನು ಕರ್ನಾಟಕ ವಿಶ್ರಾಂತ ಉಪಕುಲಪತಿಗಳ ವೇದಿಕೆ ಅಧ್ಯಕ್ಷ ಲಯನ್ ಡಾಕ್ಟರ್ ಎಸ್.ಚಂದ್ರಶೇಖರ್ ಶೆಟ್ಟಿ ಉದ್ಘಾಟಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಜನತೆಗೆ ಉತ್ತಮ ಆರೋಗ್ಯ ಸೇವೆ ಕಲ್ಪಿಸುವ ಉದ್ದೇಶದಿಂದ ಈ ಅಭಯ ಆಸ್ಪತ್ರೆಯನ್ನು ಉದ್ಘಾಟಿಸಲಾಗಿದೆ ಎಂದು ಡಾಕ್ಟರ್ ಪ್ರಶಾಂತ್ ಎಸ್. ಮೂರ್ತಿ ತಿಳಿಸಿದರು.
ಕಾರ್ಯಕ್ರಮಕ್ಕೆ ನಗರದ ಪ್ರಖ್ಯಾತ ಹಿರಿಯ ವೈದ್ಯ ಡಾ ಕೆ.ಪಿ. ಶ್ರೀನಿವಾಸ್ ಮೂರ್ತಿ ಮತ್ತು ಕುಟುಂಬ ವರ್ಗ ಮಾಜಿ ಶಾಸಕ ಕೆ ಪಿ ಬಚ್ಚೇಗೌಡ ಒಳಗೊಂಡಂತೆ ಅನೇಕ ಮಂದಿ ಗಣ್ಯಾತಿ ಗಣ್ಯರುಗಳು ಭಾಗವಹಿಸಿ ಶುಭಕೋರಿದರು.