
ಸಂಜೆವಾಣಿ ವಾರ್ತೆ
ಸಂಡೂರು:ಜು: 12: ಕೆಲದಿನಗಳಿಂದ ಮಳೆ ಜಿನುಗುತ್ತಿರುವುದು ಬಿತ್ತನೆ ಕಾರ್ಯಕೈಗೊಂಡಿರುವ ರೈತರ ಮೊಗದಲ್ಲಿ ಸಂತಸ ಆವರಿಸಿದೆ. ಈನುಗು ಮಳೆಯಿಂದ ಏನು ಪರಯೋಜನವಿಲ್ಲ, ಉತ್ತಮ ಮಳೆಯ ಅಗತ್ಯವಿದೆ ಎನ್ನುತ್ತಿದ್ದಾರೆ ಹಲವಾರು ಗ್ರಾಮೀಣ ಭಾಗದಲ್ಲಿ ಉತ್ತಮ ಮಳೆಗಾಗಿ ಕಪ್ಪೆಗಳ , ಕತ್ತೆಗಳ ತನುಗೊಡ ಪೂಜೆ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ವರುಣ ದೇವನ ಕೃಪಾಕಟಾಕ್ಷ ಕಣೆರೆದಿರುವುದು ರೈತರಲ್ಲಿ ಆಶಾಭಾವನೆ ಉಂಟುಮಾಡಿರುವುದು ಸಹಜವಾಗಿದೆ.
ಬಿತ್ತನೆ ವಿವರ: ಸಂಡೂರು ತಾಲೂಕಿನಲ್ಲಿ ಇಲ್ಲಿಯವರೆಗೆ 110ಹೆ. ಭತ್ತ. 570. ಹೆ. ಜೋಳ, 5140 ಹೆ. ಮೆಕ್ಕೆ ಜೋಳ, 18.40 ಹೆ.ರಾಗಿ 76 ಹೆ.ತೊಗರಿ, 579 ಹೆ. ಹತ್ತಿ 70 ಹೆ. ಎಳ್ಳು 160 ಹೆ. ಸಜ್ಜೆ ಬಿತ್ತನೆಯಾಗಿದೆ. ಇಲ್ಲಿಯವರೆಗೆ 1316.64 ಕ್ವಂಟಾಲ್ ಬೀಜ ವಿತರಿಸಲಾಗಿದೆ.
ಮಳೆಯ ಕೊರತೆ: ತಾಲೂಕಿನಾದ್ಯಂತ ಜೂನ್ 1 ರಿಂದ ಜುಲೈ 6ರವೆಗೆ 236.7 ಮಿ.ಮೀ. ವಾಡಿಕೆ ಮಳೆಯಾಗಬೇಕಗಿತು. ಈ ಅವಧಿಯಲ್ಲಿ 110.7 ಮಿ.ಮೀ. ಮಳೆಯಾಗಿದೆ. ಶೇ> 53 ಕೊರತೆಯನ್ನು ಅನುಭವಿಸುತ್ತಿದ್ದು ಸಂಡೂರು ಹೋಬಳಿಯಲ್ಲಿ ವಾಡಿಕೆ ಮಳೆಯಲ್ಲಿ ಶೇ. 44, ಚೋರನೂರು ಹೋಬಳಿಯಲ್ಲಿ ಶೇ. 21 ತೋರಣಗಲ್ಲು ಹೋಬಳಿಯಲ್ಲಿ ಶೇ. 70 ರಷ್ಟು ಮಳೆಯ ಕೊರತೆಯಾಗಿದೆ.
ಸಂಡೂರಿನಲ್ಲಿ ಪ್ರಾರಂಭ: ಸಂಡೂರು ಹೋಬಳಿಯಲ್ಲಿ ಕಲವು ದಿನಗಳಿಂದ ಜಿನಗು ಮಳೆ ಪ್ರಾರಂಭವಾದ ಹಿನ್ನಲೆಯಲ್ಲಿ ಇದೀಗ ಬಿತ್ತನೆ ಕಾರ್ಯ ಪ್ರಾರಂಭವಾಗಿದೆ. ತೋರಣಗಲ್ಲು ಹೋಬಳಿಯಲ್ಲಿ ಮಳೆಯ ತೀವ್ರಕೊರತೆ ಎದುರಾಗಿದ್ದು ಮಳೆಯಾಶ್ರಿತ ಜಮೀನಿನಲ್ಲಿ ಬಿತ್ತನೆಗಾಗಿ ರೈತರು ಉತ್ತಮ ಮಳೆಗಾಗಿ ಎದುರು ನೋಡುತ್ತಿದ್ದಾರೆ. ಚೋರನೂರಿನಲ್ಲಿ ಉತ್ತಮ ಮಳೆಯಿಂದಾಗಿ ಉತ್ತಮ ಬಿತ್ತನೆ ಕಾರ್ಯವಾಗುತ್ತಿದ್ದು ಇಲ್ಲಿಯವರೆಗೆ 6745 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದ್ದು. ಸಂಡೂರು ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ 31.030 ಹೆ. ಬಿತ್ತನೆ ಗುರಿಯನ್ನು ಹೊಂದಿದೆ. ಹಲವಾರು ವರ್ಷಗಳಿಂದ ಉತ್ತಮ ಮಳೆಯನ್ನು ಕಂಡ ಸಂಡೂರು ತಾಲೂಕು ಈ ಬಾರಿ ತೀವ್ರವಾಗಿ ಕೊರತೆಯನ್ನು ಎದುರಿಸುತ್ತಿದ್ದು ರೈತರಲ್ಲಿ ಆತಂಕ ಉಂಟುಮಾಡಿರುವುದು ಗಮನಾರ್ಹವಾಗಿದೆ.