ಉತ್ತಮ ಫಲಿತಾಂಶ

ಅಳ್ನಾವರ,ಮೇ16: ತಾಲೂಕಿನ ಬೆಣಚಿ ಸರಕಾರಿ ಪ್ರೌಡ ಶಾಲೆಯ ವಿದ್ಯಾರ್ಥಿನಿ ಸ್ವಾತಿ ಮಹಾದೇವ ಗೋದಗೇರಿಕರ ಶೇ92.16 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ನಂತರ ಕ್ರಮವಾಗಿ ತನುಜಾ ದುಸಗೇಕರ ಶೇ 86.08 ಹಾಗೂ ಭೂಮಿಕಾ ದಾಸ್ತಿಕೊಪ್ಪ ಶೇ 85.28 ಅಂಕ ಪಡೆದುಕೊಂಡು ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದಿದ್ದಾರೆ. ಶಾಲೆಯ ಒಟ್ಟಾರೆ ಫಲಿತಾಂಶ ಶೇ 93.33 ರಷ್ಟಾಗಿದೆ ಎಂದು ಮುಖ್ಯೋಪಾಧ್ಯಾಯರಾದ ಕೆ.ಎ.ಶೇಖ ತಿಳಿಸಿದ್ದಾರೆ.