ಉತ್ತಮ ಫಲಿತಾಂಶ


ಬ್ಯಾಡಗಿ,ಮೇ.16: ಸಿಬಿಎಸ್‍ಸಿ 10 ನೇ ತರಗತಿ ಫಲಿತಾಂಶ ಪ್ರಕಟವಾಗಿದ್ದು ಸ್ಥಳೀಯ ಆದರ್ಶ ಸೆಂಟ್ರಲ್ ಸ್ಕೂಲ್ ಶೇ.100 ರಷ್ಟು ಫಲಿತಾಂಶ ಪಡೆಯುವ ಮೂಲಕ ಸತತ 5 ನೇ ವರ್ಷ ಶೇ.100 ರಷ್ಟು ಪಡೆದಿದೆ.
ಪರೀಕ್ಷೆ ಬರೆದ 49 ರಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ 7 ವಿದ್ಯಾರ್ಥಿಗಳು, ಪ್ರಥಮ ಶ್ರೇಣಿಯಲ್ಲಿ 25 ಹಾಗೂ ದ್ವಿತೀಯ ಶ್ರೇಣಿಯಲ್ಲಿ 17 ವಿದ್ಯಾರ್ಥಿಗಳು ತೇರ್ಗಡೆಯಾಗಿರುತ್ತಾರೆ. ಶೇ.90 ರಷ್ಟು ಅಂಕ ಪಡೆದ ವಿನಾಯಕ ವನರಾಜ ಅಕ್ಕಿ ಶಾಲೆಗೆ ಪ್ರಥಮ, ಶೇ.88.2 ರಷ್ಟು ಅಂಕ ಪಡೆದ ಕಾರ್ತಿಕ ಜಲಗೇರಿ ದ್ವಿತೀಯ, ಶೇ.87 ರಷ್ಟು ಅಂಕ ಪಡೆದ ತನುಶ್ರೀ ಶಿವಕುಮಾರ ಕರಿಗಾರ ತೃತೀಯ ಸ್ಥಾನ ಪಡೆದಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ಆದರ್ಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸೇರಿದಂತೆ ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗ ಅಭಿನಂದಿಸಿದೆ.