ಉತ್ತಮ ಭಾರತ ಕಟ್ಟುವಲ್ಲಿ ಶಿಕ್ಷಣ ಅವಶ್ಯಕತೆ : ವಿಠ್ಠಲಗೌಡ ಪಾಟೀಲ

ಇಂಡಿ:ಜು.18: ಸಾಂಪ್ರದಾಯಕವಾಗಿ ಹಿರಿಯರು ನಡೆಸಿಕೊಂಡು ಬಂದಿರುವ ದೇವರ ಪೊಜೆ ಪುನಸ್ಕಾರಗಳನ್ನು ನೋಡಿ ನಾವು ಕಲಿತು ಇದನ್ನೆ ಮುಂದುವರಿಸಿಕೋಂಡು ಹೊಗೋಣ ಮತ್ತು ಅದರ ಜೊತೆಗೆ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಡಬೇಕು. ಉತ್ತಮ ಭಾರತ ಕಟ್ಟುವಲ್ಲಿ ಯುವಕರ ಪಾತ್ರ ಬಹುದೊಡ್ಡದು ಎಂದು ಕುಮಾರ ವಿಠ್ಠಲಗೌಡ ಪಾಟೀಲ ಹೇಳಿದರು.

ತಾಲೂಕಿನ ಶಿರಕನಹಳ್ಳಿ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವರ ಜಾತ್ರಾ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ತಂದೆಯವರು ಅದಿವೇಶನದಲ್ಲಿ ಇರುವುದರಿಂದ ಅವರ ಅನುಪಸ್ಥಿತಿಯಲ್ಲಿ ತಮ್ಮನ್ನು ಬರಮಾಡಿಕೋಂಡ ಜಾತ್ರಾ ಕಮೀಟಿಗೆ ಕೃತಜ್ಞತೆ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಅತ್ಯಂತ ಸಂತೋಷ ಎನುಸುತ್ತಿದೆ. ಈ ಗ್ರಾಮದ ಜನತೆ ಅತ್ಯಂತ ಹೃದಯವಂತರು ನಮ್ಮ ತಂದೆಯವರನ್ನು ಚುನಾವಣೆಯಲ್ಲಿ ಗೆಲ್ಲಿಸಿದ್ದಿರಿ ತಮ್ಮ ಬೇಡಿಕೆಗಳನ್ನು ಅವರ ಗಮನಕ್ಕೆ ತಂದು ಪರಿಹಾರ ಪಡೆದುಕೋಳ್ಳಬೇಕು ಎಂದು ಅವರು ತಿಳಿಸಿದರು.

ಶ್ರೀ ಜ್ಞಾನ ಸಿಂಧೊ ಮಾಹಾರಾಜರು ತಮ್ಮ ಹಿತವಚನದಲ್ಲಿ ಭಾರತದ ಸಂಸ್ಕøತಿನ್ನು ಎತ್ತಿಹಿಡಿಯಲು ಶಿರಕನಹಳ್ಳಿ ಗ್ರಾಮ ಇಡಿ ಜಿಲ್ಲೆಗೆ ಮಾದರಿಯಾಗಿ ಹೊರಹೊಮ್ಮುತ್ತಿದೆ. ಇಂತಹ ಅದ್ಯಾತ್ಮ ಕಾರ್ಯಕ್ರಮವು ಮೇಲಿಂದ ಮೇಲೆ ನಡೆಯುತ್ತಿರಬೇಕು ಎಂದು ಅವÀರು ತಿಳಿಸಿದರು. ಜಾತ್ರಾ ಮಹೊತ್ಸದಲ್ಲಿ ಡೊಳ್ಳು ಕುಣಿತ, ಪುಟ್ಟ ಮಕ್ಕಳಿಂದ ಕೋಲಾಟ, ಲೇಜಿಮ್, ಗೊಂಬೆ ಕುಣಿತ, ಕುದುರೆ ಕುಣಿತ, ಮುಂತಾದ ಆಟದ ಕಲೆಯನ್ನು ಗುತಿಸಿ ಉತ್ತಮ ಪ್ರಶಸ್ತಿಯನ್ನು ಮಕ್ಕಳಿಗೆ ಕೊಡಲಾಯಿತು. ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳು ಕೃಷಿಯಲ್ಲಿ ಹೆಚ್ಚಿನ ಇಳುವರಿ ಪಡೆದುಕೊಂಡ ರೈತರನ್ನು ಗುರುತಿಸಿ ವೇಧಿಕೆಯ ಮೇಲೆ ಅವ್ಹಾನಿಸಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ರಾತ್ರಿ ಸುಂದರ ಸಾಮಾಜೀಕ ನಾಟಕ ಪ್ರದರ್ಶಿಸಲಾಯಿತು. ಈ ವೇದಿಕೆಯಲ್ಲಿ ದಿವ್ಯ ಸಾನಿದ್ಯ ಶ್ರೀ ಜ್ಞಾನ ಸಿಂಧೊ ಮಹಾರಾಜರು, ಗ್ರಾ, ಪಂ, ಅಧ್ಯಕ್ಷರು, ಮಾಜಿ ಅಧ್ಯಕ್ಷ ಶ್ರೀಮಂತ ಲೋಣಿ, ಗುರುಪಾದಪ್ಪ ಮುತ್ತಗೋಂಡ, ಶಂಕರಗೌಡ ಪಾಟೀಲ, ಶಿವಾಜಿಗೌಡ ಪಾಟೀಲ, ವಿನೋದ ಹಲಸಂಗಿ, ಜಟ್ಟೆಪ್ಪ ಹುಲ್ಲುರು, ಎಮ್ ಎನ್ ಲೋಣಿ, ತಿಪ್ಪಣ್ಣ ಕಟ್ಟಿಮನಿ, ಮಲ್ಲು ಲೋಣಿ, ರಮೇಶ ಲೋಣಿ, ಮಲ್ಲಿಕಾರ್ಜುನ ಎಮ್ ಹಲಸಂಗಿ, ಸಚೀನ ವಾಲಿಕಾರ, ಅರ್ಜುನ ಕನ್ನೂರ, ಶರಣಬಸಪ್ಪ ಕಟ್ಟಿಮನಿ, ಯಲ್ಲಪ್ಪ ಕಟ್ಟಿಮನಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.