ಉತ್ತಮ ಪರಿಸರದಿಂದ ಆರೋಗ್ಯ – ವಿಶ್ವಮೂರ್ತಿ

ಸಂಜೆವಾಣಿ ವಾರ್ತೆ     
ಕೂಡ್ಲಿಗಿ. ಸೆ. 23 :- ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ನಮ್ಮ ಸುತ್ತಮುತ್ತಲಿನ ಉತ್ತಮ ಪರಿಸರದ ಗಿಡಮರಗಳೇ ಹೊರತು ಬೇರೇನೂ ಅಲ್ಲಾ ಎಂದು ಸಸ್ಯ ಸಂಕುಲಗಳ ಬಗ್ಗೆ ಸಂಶೋಧನಾ ನಿರತ ಜಿ.ವಿಶ್ವಮೂರ್ತಿ ತಿಳಿಸಿದರು  
ಅವರು ಬುಧವಾರ ಸಂಜೆ ಪಟ್ಟಣದ ಮಹಾತ್ಮ ಗಾಂಧೀಜಿ ಚಿತಾಭಸ್ಮ ಹುತಾತ್ಮರ ಸ್ಮಾರಕ ಆವರಣದಲ್ಲಿ ಗಾಂಧಿ ಸ್ಮಾರಕ ಸಮಿತಿ, ಮೈದಾನ ಗೆಳೆಯರ ಬಳಗ ಮತ್ತು ಜೆಸಿಐ ಕೂಡ್ಲಿಗಿ ಗೋಲ್ಡನ್ ರವರ ನೇತೃತ್ವದಲ್ಲಿ ಜರಗುವ ಚಿಂತನ ಚೇತನ ಸರಣಿಯ ಐದನೇ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿ ಔಷಧಿ ಸಸ್ಯಗಳು, ನಮ್ಮ ಆರೋಗ್ಯ ಮತ್ತು ಪಾರಂಪರಿಕ ಜ್ಞಾನ ಕುರಿತಾದ ಮಹತ್ವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತ ಮನುಷ್ಯನ ಆರೋಗ್ಯದಲ್ಲಿ  ಏರು ಪೇರಾದರೆ ನಮ್ಮ ಸುತ್ತಮುತ್ತಲ ಹಿತ್ತಲಗಿಡದಮದ್ದುಗಳೇ ನಮಗೆ ರಾಮಬಾಣವಾಗಿವೆ ಎಂದರು.                                                                          ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸಿಗುವ ಲಕ್ಕಿ ಸೊಪ್ಪು ಅದನ್ನು ಮಹಿಳೆಯರು ತಲೆಗೆ ಮುಡಿಯುವುದರಿಂದಾಗುವ ಉಪಯೋಗವೇನು ಆರೋಗ್ಯದದೃಷ್ಟಿಯಿಂದ ಎಷ್ಟು ಒಳ್ಳೆಯದು ಸೀತಾಫಲ ಹಣ್ಣು ಮತ್ತು ತೊಪ್ಪಲಿನ ಮಹತ್ವ ಅದರಲ್ಲಿರುವ ಯಾವ ರೋಗಕ್ಕೆ  ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಇದರಿಂದಾಗುವ ಆರೋಗ್ಯದ ಮಾಹಿತಿ ಬಗ್ಗೆ ತಿಳಿಸಿದರು ನೀರಲೇ ಹಣ್ಣು ತಿನ್ನುವುದರಿಂದ ಯಾವ ರೋಗಿ ಗುಣಮುಖವಾಗಬಲ್ಲ ಸೀತಾಫಲ ಹಣ್ಣು ಅಲ್ಲ ಅದು ಶೀತದ ಸಮಯದಲ್ಲಿ ಸಿಗುವ ಹಣ್ಣಾಗಿದ್ದರಿಂದ ಅದು  ಶೀತಫಲ ಎಂದು ಕರೆಯಬೇಕು ನಾವು ಮನೆಯಲ್ಲಿ ಮುದ್ದೆ ತೊಟ್ಟುವ ಕೋಲಿನ ಕಟ್ಟಿಗೆಯಾದ ಇಂಗಳಾರದ ಕಟ್ಟಿಗೆಯಲ್ಲೂ ಜ್ವರ ನಿಯಂತ್ರಣ ಮಾಡುವ ಶಕ್ತಿ ಇದೆ ಮುತ್ತದೆಲೆ (ಪತ್ರವಳಿ )ಎಲೆಯಲ್ಲಿ ನಾವು ತಯಾರಿಸುವ ಲೋಹಪಾತ್ರೆಯ ವಿಷವನ್ನು ಹೀರುವ ಗುಣ ಆ ಎಲೆಗಳಿಗಿದ್ದು ನಮ್ಮ ಆರೋಗ್ಯಕ್ಕೆ ಒಳ್ಳೆಯ ಆಹಾರ ಸೇವನೆಗೆ ಮುತ್ತದೆಲೆಯ ಮಹತ್ವವನ್ನು ವಿಶ್ವಮೂರ್ತಿ ಬಿಡಿಸಿಟ್ಟರು.  ಸುತ್ತಲಿನ ಐದಾರು ಗಿಡಗಳು ನಮ್ಮ ಆರೋಗ್ಯ ಕಾಪಾಡುತ್ತವೆ ನಮ್ಮ ಅಂಗಳದಲ್ಲಿ ಗಿಡಮರ ಬೆಳೆಸಿ ಆರೋಗ್ಯ ಕಾಪಾಡಿಕೊಳ್ಳಬೇಕಿದೆ ನಾವು ಬಣ್ಣದಓಕುಳಿ ಯಾವ ಬಣ್ಣದ್ದಿರಬೇಕೆಂದು ಪಾರಂಪರಿಕ ಬಣ್ಣದ ಮಹತ್ವವನ್ನು ತಿಳಿಸಿದರು. ಮುಂದಿನ ದಿನಗಳಲ್ಲಿ ಔಷಧಿ ಸಸ್ಯಗಳೆಡೆಗೆ ನಮ್ಮ ನಡೆಯಾಗಬೇಕೆಂದರು. ಪ್ರತಿ ಸಸ್ಯಗಳ ಔಷಧಿ ಅರಿವು  ನಮಗೆಲ್ಲಾ ತಿಳಿಯಬೇಕಿದೆ ಎಂದು ಔಷಧಿ ಸಸ್ಯಗಳು ಪರಿಸರ ಪಾರಂಪರಿಕ ಜ್ಞಾನದ ಮಹತ್ವವನ್ನು ವಿಶ್ವಮೂರ್ತಿ ತಿಳಿಸಿದರು.     
ಉಪನ್ಯಾಸ ನೀಡಿದ ವಿಶ್ವಮೂರ್ತಿ ಅವರನ್ನು ವಿಜಯಕುಮಾರ್ ಪುಸ್ತಕ ಕೊಡುವಮೂಲಕ ಅವರನ್ನು ಗೌರವಿಸಲಾಯಿತು. ಶುಶ್ರಾವ್ಯವಾಗಿ ಹಾಡಿದ ಮುದ್ದುಮಕ್ಕಳಿಗೆ ಪ್ರೋತ್ಸಾಹ ನೀಡಲಾಯಿತು. ಪ್ರತಿ ಹಂತಹಂತವಾಗಿ ಚಿಂತನ ಚೇತನ  ಕಾರ್ಯಕ್ರಮದ ಉಪನ್ಯಾಸ ಕೇಳಲು ಜನರು ಆಸಕ್ತಿ ತೋರುತ್ತಿದ್ದು ನೂರಕ್ಕೂ ಹೆಚ್ಚು ಜನತೆ ಈ ಬಾರಿ ಬಂದಿರುವ ಬಗ್ಗೆ ಜೆಸಿಐ ಮಾಜಿ ಅಧ್ಯಕ್ಷ ನಾಗರಾಜ ತಿಳಿಸಿದರು ಜೆಸಿಐ ಕೂಡ್ಲಿಗಿ ಗೋಲ್ಡನ್, ಮೈದಾನ ಗೆಳೆಯರ ಬಳಗ ಮತ್ತು ಗಾಂಧಿಸ್ಮಾರಕ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.