ಉತ್ತಮ ಭವಿಷ್ಯಕ್ಕಾಗಿ ವೃತ್ತಿಪರ ಕೌಶಲ್ಯ ಜ್ಞಾನ ಅವಶ್ಯ: ಡಾ. ಬಸವರಾಜ

ಸಂಜೆವಾಣಿ ವಾರ್ತೆ,
ವಿಜಯಪುರ: ಫೆ.10:ಉತ್ತಮ ಭವಿಷ್ಯಕ್ಕಾಗಿ ವೃತ್ತಿಪರ ಕೌಶ್ಯಲಗಳು, ಮೌಲ್ಯಗಳು ಜ್ಞಾನದ ಅವಶ್ಯಕತೆಯಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಬಸವರಾಜ ಬೆಣ್ಣಿ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಾಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ಅಧ್ಯಯನ ವಿಭಾಗ ಮತ್ತು ವಾಣಿಜ್ಯ ಮತ್ತು ವ್ಯವಹಾರ ಅಧ್ಯಯನ ವಿಭಾಗದ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ “ಉತ್ತಮ ಭವಿಷ್ಯಕ್ಕಾಗಿ ವೃತ್ತಿಪರ ಕೌಶ್ಯಲಗಳ ವೃದ್ಧಿ” ವಿಷಯದ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಎಸ್. ಸೋಮನಾಳ ಮಾತನಾಡಿ, ಕೌಶ್ಯಲ್ಯ ಅಭಿವೃದ್ಧಿಯ ಮಹತ್ವ, ಇದರ ಕೌಶಲ್ಯಗಳು ರೂಢಿಸಿಕೊಳ್ಳುವ ರೀತಿಯನ್ನು ವಿದ್ಯಾರ್ಥಿನಿಯರಿಗೆ ತಿಳಿಸಿಕೊಟ್ಟರು.
ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಹಾಗೂ ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ. ಆರ್.ವ್ಹಿ. ಗಂಗಶೆಟ್ಟಿ ಪ್ರಾಸ್ತ್ತಾವಿಕ ನುಡಿಗಳನ್ನಾಡಿದರು.
ಮಹಿಳಾ ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಮ್.ಚಂದ್ರಶೇಖರ ಮಾತನಾಡಿ, ವಿದ್ಯಾರ್ಥಿನಿಯರ ಭವಿಷ್ಯದ ಪ್ರಗತಿಯಲ್ಲಿ ಕೌಶ್ಯಲ್ಯ ಬಹಳ ಮುಖ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವಿಯ ವಾಣಿಜ್ಯ ಮತ್ತು ವ್ಯವಹಾರ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ. ಮಲ್ಲಿಕಾರ್ಜುನ ಎನ್. ಎಲ್. ವಹಿಸಿದ್ದರು.
ಬೀದರ ಪ್ರಾದೇಶಿಕ ಕೇಂದ್ರ ನಿರ್ದೇಶಕ ಪ್ರೊ. ಡಿ.ಎಂ.ಮದರಿ, ಸಹಾಯಕ ಪ್ರಾಧ್ಯಾಪಕ ಡಾ. ಸುರೇಶ ಕೆ.ಪಿ, ವಿಭಾಗದ ಪ್ರಾಧ್ಯಾಪಕಿ ಪ್ರೊ. ಅನಿತಾ ನಾಟೆಕರ, ಡಾ. ಸಿ.ಎಮ್. ಮಠಪತಿ, ಡಾ. ಗಣೇಶ ಎಸ್.ಆರ್. ವಿವಿಧ ವಿಭಾಗದ ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು, ಸಂಶೋಧನಾ ವಿದ್ಯಾರ್ಥಿನಿಯರು, ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಅತಿಥಿ ಉಪನ್ಯಾಸಕಿ ಡಾ. ಕೀರ್ತಿ ಹೊನವಾಡ ಸ್ವಾಗತಿಸಿದರು. ಗಿರಿಜಾ ನವಳ್ಳಿಮಠ ನಿರೂಪಿಸಿದರು.