ಸಂಜೆವಾಣಿ ವಾರ್ತೆ
ಸಂಡೂರು :ಜು:7 – ಹಳೆ ದರೋಜಿ ಗ್ರಾಮದ ಹೊರ ಹೊಲಯದ ಬೆಟ್ಟದಲಿ 500 ಸಸಿಗಳನ್ನು ನೆಡಲು ಉದ್ಯೋಗ ಖಾತ್ರಿಯ ಕಾರ್ಮಿಕರಿದಂದ ಗುಂಡಿಗಳನ್ನು ತೆಗೆಸಲಾಗಿದೆ. ಉಳಿದ 1200 ಸಸಿಗಳನ್ನು ಹೊಸ ದರೋಜಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಸಸಿಗಳನ್ನು ನೆಡವುವುದರ ಜೊತೆಗೆಯಲ್ಲಿ ಸಸಿಗಳನ್ನು ಪೊಷಣೆ ಮಡಿ ಉತ್ತಮ ಪರಿಸರ ನಿರ್ಮಿಸಲಾಗುವುದು ಎಂದು ಹೊಸ ದರೋಜಿ ಗ್ರಾ.ಪಂ. ಅಧ್ಯಕ್ಷ ಎಮ್ಮೆ ಗಂಗಣ್ಣನವರು ತಿಳಿಸಿದರು. ಸಮೀಪದ ಹೊಸ ದರೋಜಿ ಗ್ರಾಮದಲ್ಲಿ ವಿಶ್ವ ಪರಿಸರ ದಿನಚರಣೆ ಅಂಗವಾಗಿ ಗ್ರಾಮೀಣ ಅಭಿವೃದ್ದಿ ಅಧಿಕಾರಿ ಪಂಚಾಯತ್ ರಾಜ್ಯ ಸಂಡೂರು ತಾ. ಪಂ. ಹಾಗೂ ಹೊಸ ದರೊಜಿ ಗ್ರಾ.ಪಂ. ಸಹಯೋಗದಲಲಿ ಮಹಾತ್ಮ ಗಾಂಧಿಜಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ಸಂದರ್ಭದಲ್ಲಿ ಪಂಚಾಯತಿ ಅಭಿವೃದ್ದಿ ಆಧಿಕಾರಿ ಪ್ರಭುವನ ಗೌಡ ಕಾರ್ಯದರ್ಶಿ ಜೆ.ಕಲ್ಲಪ್ಪ ಸಿಬ್ಬಂದಿಗಳಾದ ವೆಂಕಪ್ಪ ರಘುನಾಥರಾವ್ ಮುಖಂಡರುಗಳಾದ ಹಂಪಣ್ಣ ಹನುಮಯ್ಯ ¸ಓಬಳೇಶ್ ಇತರರು ಉಪಸ್ಥಿತರಿದ್ದರು.