ಉತ್ತಮ ಪ್ರಜಾಕೀಯ ಪಕ್ಷದಿಂದ‌ ಸ್ಪರ್ಧೆ: ಚೇತನ್ ಕುಮಾರ್

ದಾವಣಗೆರೆ.ಮಾ.೧೨; 2023ರ ವಿಧಾನಸಭಾ ಚುನಾವಣೆಯಲ್ಲಿ ಮಾಯಕೊಂಡ ಎಸ್.ಪಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ಜನರ ಪಕ್ಷವಾದ ಉತ್ತಮ ಪ್ರಜಾಕೀಯ ಪಕ್ಷದಿಂದ ಸ್ಪರ್ಧಿಸುತ್ತಿದ್ದು, ಪ್ರಜಾಕೀಯ ಪಕ್ಷದ ಹೈಕಮಾಂಡ್ ಜನರೇ ಆಗಿದ್ದು, ಜನರ ನಿರ್ಧಾರದಂತೆ ನನಗೆ ಟಿಕೆಟ್‌ ನಿಗಧಿಯಾಗಿದೆ ಎಂದು ಚೇತನ್ ಕುಮಾರ್ ಅರೇಹಳ್ಳಿ ತಿಳಿಸಿದರು.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಜಾಕೀಯ ಪಕ್ಷದ ತತ್ವ ಸಿದ್ಧಾಂತದ ಪ್ರಕಾರ ಶಾಸಕನ ಹುದ್ದೆಗೆ ಆಯ್ಕೆಯಾಗ ಬಯಸುವ ಆಕಾಂಕ್ಷಿಯು ನಾನಾಗಿದ್ದು, ಜನರ ಸಂಪರ್ಕದಲ್ಲಿದ್ದು, ಅವರಿಂದ ಶಿಫಾರಸ್ಸು ಪತ್ರಕ್ಕೆ ಸಹಿ ಪಡೆದು ಪಕ್ಷದ ಹೈಕಮಾಂಡ್ ಆಗಿರುವ ಜನರಿಂದ ಶಿಫಾರಸ್ಸು ಪತ್ರಕ್ಕೆ ಸಹಿ ಪಡೆಯಲು ಮಾಯಕೊಂಡ ಎಸ್‌.ಪಿ. ಮೀಸಲು ಕ್ಷೇತ್ರದ ಗ್ರಾಮಗಳಾದ ಚಿರಡೋಣಿ, ಬಸವಾಪಟ್ಟಣ, ಸಾಗರಪೇಟೆ, ದಾಗಿನಕಟ್ಟೆ, ದೊಡ್ಡಘಟ್ಟ, ಅರೇಹಳ್ಳಿ, ಗುದುರೆ, ತ್ಯಾವಣಿಗೆ ಸೇರಿದಂತೆ ಇನ್ನೂ ಹಲವು ಗ್ರಾಮಗಳ ಜನರಿಗೆ ಉತ್ತಮ ಪ್ರಜಾಕೀಯ ಪಕ್ಷದ ಮೂಲತತ್ವ ಹಾಗೂ ಮತದಾನದ ಮಹತ್ವ ತಿಳಿಸಲಾಗಿದೆ ಎಂದು ಹೇಳಿದರು.ಮತದಾರರ ಜವಾಬ್ದಾರಿ, ಪ್ರಜೆಗಳೇ ಹೈಕಮಾಂಡ್, ಶಾಸಕನ ಹುದ್ದೆಗೆ ಆಯ್ಕೆಯಾಗುವ ರೀತಿ ವಿಚಾರಗಳನ್ನು ಜನರಿಗೆ ತಿಳಿಸುವ ಮೂಲಕ ಶಿಫಾರಸ್ಸು ಪತ್ರಕ್ಕೆ ಸಹಿ ಪಡೆದು ಅಪ್ಲೋಡ್ ಮಾಡಲಾಗಿತ್ತು. ಮೊದಲ ಸುತ್ತಿನ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ನನ್ನನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.ಪ್ರಜಾಕೀಯ ಪಕ್ಷದಲ್ಲಿ ಜನರ ತೀರ್ಮಾನವೇ ಅಂತಿಮ. ಇಲ್ಲಿ ನಾನೊಬ್ಬ ಕೆಲಸಗಾರ ಮಾತ್ರ ಪ್ರಜಾಕೀಯ ಪಕ್ಷದಲ್ಲಿ ಯಾವುದೇ ಆಶ್ವಾಸನೆಗಳನ್ನು ನೀಡದೆ ಜನ ಅಸಾಮಾನ್ಯರು ಹೇಳಿದಂತೆ ಕಾರ್ಯನಿರ್ವಹಿಸುವ ಒಬ್ಬ ಕಾರ್ಮಿಕ ಮಾತ್ರ ನಾನು, ನಮ್ಮ ಸಾಮಾಜಿಕ ವ್ಯವಸ್ಥೆ ತೀರ ಹದಗೆಟ್ಟಿದ್ದು ಎಂದು ಹೇಳಿದರು.ಜಾತಿ, ಧರ್ಮದ ಆಧಾರದ ಮೇಲೆ ಹಾಗೂ ಹೆಂಡ, ಕುಕ್ಕರ್, ಹಣಕ್ಕೆ ಮತ ನೀಡುವ ಪರಂಪರೆ ಮುಂದುವರೆಯುತ್ತಿದ್ದು, ಇದು ನಮ್ಮನ್ನು ಸೇರಿದಂತೆ ಮುಂದಿನ ಪೀಳಿಗೆಗೆ ಮಾರಕ ಬೆಳವಣಿಗೆಯಾಗಿದೆ, ನಮಗೆ ಮುಖ್ಯವಾಗಿ ನಮ್ಮ ತೆರಿಗೆ ಹಣ ಲೆಕ್ಕ ಪ್ರತಿಯೊಬ್ಬರಿಗೂ ದೊರೆಯುವ ಒಂದು ಅದ್ಭುತವಾದ ವ್ಯವಸ್ಥೆ ನಿರ್ಮಾಣವಾಗಬೇಕು. ಮತಗಳಿಕೆಗೆ ವಿಷಬೀಜ ಬಿತ್ತದಂತ ಸಮಸಮಾಜ ನಿರ್ಮಾಣದ ಅವಶ್ಯಕತೆ ಇದೆ ಎಂದರು.